ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತ ರಾಗ ಬದಲಿಸಿದ ವೈದ್ಯರು

 

ಗೋರಖ್‌ಪುರ(ಉ.ಪ್ರ), ಆ.೧೨: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್‌ಪುರದಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಸತ್ತ ಮಕ್ಕಳ ಸಂಖ್ಯೆ ೩೨ಕ್ಕೇರಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸಲು ಕಾರಣವೇನು ಎಂದು ಸರ್ಕಾರವಾಗಲಿ, ಸ್ಥಳೀಯ ಆಡಳಿತವಾಗಲಿ ಅಥವಾ ವೈದ್ಯರಾಗಲಿ ಸ್ಪಷ್ಟ ಮಾಹಿತಿ ನೀಡಿಲ್ಲ.
“ಆಮ್ಲಜನಕ ಸರಬರಾಜು ಮಾಡುವವರಿಗೆ ಹಣ ಪಾವತಿಸದ ಕಾರಣ ಅವರು ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಮಕ್ಕಳಿಗೆ ಆಮ್ಲಜನಕ ನೀಡಲು ಕಾರಣವೇನು ? ಆಮ್ಲಜನಕದ ಕೊರತೆ ಏಕಾಯಿತು ? ಎಂಬ ಪ್ರಶ್ನೆಗಳು ಉದ್ಭವಿಸುತ್ತಲೇ ವರಸೆ ಬದಲಿಸಿರುವ ಅಲ್ಲಿನ ಜಿಲ್ಲಾಧಿಕಾರಿ, “ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ. ಸಾವಿಗೆ ಬೇರೆಯದೇ ವೈದ್ಯಕೀಯ ಕಾರಣವಿದೆ’ ಎನ್ನುವ ಮೂಲಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಾರೆ.
ಈ ನಡುವೆ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿಯಲು ತನಿಖಾ ಸಮಿತಿ ರಚಿಸಿರುವ ಉತ್ತರಪ್ರದೇಶ ಸರ್ಕಾರ, ಶನಿವಾರ ಸಂಜೆಯೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ. ಘಟನೆ ಬಗ್ಗೆ ನಿಗಾ ವಹಿಸಲು ಇಬ್ಬರು ಸಚಿವರನ್ನು ನಿಯೋಜಿಸಲಾಗಿದೆ.
ಆರೋಗ್ಯ ಸಚಿವ ಸಿದ್ದಾರ್ಥನಾಥ್ ಸಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಶುತೋಷ್ ಟಂಡನ್ ಅವರನ್ನು ಕಳುಹಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್, ಘಟನೆಗೆ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಲಾಗಿದೆ.
ತುರ್ತು ಸಭೆ: ಸ್ವಕ್ಷೇತ್ರದಲ್ಲಿ ಮಕ್ಕಳ ಸಾವು ಸಂಭವಿಸಿದ್ದರಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಶುತೋಷ್ ಟಂಡನ್ ಅವರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಆಮ್ಲಜನಕ ಪೂರೈಸುತ್ತಿದ್ದ ಕಂಪನಿಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

೫ ದಿನಗಳಲ್ಲಿ ೬೦ ಮಕ್ಕಳ ಸಾವು
ಕಳೆದ ೫ ದಿನಗಳಲ್ಲಿ ಇಲ್ಲಿನ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ೬೦ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಅದರಲ್ಲೂ ಕಳೆದ ೪೮ ಗಂಟೆಗಳಲ್ಲಿ ೩೦ ಮಕ್ಕಳು ಮೃತಪಟ್ಟಿವೆ. ಇದರಲ್ಲಿ ಬಹುತೇಕ ನವಜಾತ ಶಿಶುಗಳಾಗಿವೆ.
ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು ಸಾವನ್ನಪ್ಪಿರುವುದರ ಕುರಿತು ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಆದರೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಮಕ್ಕಳು ಸಾವನ್ನಪ್ಪಿವೆ ಎಂಬ ವರದಿಯನ್ನ ಸರ್ಕಾರ ತಳ್ಳಿಹಾಕಿದೆ.

ಮಗನನ್ನು ಕಳೆದಕೊಂಡ ತಂದೆ
ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ದುರಂತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ರೋದನ ಮುಗಿಲು ಮುಟ್ಟಿತ್ತು. ಔಷಧಿ ಅಂಗಡಿಗೆ ಹೋಗಿ ಔಷಧಿ ತೆಗೆದುಕೊಂಡು ಬರುವಷ್ಟರದಲ್ಲಿ ೧೦ ವರ್ಷದ ಮಗನನ್ನು ಕಳೆದುಕೊಂಡ ದೀಪ್ ಚಂದ್ ಅವರು ಆಸ್ಪತ್ರೆಯ ಆವರಣದಲ್ಲಿ ಕುಳಿತು ರೋದಿಸುತ್ತಿದ್ದ ದೃಶ್ಯ ಎಂತಹವರ ಕಣ್ಣಲ್ಲೂ ನೀರು ತರಿಸುವಂತಿತ್ತು.
ಅನಾರೋಗ್ಯ ಪೀಡಿತನಾದ ತನ್ನ ೧೦ ವರ್ಷದ ಮಗನನ್ನು ದೀಪ್ ಚಂದ್ ಅವರು ಇದೇ ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರು ಔಷಧಿ ಬರೆದು ಅದನ್ನು ತರುವಂತೆ ದೀಪ್ ಚಂದ್‌ಗೆ ತಿಳಿಸಿದ್ದಾರೆ. ಆ ಚೀಟಿಯನ್ನು ಹಿಡಿದುಕೊಂಡು ಒಂದೂವರೆ ಗಂಟೆಗಳ ಕಾಲ ಅಲೆದಾಡಿ ಆಸ್ಪತ್ರೆಗೆ ಬಂದಾಗ ಮಗ ಸಾವನ್ನಪ್ಪಿದ್ದ.

ಗಣ್ಯರ ಕಂಬನಿ: ದುರಂತದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.
ಮಕ್ಕಳು ಸಾವನ್ನಪಿರುವದಕ್ಕೆ ನನಗೆ ತುಂಬಾ ನೋವಾಗಿದೆ. ಸಂತ್ರಸ್ತರ ಕುಟುಂಬಕ್ಕೆ ನನ್ನ ವಿಷಾದವಿದೆ. ಇದಕ್ಕೆ ಬಿಜೆಪಿ ಸರ್ಕರವೇ ಹೊಣೆ. ಈ ದುರಂತಕ್ಕೆ ಕಾರಣವಾದವರನ್ನ ಶಿಕ್ಷಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಗೋರಖ್‌ಪುರ(ಉ.ಪ್ರ), ಆ.೧೨: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್‌ಪುರದಲ್ಲಿರುವ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಸತ್ತ ಮಕ್ಕಳ ಸಂಖ್ಯೆ ೩೨ಕ್ಕೇರಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸಲು ಕಾರಣವೇನು ಎಂದು ಸರ್ಕಾರವಾಗಲಿ, ಸ್ಥಳೀಯ ಆಡಳಿತವಾಗಲಿ ಅಥವಾ ವೈದ್ಯರಾಗಲಿ ಸ್ಪಷ್ಟ ಮಾಹಿತಿ ನೀಡಿಲ್ಲ.
“ಆಮ್ಲಜನಕ ಸರಬರಾಜು ಮಾಡುವವರಿಗೆ ಹಣ ಪಾವತಿಸದ ಕಾರಣ ಅವರು ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಮಕ್ಕಳಿಗೆ ಆಮ್ಲಜನಕ ನೀಡಲು ಕಾರಣವೇನು ? ಆಮ್ಲಜನಕದ ಕೊರತೆ ಏಕಾಯಿತು ? ಎಂಬ ಪ್ರಶ್ನೆಗಳು ಉದ್ಭವಿಸುತ್ತಲೇ ವರಸೆ ಬದಲಿಸಿರುವ ಅಲ್ಲಿನ ಜಿಲ್ಲಾಧಿಕಾರಿ, “ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ. ಸಾವಿಗೆ ಬೇರೆಯದೇ ವೈದ್ಯಕೀಯ ಕಾರಣವಿದೆ’ ಎನ್ನುವ ಮೂಲಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಾರೆ.
ಈ ನಡುವೆ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿಯಲು ತನಿಖಾ ಸಮಿತಿ ರಚಿಸಿರುವ ಉತ್ತರಪ್ರದೇಶ ಸರ್ಕಾರ, ಶನಿವಾರ ಸಂಜೆಯೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್, ಘಟನೆಗೆ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಲಾಗಿದೆ.
ತುರ್ತು ಸಭೆ: ಸ್ವಕ್ಷೇತ್ರದಲ್ಲಿ ಮಕ್ಕಳ ಸಾವು ಸಂಭವಿಸಿದ್ದರಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಶುತೋಷ್ ಟಂಡನ್ ಅವರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

Leave a Comment