ಮಕ್ಕಳ ರಾಮರಾಜ್ಯ

ರಾಮರಾಜ್ಯ ಚಿತ್ರದ ಮೂಲಕ ನಟ ಪ್ರೇಮ್ ಪುತ್ರ ಏಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪ್ಪನ ದಾದಿ ತುಳಿಯಲು ಮುಂದಾಗಿದ್ದಾರೆ. ಏಕಾಂತ್ ಚಿತ್ರಕ್ಕೆ ಸಂಬಂಧಿಸಿದಂತೆ ತರಬೇತಿ ಪಡೆದಿದ್ದು ಸಾಹಸ ಸನ್ನಿವೇಶಗಳಲ್ಲಿ ಹಿರಿಯರನ್ನೂ ಮೀರಿಸುವಂತೆ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಬೆಳವ ಸರಿ ಮೊಳಕೆಯಲ್ಲಿಯೇ ಎನ್ನುವುದನ್ನು ನಿರೂಪಿಸಿದ್ದಾರೆ.

ನೀಲ್ ಕಮಲ್ ನಿರ್ದೇಶನ ಮಾಡುತ್ತಿರುವ ’ರಾಮರಾಜ್ಯ ಚಿತ್ರದಲ್ಲಿ ಏಕಾಂತ್, ಶೋಯಬ್,ಹೇಮಂತ್ ಹಾಗು ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ramarajya_165ಪ್ರಜೆಗಳಿಗೂ ಪ್ರಭುಗಳಿಗೆ ಒಂದೇ ರೀತಿಯ ಕಾನೂನು,ನ್ಯಾಯ ಇರಬೇಕು. ಅದು ಬೇರೆ ಬೇರೆ  ಇರಬಾರದು, ನ್ಯಾಯ, ನೀತಿ, ಧರ್ಮ ಗಾಂಧೀಜಿ ಅವರ ಕನಸಾಗಿತ್ತು. ಈ ಮೂಲ ಮಂತ್ರವನ್ನು ಮಕ್ಕಳು ಹೇಗೆ ಕಾಪಾಡುತ್ತಾರೆ ಎನ್ನುವ ಸುತ್ತಾ ಚಿತ್ರದ ಕಥೆ ಸಾಗಿದೆ ಎಂದು ಮಾತಿಗಿಳಿದರು ನಿರ್ದೇಶಕ ನೀಲ್ ಕಮಲ್. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎ.ಟಿ ರವೀಶ್ ಸಂಗೀತ ನೀಡಿದ್ದಾರೆ.ಸೆಪ್ಟಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಮಕ್ಕಳ ಮೂಲಕ ಸಂದೇಶ ಸಾರುವ ಪ್ರಯತ್ನ ಮಾಡಿದ್ದೇವೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ಚಿತ್ರಕ್ಕೆ ಶಂಕರೇಗೌಡ ಬಂಡವಾಳ ಹಾಕಿದ್ದು ಆಶ್ವಿನಿಗೌಡ,ಯತಿರಾಜ್, ಡಾ. ನಾಗೇಂದ್ರ ಪ್ರಸಾದ್ ಮತ್ತಿತರು ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ಕಳೆದವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವಿತ್ತು. ನಟ ಪ್ರೇಮ್, ಪುತ್ರ ಏಕಾಂತ್ ಹಲವು ಸಾಹಸ ಸನ್ನಿವೇಶಗಳನ್ನು ಸ್ವಯಂ ಆಸಕ್ತಿಯಿಂದ ನಿರ್ವಹಿಸಿದ್ದಾನೆ. ಆತನ ಕಲೆ ನೋಡಿ ನಮಗೆ ಆಶ್ಚರ್ಯವಾಯಿತು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಜೊತೆಗೆ  ಇನ್ನೂ ಮೂವರು ಹುಡುಗರಿದ್ದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದರು.

Leave a Comment