ಮಕ್ಕಳ ಸ್ಥೂಲಕಾಯ ನಿರ್ವಹಣೆ ಪ್ರೋಟೀನ್ ಅವಶ್ಯ

ಮಕ್ಕಳ ಆರೋಗ್ಯ ಕಾಪಾಡಲು ಪ್ರೋಟೀನ್ ಅವಶ್ಯ. ಅದರಲ್ಲೂ ಸಸ್ಯಜನ್ಯ ಪ್ರೋಟೀನ್‌ಗಳು ಹೆಚ್ಚು ಲಾಭಕರ ಎಂದು ಅಧ್ಯಯನ ವರದಿಗಳು ಹೇಳಿವೆ. ಸಸ್ಯ ಮತ್ತು ಪ್ರಾಣಿ ಎರಡರಲ್ಲೂ ಪ್ಯಾಟ್ ಪ್ರೀ ಮಾಸ್ ಇಂಡೆಕ್ಸ್ ಹೊಂದಿದೆ. ಆದರೆ, ಸಸ್ಯಜನ್ಯದಲ್ಲಿ ಇದು ಹೆಚ್ಚು ಎಂದು ಅಂತರಾಷ್ಟ್ರೀಯ ಸ್ಥೂಲಕಾಯದ ಜರ್ನಲ್ ಹೇಳಿದೆ. ಬಾಲ್ಯ ಮತ್ತು ಹರೆಯದಲ್ಲಿನ ಆಹಾರ ಅಭ್ಯಾಸಗಳು ನಂತರ ಜೀವನದಲ್ಲಿ ಒಟ್ಟು ಸ್ವಾಸ್ಥ್ಯ ಮತ್ತು ಆರೋಗ್ಯಕ್ಕೆ ಸಂಬಂಧ ಹೊಂದಿವೆ ಎಂದು ಅಧ್ಯಯನ ವರದಿ ಹೇಳಿದೆ.

ದೇಶದಲ್ಲಿ ಈಗ ಬಾಲ್ಯ ಸ್ಥೂಲಕಾಯ ಹೆಚ್ಚಾಗುತ್ತಿದೆ. ೨೦೧೮ರಲ್ಲಿ ಪ್ರಕಟಿಸಲಾದ ಅಧ್ಯಯನ ವರದಿಯಲ್ಲಿ ಭಾರತದಲ್ಲಿ ಶಾಲಾ ಮಕ್ಕಳ ಸ್ಥೂಲಕಾಯ ಶೇ. ೫.೭೪ ರಿಂದ ಶೇ. ೮.೮೨ಕ್ಕೂ ಹೆಚ್ಚಿವೆ. ಹಾಗಾಗಿ, ಮಕ್ಕಳ ತೂಕ ನಿರ್ವಹಣೆ ಅತಿ ಅವಶ್ಯ. ಮಕ್ಕಳ ಆರೋಗ್ಯ ಮತ್ತು ತೂಕ ನಿರ್ವಹಣೆಗೆ ಬಾಲ್ಯದಲ್ಲಿ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸೇವನೆ ಒಳ್ಳೆಯದು.

ಈ ಪ್ರೋಟೀನ್ ಸೇವನೆ ಬೆಳವಣಿಗೆ ಮತ್ತು ಸರಿಯಾದ ದೇಹ ಶಕ್ತಿಗಳನ್ನು ನಡೆಸಲು ಅವಶ್ಯ ಎಂದು ಅಪೊಲೋ ಆಸ್ಪತ್ರೆಯ ಪ್ರಧಾನ ವೈದ್ಯಕೀಯ ಆಹಾರ ತಜ್ಞೆ ಡಾ. ಪ್ರಿಯಾಂಕ ರೊಹ್ತಾಗಿ ಹೇಳುತ್ತಾರೆ. ತೂಕ ಇಳಿಕೆಗೆ ಮತ್ತು ಆರೋಗ್ಯಕರ ಹೃದಯಕ್ಕೆ ಪ್ರೋಟೀನ್ ಆಹಾರ ಅಗತ್ಯ ಎಂದು ಅವರು ಪ್ರತಿಪಾದಿಸುತ್ತಾರೆ. ಪ್ರೋಟೀನ್‌ಗಳು ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಕೋಶಗಳ ರಚನೆ, ಕ್ರಿಯೆ ನಿರ್ವಹಿಸುವಲ್ಲಿ ದೇಹದ ಕೋಶವರ್ಗ ಮತ್ತು ಅಂಗಾಂಗ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ಹೊಂದಿದೆ. ಬಾಲ್ಯದ ಸ್ಥಿತಿಯಲ್ಲಿ ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿ ಬೇಗ ಆಗುವುದರಿಂದ ಮಧ್ಯ ಬಾಲ್ಯ ಮತ್ತು ಹರೆಯದಲ್ಲಿ ಮಕ್ಕಳಿಗೆ ಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್‌ಗಳ ಅಗತ್ಯವಿದೆ.

ಹಾಗಾಗಿ, ಧಾನ್ಯಗಳ ಕಾಳುಗಳ ಮತ್ತು ದ್ವಿದಳ ಮಿಶ್ರಣದ ಪ್ರೋಟೀನ್ ಶಿಫಾರಸು ಮಾಡುವ ಡಾ. ಪ್ರಿಯಾಂಕ ರೋಹ್ತಗಿ ಮಕ್ಕಳಿಗೆ ಸಹಜ ಆಹಾರದಲ್ಲಿ ಸೂಕ್ತ ಪ್ರಮಾಣದ ಪ್ರೋಟೀನ್ ಸಿಗದಿದ್ದರೆ ಪೋಷಕರು ಪೂರಕಗಳನ್ನು ಆರಿಸಿಕೊಳ್ಳಬಹುದು. ಆದರೆ, ಪ್ರೋಟೀನ್ ಪೂರಕಗಳ ಬಗ್ಗೆ ತಜ್ಞರ ಸಲಹೆ ಅಗತ್ಯ ಎಂದು ಅವರು ಹೇಳುತ್ತಾರೆ.

Leave a Comment