ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಮನವಿ

ಜಗಳೂರು.ಡಿ.5; ಮುಸ್ಲಿಂ ಸಮಾಜ ಬಾಂಧವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕೆಂದು ಕರೆ ನೀಡಿದರು. ಪಟ್ಟಣದ ಮುಸ್ಲಿಂ ಕಾಲೋನಿಯಲ್ಲಿ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಮತ್ತು ಮುಸ್ಲಿಂ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಮೊಹಬ್ಬತೆ ಮುಸ್ತಾಫ ಈದ್ ಮಿಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಮುಸ್ಲಿಂ ಹಾಗೂ ಹಿಂದೂ ಸಮಾಜ ಬಾಂಧವರು ಹಿಂದಿನಿಂದಲೂ ಸಹೋದರತೆ ಭಾವನೆಯಿಂದ ಒಗ್ಗಟ್ಟಿನಿಂದಿದ್ದೇವೆ.ಮುಂಬರುವ ದಿನಗಳಲ್ಲಿ ಇದೇ ರೀತಿ ಸೌಹಾರ್ದ ಭಾವನೆಯಿಂದ ಜೊತೆಯಲ್ಲಿರುತ್ತೇವೆ.ತಾಲ್ಲೂಕಿನಲ್ಲಿ ಮುಸ್ಲಿಂ ಸಮಾಜದವರ ಭಾವನೆ,ಆಶಯಗಳಿಗೆ ನೋವು ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಪಟ್ಟಣದ ಮಸೀದಿಗಳಿಗೆ, ಈದ್ಗಾ ಮೈದಾನ ಅಭಿವೃದ್ಧಿಗೆ ಹಾಗೂ ಎಲ್ಲಾ ಹಳ್ಳಿಗಳಲ್ಲಿರುವ ಮಸೀದಿಗಳ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಸಾಕಷ್ಟು ಅನುದಾನ ನೀಡಿದ್ದೇನೆ,ಮುಂದಿನ ದಿನಗಳಲ್ಲೂ ನೀಡಲಾಗುವುದು,ಅಲ್ಲದೇ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸ ಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಎಸ್ಸಿ,ಎಸ್ಟಿ, ಜಾಗೃತಿ ಸಮಿತಿ ಸದಸ್ಯ ಪಿ.ಎಸ್.ಅರವಿಂದನ್ ಮಾತನಾಡಿ  ದೇಶದ ಯುವ ಶಕ್ತಿಯಲ್ಲಿ ಮೌಲ್ಯಗಳು ಕುಸಿಯುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.ಯುವಕರು ದುಶ್ಚಟ,ದುರಾಭ್ಯಾಸಗಳಿಗೆ ತುತ್ತಾಗಿ ಜೀವನದಲ್ಲಿ ತಪ್ಪುದಾರಿ ಹಿಡಿಯುತ್ತಿದ್ದಾರೆ.ಅಲ್ಲದೇ ಗುರು ಹಿರಿಯರಿಗೆ,ತಂದೆ ತಾಯಿಗಳಿಗೆ ಗೌರವ ನೀಡದೇ, ಮಾನವೀಯ ಮೌಲ್ಯಗಳಿಂದ ಹಿಮ್ಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಶಾಸಕ ರಾಮಚಂದ್ರ,ಪಟ್ಟಣ ಪಂಚಾಯಿತಿ ಸದಸ್ಯರುಗಳು , ಹಾಗೂ ಮುಖ್ಯ ಅತಿಥಿಗಳನ್ನು ಸನ್ಮಾಸಿ ಗೌರವಿಸಿದರು.

ಪ.ಪಂ.ಸದಸ್ಯರಾದ ಷಕೀಲ್ ಅಹಮದ್,ಆರ್.ತಿಪ್ಪೇಸ್ವಾಮಿ, ಮಂಜುನಾಥ್, ರವಿ,ರಮೇಶ್,ಮಹಮದ್ ಆಲಿ,  ಇಮಾಂಶಾಲೆ ಅಧ್ಯಕ್ಷರಾದ ಹುಸೇನ್ ಮಿಯ್ಯ ಮುಖಂಡರಾದ ಒಬಳೇಶ್,ಹನುಮಂತಪ್ಪ,ಮಂಜಣ್ಣ,ಕೌಸರ್,  ಯೂಸುಫ್, ಪಿಂಜಾರ್ ಸಂಘದ ಅಧ್ಯಕ್ಷ ಮಹಮದ್,ಸುನ್ನಿ ಸ್ಟೂಡೆಂಟ್ ಫೆಡರೇಶನ್ ರಾಜ್ಯ,ಜಿಲ್ಲಾ ಹಂತದ ಪದಾಧಿಕಾರಿಗಳು ಹಾಜರಿದ್ದರು.

Leave a Comment