ಮಕ್ಕಳ ಮುಖದಲ್ಲಿ ಸುಂದರ ನಗು ನೋಡುವುದೆ ಲಯನ್ಸ್ ಸಂಸ್ಥೆಯ ಧ್ಯೇಯ: ಮೋನಿಕಾ

ಬಳ್ಳಾರಿ, ಫೆ.24- ಮಕ್ಕಳ ಮುಖದಲ್ಲಿ ಸುಂದರ ನಗು ನೋಡುವುದೆ ಲಯನ್ಸ್ ಸಂಸ್ಥೆಯ ಧ್ಯೇಯವಾಗಿದೆಂದು ಲಯನ್ಸ್ ಕ್ಲಬ್‍ನ ಮೋನಿಕಾ ಪ್ರಶಾಂತ್ ಸಾವಂತ್ ಹೇಳಿದರು

ಅವರಿಂದು ನಗರದ ಲಯನ್ಸ್ ಸೇವಾ ಸದನ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಆಫ್ ಬಳ್ಳಾರಿಯಿಂದ ಹಮ್ಮಿಕೊಂಡಿದ್ದ ಸೀಳುತುಟಿ ಮತ್ತು ಸೀಳು ಅಂಗಳ ಪೀಡಿತರಿಗೆ ಉಚಿತ ಚಿಕಿತ್ಸಾ ಶಿಬಿರ ಹಾಗೂ ಸ್ವಚ್ಚತಾ ಜಾಗೃತಿ ಶಿಬಿರಾ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಡತನ ಎಂಬುದು ಎಲ್ಲಾರಿಗೂ ಕಾಡುತ್ತದೆ. ನಾನಾ ರೋಗಗಳಿಂದ ಸೀಳು ತುಟಿ ಹಾಗೂ ಸೀಳು ಅಂಗಳದ ಸಮಸ್ಯೆ ಎದುರಾಗುತ್ತದೆ. ಅಂತಹ ಮಕ್ಕಳ ಮುಖದಲ್ಲಿ ಸುಂದರ ನಗು ನೋಡುವುದೆ ಈ ಸಂಸ್ಥೆಯ ಕಾರ್ಯವಾಗಿದೆ. ಇದರ ಸದುಪಯೋಗ ಎಲ್ಲಾರು ಪಡೆದುಕೊಳ್ಳಬೇಕೆಂದರು.

ಡಾ.ಎಸ್.ಕೆ.ಅಜಯ್ ಮಾತನಾಡಿ, ಸೀಳು ತುಟಿ ಒಂದು ಸಾವಿರ ಜನರಲ್ಲಿ ಬಬ್ಬರಿಗೆ ಬರುತ್ತದೆ. ಸಂಬಂಧಿದಲ್ಲಿ ಮದುವೆಯಾದರೆ ಹುಟ್ಟುವ ಮಕ್ಕಳಲ್ಲೂ ಇಂಥ ಸಮಸ್ಯೆ ಕಾಣಬಹುದು, ಸೀಳು ತುಟಿ ಪೀಡಿತರು ಅಂಜಿಕೆಗೆ ಒಳಗಾಗದೇ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಿರಿಂದ ಸರಿಪಡಿಸಿ ಕೊಳ್ಳಬಹುದು. ಖಾಸಗಿಯಾಗಿ ಸೀಳು ತುಟಿ ಶಸ್ತ್ರ ಚಿಕಿತ್ಸೆ ವೆಚ್ಚ ದುಬಾರಿ. ಆದ್ದರಿಂದ ಲಯನ್ಸ್ ಕ್ಲಬ್ ಆಫ್ ಬಳ್ಳಾರಿಯ ವತಿಯಿಂದ ಸಂಸ್ಥೆ ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ವ್ಯವಸ್ಥಾಪಕ ಎರ್ರಗುಡಿ ರಂಗನಾಥ ರಾವ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದು ದೇಶದ ಜನತೆಗೆ ಅನೇಕ ಯೋಜನೆ ಒದಗಿಸಿದ್ದಾರೆ . ಅದರಲ್ಲಿ ಸ್ವಚ್ಛತಾ ಅಭಿಯಾನ ಒಂದಾಗಿದ್ದು ಜನರು ಸ್ವ ಇಚ್ಛೆಯಿಂದ ಇಂಥ ಕಾರ್ಯಕ್ರಮಗಳನ್ನು ಮಾಡಬೇಕು. ಇಂದಿನ ಪ್ರತಿಕೂಲ ಪರಿಸರದಲ್ಲಿ ಗಿಡಮರಗಳು ಕಡಿಮೆಯಾಗಿ ಸರಿಯಾಗಿ ಮಳೆ ಬೆಳೆ ಬಾರದಂತಾಗಿದೆ. ಅದ್ದರಿಂದ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಬೇಕು. ಸ್ವಚ್ಛತೆ ಕಾಪಾಡಿದರೆ ನಮ್ಮ ಆರೋಗ್ಯದ ಜತೆ ಪರಿಸರವನ್ನು ಕಾಪಾಡಿಕೊಂಡು ಆರೋಗ್ಯವಾದ ಸಮಾಜವನ್ನು ನಿರ್ಮಾಣ ಮಾಡಬೇಕಿದೆ ಎಂದರು.

ಬೆಳಗ್ಗೆ 9ರಿಂದ ಮಧ್ಯಾಹ್ನ 1 ವರಗೆ ನಡೆದ ಶಿಬಿರದಲ್ಲಿ ಸುಮಾರು 50 ಕ್ಕೂ ಹೆಚ್ಚು ಸೀಳು ಅಂಗಲ ಪೀಡಿತರು ಚಿಕಿತ್ಸೆ ಪಡೆದುಕೊಂಡರು. ಲಯನ್ಸ್ ಸಂಸ್ಥೆಯ ಬಳ್ಳಾರಿ ಘಟಕದ ಅಧ್ಯಕ್ಷೆ ಡಾ.ಜ್ಯೋತಿ ಪಾಟೀಲ್, ಡಾ.ಚೇತನ್ ಅರುಣ್, ಮೀನ ಮೊದಲಾದವರು ಇದ್ದರು.

 

Leave a Comment