ಮಕ್ಕಳಿಗೆ ಬದುಕುವ ಕಲೆಯ ಮಹತ್ವ ತಿಳಿಸಲು ಕರೆ

ದಾವಣಗೆರೆ, ಆ.25; ನಮ್ಮ ದೇಶದಲ್ಲಿಂದು ಅಸಮಾನತೆ ಹೆಚ್ಚಾಗುತ್ತಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಕಂದಕವಾಗಿ ಬೆಳೆದಿದೆ ಎಂದು ಬೆಂಗಳೂರು ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಶ್ರೀ ಶರಣ ಮಾಗನೂರು ಬಸಪ್ಪ ಕಾಲೇಜು ಸಭಾಂಗಣದಲ್ಲಿಂದು ದಾವಣಗೆರೆ- ಚಿತ್ರದುರ್ಗ ಬ್ಯಾಂಕ್ ನಿವೃತ್ತರ  ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ನೂತನ ಉಡುಪುಗಳ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿದ ಮಾತನಾಡಿದ ಅವರು ಭಾರತದಲ್ಲಿ ಸುಮಾರು ಶೇ.73 ರಷ್ಟು ಆಸ್ತಿಗೆ ಕೇವಲ ಶೇ.1 ರಷ್ಟು ಜನರು ಒಡೆಯರಾಗಿದ್ದಾರೆ. ದೇಶದಲ್ಲಿ 100ಕ್ಕೆ 50 ರಷ್ಟು ಆಹಾರ ಪದಾರ್ಥಗಳು ಪ್ರತಿನಿತ್ಯ ವ್ಯರ್ಥವಾಗುತ್ತಿರುವುದು ದುರಂತ.  ವರ್ಷಕ್ಕೆ 200 ಮಿಲಿಯನ್ ಖಾದ್ಯ ತೈಲ ಪೋಲಾಗುತ್ತಿದೆ. ಆಹಾರ ದಾಸ್ತಾನುಗಳಿವೆ ಆದರೆ ಆ ಉಗ್ರಾಣಗಳಲ್ಲಿ ಆಹಾರ ಇಲಿ ಹೆಗ್ಗಣಗಳ ಪಾಲಾಗುತ್ತಿದೆ. ಉಳಿದ ಆಹಾರ ಕೆಲವೇ ಜನರಿಗೆ ಮಾತ್ರ ತಲುಪುತ್ತಿದೆ. 200 ಮಿಲಿಯನ್ ಬ್ಯಾರಲ್ ಖಾದ್ಯ ತೈಲ ಬಳಕೆ ಮಾಡುವುದಕ್ಕಿಂತ ವ್ಯರ್ಥವೇ ಹೆಚ್ಚಾಗಿದೆ. ಸಮೀಕ್ಷೆಯಂತೆ ಪ್ರತಿರಾತ್ರಿ 20 ಕೋಟಿ ಜನರು ಹೊಟ್ಟೆಗೆ ಅನ್ನವಿಲ್ಲದೇ ಬಳಲುತ್ತಿದ್ದಾರೆ. ವರ್ಷಕ್ಕೆ 70ಲಕ್ಷ ಮಕ್ಕಳು ಆಹಾರ ಅಥವಾ ಪೋಷಕಾಂಶದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಇದು ನಮ್ಮ ಸ್ಥಿತಿಎಂದು ಬೇಸರ ವ್ಯಕ್ತಪಡಿಸಿದರು. ನಮ್ಮಲ್ಲಿದೆ ಮಾರುಕಟ್ಟೆ ಹೋದರೆ ಪ್ರತಿ 20ರಿಂದ 25 ವರ್ಷದವರ 4ರಲ್ಲಿ ಇಬ್ಬರು ಇಂಜಿನಿಯರ್ ಅಥವಾ ವೈದ್ಯರಿದ್ದಾರೆ. ಪ್ರತಿಭಾನ್ವಿತ ಮಕ್ಕಳು ಮಾತ್ರ ಯಶಸ್ಸು ಕಾಣುತ್ತಿದ್ದಾರೆ. ಕಳೆದ ವರ್ಷ ಬುಸಿನೆಸ್ ಇಂಡಿಯಾ ನಡೆಸಿದ ಸಮೀಕ್ಷೆಯಂತೆ ನಮ್ಮ ದೇಶದಲ್ಲಿ 11,937 ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿವೆ. ಪದವಿ ಪಡೆದ ಎಷ್ಟು ಮಕ್ಕಳು ಹೊರಬರುತ್ತಿದ್ದಾರೆ ಎಂಬುದು ಲೆಕ್ಕವಿಲ್ಲ. ಪ್ರತಿಯೊಂದು ಮನೆಯಲ್ಲೂ ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರಾಗಬೇಕು ಎಂದು ಬಯಸುತ್ತಾರೆ. ಆದರೆ ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಲಕ್ಷ ಗಟ್ಟಲೇ ಇಂಜಿನಿಯರ್‍ಗಳು ಹೊರಬರುತ್ತಿದ್ದಾರೆ ಅವರಲ್ಲಿ ಶೇ.80 ರಷ್ಟು ಜನರು ಉದ್ಯೋಗಸ್ಥರಾಗಲು ಸಾಧ್ಯವಾಗುತ್ತಿಲ್ಲ. ಆದರೆ ಜೀವನ ನಡೆಸಲು ಆಗುತ್ತಿಲ್ಲ ಇದಕ್ಕೆ ಕಾರಣ ಅವರಿಗೆ ಬದುಕುವ ಕಲೆ ಸಿಗದಿರುವುದು. ಸಮಾಜದಲ್ಲಿ ಹೇಗೆ ಮುಂದೆ ಬರಬೇಕು ಎಂಬುದು ಗೊತ್ತಿಲ್ಲ, ಭಾರತ ಧರ್ಮವನ್ನು ಪ್ರಪಂಚವೇ ಕೊಂಡಾಡಿದೆ ಅಂತಹ ಸಂಸ್ಕೃತಿ ಇಂದು ಅವನತಿಯತ್ತ ಸಾಗುತ್ತಿದೆ. ಅಸಮಾನತೆ ಹೆಚ್ಚಾಗಿದೆ. ಮನುಷ್ಯತ್ವವೇ ಮರೆಯಾಗಿದೆ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಮೊದಲು ದೇಶದ ಉತ್ತಮ ಪ್ರಜೆಯಾಗಬೇಕು. ಸಹೋದರತೆ ಮೂಡಬೇಕು, ವಿಶ್ವಮಾನರಾಗುವ ನಿಟ್ಟಿನಲ್ಲಿ ವಿದ್ಯೆಬೇಕಿದೆ. ಎಲ್ಲರಲ್ಲೂ ಸಮಾನತೆ ಮೂಡಿಸಬೇಕು ಅಂತಹ ಶಿಕ್ಷಣಬೇಕಿದೆ. ಪೋಷಕರು ಮಕ್ಕಳನ್ನು ಕೇವಲ ಶಿಕ್ಷಣಕ್ಕೆ ಸೀಮಿತರನ್ನಾಗಿಸಬಾರದು ಎಂದು ಸಲಹೆ ನೀಡಿದರು. ಈ ವೇಳೆ ವಿ. ನಂಜುಂಡೇಶ್ವರ, ಎನ್.ಟಿ. ಹೆಗ್ಡೆ, ಬಿ.ವೆಂಕಟರಾವ್, ವೆಂಕಟಾಚಲಪತಿ, ಎನ್.ಟಿ ಎರ್ರಿಸ್ವಾಮಿ, ಶಾಂತಗಂಗಾಧರ್, ಜಿ.ರಂಗಸ್ವಾಮಿ, ರಾಘವೇಂದ್ರನಾಯರಿ ಮತ್ತಿತರರಿದ್ದರು.

Leave a Comment