ಮಕ್ಕಳ ಬಗ್ಗೆ ಅತಿ ಕಾಳಜಿ ಬೇಡ

ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಪ್ರಶ್ನೆ ಈಗಿನ ಪೋಷಕರನ್ನು ಅತಿಯಾಗಿ ಕಾಡುತ್ತದೆ. ಮಗುವಿನ ಕಠಿಣ ಸಂದರ್ಭಗಳಲ್ಲಿ ತಂದೆತಾಯಿ ಅವರ ಸಹಾಯಕ್ಕೆ ಧಾವಿಸುವುದು ನೈಸರ್ಗಿಕ ಲಕ್ಷಣ. ಯಾಕೆಂದರೆ ಮಕ್ಕಳು ಎಷ್ಟಂದ್ರು ನಿಮ್ಮ ರಕ್ತವಲ್ಲವೇ? ಮಕ್ಕಳಿಗೆ ಸ್ವಲ್ಪ ನೋವಾದರೂ ಅಪ್ಪಅಮ್ಮನ ಕರುಳು ಚುರುಕ್ ಅನ್ನುತ್ತೆ. ಅತಿಯಾಗಿ ಮುದ್ದು ಮಾಡಿ, ಮಗುವಿನ ಪ್ರತಿಯೊಂದು ಕೆಲಸದಲ್ಲೂ ನೀವು ಸಹಾಯ ಮಾಡುತ್ತಲೇ ಇರುವುದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಒಳ್ಳೆಯದಲ್ಲ. ಪ್ರತಿಯೊಂದರಲ್ಲೂ ನೀವು ಸಹಕಾರ ನೀಡುತ್ತಲೇ ಇದ್ದಲ್ಲಿ ಮಗು ಅಸಹಾಯಕವಾಗಿ, ಅಸಮರ್ಥನಂತೆ ಬೆಳೆಯುವ ಸಾಧ್ಯತೆಗಳೇ ಹೆಚ್ಚು. ಹೌದು ಹಲವು ಮನೋವೈದ್ಯರು ಹೇಳುವ ಪ್ರಕಾರ ಯಾವ ಪೋಷಕರು ಮಗುವಿನ ಪ್ರತಿಯೊಂದು ಕೆಲಸದಲ್ಲೂ ಮೂಗು ತೂರಿಸುತ್ತಾರೋ ಅಂತಹ ಮಗು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅಸಮರ್ಥರಾಗಿರುತ್ತಾರೆ ಮತ್ತು ಹೆಚ್ಚು ಇನ್ನೊಬ್ಬರನ್ನು ಎಲ್ಲದಕ್ಕೂ ಅವಲಂಬಿತರಾಗಿರುತ್ತಾರೆ. ಅವರಿಗೆ ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿದಿರುವುದೇ ಇಲ್ಲ ಎಂಬ ಅಂಶ ತಿಳಿದುಬಂದಿದೆ. ಹಾಗಂತ ಸಂಪೂರ್ಣ ಅವರನ್ನು ಸ್ವತಂತ್ರ್ಯವಾಗಿ ಬಿಟ್ಟುಬಿಡಬೇಕು, ಅವರ ಯಾವ ಕೆಲಸಕ್ಕೂ ನೀವು ಸಹಾಯ ಮಾಡಬಾರದು ಎಂದು ನಾವು ಹೇಳುತ್ತಿಲ್ಲ. ಕೆಲವು ಸಂದರ್ಭದಲ್ಲಿ ನಿಮ್ಮ ಸಹಾಯ, ಬೆಂಬಲ ಮತ್ತು ಕಾಳಜಿ ಮಗುವಿಗೆ ಅಗತ್ಯವಾಗಿ ಬೇಕಾಗುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ನೀವು ಅವರನ್ನು ಅವರದ್ದೇ ಮಾರ್ಗದಲ್ಲಿ ಸ್ವತಂತ್ರ್ಯವಾಗಿ ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕೆ ಬಿಟ್ಟುಬಿಡಬೇಕು.

. ತಮ್ಮ ತಪ್ಪುಗಳನ್ನು ಸ್ವೀಕರಿಸುವುದಕ್ಕೆ ಕಲಿಯುತ್ತಾರೆ ಯಾವಾಗ ನೀವು ನಿಮ್ಮ ಮಗುವನ್ನು ಸ್ವತಂತ್ರವಾಗಿ ಬಿಟ್ಟುಬಿಡುತ್ತೀರೋ ಆಗ ಖಂಡಿತ ಅವರು ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳ ಬಗ್ಗೆ ನೀವು ತಿಳಿಹೇಳುವುದನ್ನು ಮುಂದುವರಿಸಿ. ತಪ್ಪುಗಳನ್ನು ಸ್ವೀಕರಿಸಿ ತಿದ್ದಿ ನಡೆಯಲು ಹೇಳಿಕೊಡಿ. ತಪ್ಪುಗಳನ್ನು ಸ್ವೀಕರಿಸಿ ಅದನ್ನು ಮುಂದೆ ಸರಿಪಡಿಸಿಕೊಂಡು ಹೋಗುವುದನ್ನು ಒಂದು ಮಗು ಕಲಿಯಿತು ಎಂದಾದರೆ ಖಂಡಿತ ಇದು ಯಶಸ್ವೀ ಜೀವನಕ್ಕೆ ಇದು ಅವರಿಗೆ ಸೂತ್ರವಾಗಬಲ್ಲದು. ತಪ್ಪುಗಳಿಂದ ಆಗುವ ಮುಜುಗರವನ್ನು ಎದುರಿಸುವುದು ಹೇಗೆ ಮತ್ತು ತಪ್ಪುಗಳೇ ಆಗದಂತೆ ಬದುಕುವುದು ಹೇಗೆ ಇತ್ಯಾದಿ ವಿಚಾರಗಳು ಅವರ ಗಮನಕ್ಕೆ ಬರುತ್ತದೆ. ಮಕ್ಕಳನ್ನು ತಪ್ಪು ಮಾಡಲು ಬಿಡಿ ಜೊತೆಗೆ ತಿದ್ದಿ ನಡೆಯುವಂತೆಯೂ ಮಾಡಿ.. ಕಂಫರ್ಟ್ ಝೋನ್ ನಿಂದ ಹೊರಬರಲಿ ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಆರಾಮ ವಲಯ(ಕಂಫರ್ಟ್ ಝೋನ್) ಯಾವಾಗಲೂ ಕೂಡ ಸುರಕ್ಷಿತ ಮತ್ತು ಸುಖದಂತೆ ಭಾಸವಾಗುತ್ತದೆ.. ಸವಾಲುಗಳಿಂದ ಲಭ್ಯವಾಗುವ ಸಕಾರಾತ್ಮಕ ಫಲಿತಾಂಶದ ಬಗ್ಗೆ ಯೋಚಿಸುವಂತಿರಬೇಕು. ಮಗುವನ್ನು ಸ್ವತಂತ್ರವಾಗಿ ಬೆಳೆಸಿ ಅವರನ್ನು ಪ್ರೋತ್ಸಾಹಿಸುವುದರಿಂದಾಗಿ ಅವರ ಆರಾಮ ವಲಯದಿಂದ ಅವರು ಹೊರಬರುತ್ತಾರೆ ಮತ್ತು ಆಗ ಸಾಮಾನ್ಯ ಜೀವನಶೈಲಿಗೆ ಅವರು ಒಗ್ಗು ಸಹಕಾರಿಯಾಗುತ್ತದೆ.

ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕಲಿಯುತ್ತಾರೆ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುವುದರಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅವರು ಕಲಿಯುತ್ತಾರೆ. ಇದು ಅವರ ಜೀವನದಲ್ಲಿ ಸಾಕಷ್ಟು ನೆರವಿಗೆ ಬರುತ್ತದೆ.. ಅವರ ಬಟ್ಟೆಗಳನ್ನು ಅವರಿಗೇ ಆಯ್ಕೆ ಮಾಡುವುದಕ್ಕೆ ಬಿಡಿ ಅಥವಾ ಅವರ ಹೇರ್ ಸ್ಟೈಲ್ ನ್ನು ಅವರೇ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡಿ. ಒಂದು ವೇಳೆ ನಿರ್ಧಾರ ತಪ್ಪಾಗಿದ್ದಲ್ಲಿ ಖಂಡಿತ ಅದರಿಂದ ಅವರು ಏನನ್ನಾದರೂ ಕಲಿಯುತ್ತಾರೆ, ಚಿಂತಿಸಬೇಡಿ. ಅನ್ವೇಷಣೆಗೆ ತಮ್ಮನ್ನ ತಾವು ಒಡ್ಡಿಕೊಳ್ಳುತ್ತಾರೆ ನಿಮ್ಮ ಮಗು ಮಾಡುವುದಕ್ಕೆ ಇಚ್ಛಿಸುವ ಪ್ರಮುಖವಾದ ಕೆಲಸ ಯಾವುದು? ಚಿತ್ರ ಬಿಡಿಸುವುದು, ಪಝಲ್ ಬಿಡಿಸುವುದು, ಆಟ ಆಡುವುದು? ಇತ್ಯಾದಿ ಯಾವುದೇ ಇರಬಹುದು. ಅವರು ಇಷ್ಟಪಡುವುದನ್ನು ಅವರಿಗೆ ಮಾಡುವುದಕ್ಕೆ ಬಿಟ್ಟುಬಿಡಿ. ತಾವು ಸಂತೋಷಪಡುವ ಕೆಲಸವನ್ನು ಯಾವಾಗ ನಿಮ್ಮ ಮಗು ಮಾಡುತ್ತದೆಯೋ ಆಗ ಅವರನ್ನು ಅವರು ಅತ್ಯುತ್ತಮ ರೀತಿಯಲ್ಲಿ ಅನ್ವೇಷಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅವರ ಅನ್ವೇಷಣೆಯು ನಿಮಗೂ ಕೂಡ ಅವರ ಬಗ್ಗೆ ಹೆಚ್ಚು ಅರ್ಥೈಸಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಅವರ ಉತ್ಸಾಹ ಮತ್ತು ಆಸೆಗಳನ್ನು ನೀವು ಅವರನ್ನು ಸ್ವತಂತ್ರವಾಗಿ ಬಿಡುವುದರಿಂದ ತಿಳಿದುಕೊಳ್ಳಬಹುದು ಮತ್ತು ಅವರ ಇಚ್ಛೆಗೆ ಅಗತ್ಯವಿರುವ ಅವಕಾಶವನ್ನು ಕಲ್ಪಿಸಿಕೊಡುವುದಕ್ಕೆ ನಿಮಗೂ ಸಹಕಾರಿಯಾಗುತ್ತದೆ. ನಿರ್ಧಾರಗಳನ್ನು ಅವರ ಮೇಲೆ ಹೇರಬೇಡಿ. ಅವರನ್ನು ಅವರಾಗಿ ಬಿಟ್ಟು ಬಿಡಿ. ಯಾವಾಗ ನೀವು ನಿಮ್ಮ ಮಗುವನ್ನು ಅವರಂತೆಯೇ ಇರಲು ಬಿಟ್ಟುಬಿಡುತ್ತೀರೋ ಆಗ ಅವರಿಂದ ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮ ಮಗುವಿಗೆ ಸ್ವತಂತ್ರ್ಯವಾಗಿರುವಂತ ರೆಕ್ಕೆಗಳನ್ನು ನೀಡಿದರೆ ಖಂಡಿತ ಆಕಾಶದೆತ್ತರಕ್ಕೆ ಅವರು ಹಕ್ಕಿಯಂತೆ ಹಾರಬಲ್ಲರು! ನಿಮ್ಮ ಮಗುವನ್ನು ಅರ್ಥ ಮಾಡಿಕೊಂಡು ಅವರನ್ನು ಅವರಾಗಿರಲು ಬಿಡಿ.

 

Leave a Comment