ಮಕ್ಕಳು ಸದೃಢತೆ ಪೌಷ್ಠಿಕಾಂಶ ಅಗತ್ಯ

ಒಳ್ಳೆಯ ಪೌಷ್ಠಿಕಾಂಶ ಬೆಳೆಯುತ್ತಿರುವ ಮಕ್ಕಳಿಗೆ ಅವಶ್ಯ. ಅದರಲ್ಲೂ ಮಕ್ಕಳ ಎತ್ತರ ಹಾಗೂ ಸದೃಢತೆ ನಿರ್ಧರಿಸುವ ಎರಡನೇ ಹಂತದ ಬೆಳವಣಿಗೆ ಅವಧಿಯಲ್ಲಿ ಅಂದರೆ, ಮಕ್ಕಳ 8 ರಿಂದ 15 ವರ್ಷ ವಯಸ್ಸಿನಲ್ಲಿ ಉತ್ತಮ ಪೌಷ್ಠಿಕಾಂಶ ಅತಿ ಅವಶ್ಯ.

ಶೈಶಾವಸ್ಥೆಗಿಂತ ಎರಡನೆ ಹಂತದ ಬೆಳವಣಿಗೆ ಅವಧಿಯಲ್ಲಿ ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶ ಅತಿ ಅವಶ್ಯ. ಇದರಿಂದ ಮಕ್ಕಳು ವಯಸ್ಕರಾದಾಗ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಉತ್ತಮ ಪೌಷ್ಠಿಕಾಂಶದ ಆಹಾರ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ.

ಮಕ್ಕಳಲ್ಲಿ ಎರಡು ಹಂತದ ಬೆಳವಣಿಗೆ ಇರುತ್ತದೆ. ಮೊದಲನೆಯದು ಬಾಲ್ಯಾವಸ್ಥೆಯಾದರೆ, ಎರಡನೆ ಹಂತ 8 ರಿಂದ 15 ವರ್ಷ ವಯಸ್ಸಿನಲ್ಲಿ ಎಂದು ಹೇಳುವ ಮಕ್ಕಳ ಆರೋಗ್ಯ ಸಂಸ್ಥೆಯ ಭಾರತೀಯ ವಿಭಾಗದ ಮಾಜಿ ಅಧ್ಯಕ್ಷ ಡಾ. ಜಯದೇಬ್ ರಾಯ್ ಬಾಲಕಿಯರಲ್ಲಿ ಎರಡನೆ ಹಂತದ ಬೆಳವಣಿಗೆ 10 ವರ್ಷಗಳ ಆಜುಬಾಜಿನಲ್ಲಿ ನಡೆಯಲಿದ್ದು, ಗಂಡು ಮಕ್ಕಳಲ್ಲಿ 12ರ ವಯಸ್ಸಿನಲ್ಲಿ ಬೆಳವಣಿಗೆಗಳು ಘಟಿಸುತ್ತವೆ ಎನ್ನುತ್ತಾರೆ.

ಈ ವಯಸ್ಸಿನಲ್ಲಿ ಮಕ್ಕಳು ಎತ್ತರವಾಗುವ ಜೊತೆಗೆ ದೇಹದ ತೂಕ ಹೆಚ್ಚಳ ಸೇರಿದಂತೆ, ದೈಹಿಕವಾಗಿ ಸದೃಢರಾಗುತ್ತಾರೆ. ಜೊತೆಗೆ ಮಾನಸಿಕವಾಗಿ ಹಾಗೂ ಲೈಂಗಿಕವಾಗಿಯೂ ಬದಲಾವಣೆಗಳನ್ನು ಪಡೆಯುತ್ತಾರೆ ಎಂದು ಅವರು ಹೇಳುತ್ತಾರೆ.

ಈ ಹಂತದ ಬೆಳವಣಿಗೆಯಲ್ಲಿ ಪ್ರೋಟೀನ್‌ನಂತಹ ಪೋಷಕಾಂಶಗಳು ಹೇರಳವಾಗಿ ಬೇಕಾಗುತ್ತವೆ ಎಂದು ಅವರು ಹೇಳುತ್ತಾರೆ.

ಈ ಹಂತದ ಬೆಳವಣಿಗೆಯಲ್ಲಿ ದೇಹ ಎರಡು ಪಟ್ಟು ಪೌಷ್ಠಿಕಾಂಶಗಳನ್ನು ಕೇಳುತ್ತದೆ ಎಂದು ಮಾಹಿತಿ ನೀಡುವ ಮುಕ್ತ ಜೀವನಶೈಲಿ ಮತ್ತು ಆರೋಗ್ಯ ಸಂಸ್ಥೆಯ ಭಾರತೀಯ ವಿಭಾಗದ ಸಂಸ್ಥಾಪಕ ಡಾ. ನಾಜೀನ್ ಹುಸೇನ್ ಕಡಿಮೆ ಪೌಷ್ಠಿಕಾಂಶ ಆಹಾರ ತೆಗೆದುಕೊಳ್ಳುವುದರಿಂದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.

ಹಾಗಾಗಿ ಮಕ್ಕಳಿಗೆ 8 ರಿಂದ 15 ವರ್ಷ ವಯಸ್ಸಿನ ಸಂದರ್ಭದಲ್ಲಿ ಆದಷ್ಟೂ ಹೆಚ್ಚಿನ ಪೌಷ್ಠಿಕಾಂಶಗಳನ್ನು ಒಳಗೊಂಡ ಆಹಾರ ನೀಡಬೇಕು.

ಹೆಚ್ಚಿನ ಪೌಷ್ಠಿಕಾಂಶ ಹೊಂದಿರುವ ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ, ಸೋಯಾ ಪ್ರೋಟೀನ್, ಮತ್ತಿತರ ಅಮೈನೊ

ಆಸಿಡ್ ಹೊಂದಿರುವ ಆಹಾರ ನೀಡಬೇಕು, ಜೊತೆಗೆ ಬೇಳೆಕಾಳುಗಳನ್ನು ಮಕ್ಕಳಿಗೆ ನೀಡಬೇಕು.

 

Leave a Comment