ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅತ್ಯವಶ್ಯ

ಧಾರವಾಡ,ಜು 18- ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್, ಸಭಾ ಭವನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಗೆಳೆಯರ ಬಳಗದ 22ನೇ ವಾರ್ಷಿಕೋತ್ಸವ ಏರ್ಪಡಿಸಲಾಗಿತ್ತು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ನಿವೃತ್ತ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಮಾಜ ಸೇವಕರಾದ ಶ್ರೀ. ಎಮ್. ಕೆ. ಕೃಷ್ಣ ಆಗಮಿಸಿದ್ದರು. ಇಂದಿನ ಮಕ್ಕಳಿಗೆ ಮೌಲ್ಯಗಳನ್ನು ನೀಡಿ. ಮೌಲ್ಯಯುತ ವಸ್ತುಗಳನ್ನು ನೀಡುವ ಅವಶ್ಯಕತೆ ಇಲ್ಲ. ವಸ್ತುಗಳು ಕ್ಷಣಿಕವಾದವು, ಮೌಲ್ಯಗಳು ಜೀವನ ರೂಪಿಸುತ್ತವೆ. ಸರ್ ಎಮ್ ವಿಶ್ವೇಶ್ವರಯ್ಯ ಅವರನ್ನು ಆದರ್ಶ ವ್ಯಕ್ತಿಯನ್ನಾಗಿರಿಸಿಕೊಂಡು ಅವರ ಮಟ್ಟಕ್ಕೇರಲು ಪ್ರಯತ್ನಿಸಬೆಕು. ಶಿಸ್ತು, ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸ್ಹಿ. ವಿ. ರಾಮನ್ ಒಬ್ಬ ಅಕೌಂಟಂಟಾಗಿ ಕಾರ್ಯ ನಿರ್ವಹಿಸಿದ್ದರೂ ಕೂಡಾ ತಮ್ಮ ಸ್ವಂತ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರೈಜ್ ಪಡೆದು ಇಡೀ ವಿಶ್ವವೇ ಭಾರತದತ್ತ ತಿರಿಗಿ ನೋಡುವಂತೆ ಮಾಡಿದರು. ಶ್ರೀನಿವಾಸ

Leave a Comment