ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ- ಹೊರಕೇರಿ

ಹುಬ್ಬಳ್ಳಿ,ಫೆ.23- ವಿದ್ಯಾನಿಕೇತನ ಸಮೂಹ ಸಂಘ ಸಂಸ್ಥೆಗಳ 16 ನೇ ವಾರ್ಷಿಕೋತ್ಸವದ ವಿಶೇಷ ಗಣ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಬಿವಿಬಿ ಕಾಲೇಜಿನ ಗ್ರಂಥಪಾಲಕ  ಸುರೇಶ ಡಿ. ಹೊರಕೇರಿ ಅವರನ್ನು ಶಾಲು, ಮಾಲೆ, ನೆನಪಿನ ಕಾಣಿಕೆ ನೀಡಿ ಪ್ರೀತಿಯಿಂದ ಆತ್ಮೀಯವಾಗಿ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಗೌರವಿಸಿದರು.  ಸಂಸ್ಥೆಯ ಅಧ್ಯಕ್ಷ ಡಾ. ಸುವರ್ಣಲತಾ ಜಿ. ಗದಿಗೆಪ್ಪಗೌಡರ, ಪ್ರಗತಿಪರ ರೈತ ಶಿವಾನಂದ ಹೊಸೂರ, ಸಾಹಿತಿ ಅಬ್ದುಲ್‍ರಬ್ ಸರೋಶ್, ಮಾಜಿ ಯೋಧ ಪೀಟರ್ ಕ್ಯುಟಿನೋ, ಅಕ್ಕನ ಬಳಗದ ಜಯಶ್ರೀ ಯಳಮಲಿ, ವಿಜಯಲಕ್ಷ್ಮೀ ಉಮಚಗಿ, ರತ್ನಾ ಗಂಗಣ್ಣವರ, ವೈದ್ಯ ಡಾ. ಬಸವಕುಮಾರ ತಲವಾಯಿ, ಪಾಲಕರು, ಮಕ್ಕಳು, ಮುಂತಾದವರು ಇದ್ದರು.
ಗ್ರಂಥಪಾಲಕ  ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪಾಲಕರು ಶಿಕ್ಷಕರು ಮಕ್ಕಳಿಗೆ ಪ್ರೀತಿಯಿಂದ ಯಾವುದೇ ಒತ್ತಡ ಹೆರದೆ ಉತ್ತಮ ಸಂಸ್ಕಾರ ನೀಡಬೇಕು. ತಂದೆ-ತಾಯಿ-ಗುರುವಿಗೆ ಗೌರವ ನೀಡುವುದನ್ನು ಕಲಿಸಬೇಕು. ಮಕ್ಕಳಿಗೆ ಸತ್ವಯುತ ಆಹಾರ ನೀಡಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳವಂತೆ ನೋಡಬೇಕು. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕು. ಸಂಗೀತ, ಚಿತ್ರಕಲೆಯಲ್ಲಿ ಆಶಕ್ತಿ ಹುಟ್ಟಿಸಬೇಕು. ಮಕ್ಕಳು ಸರ್ವತೋಮುಖವಾಗಿ ಬೆಳೆದು ದೇಶದ ಉತ್ತಮ ನಾಗರಿಕನಾಗುವಂತೆ ಪಾಲಕರು, ಶಿಕ್ಷಕರು ಪ್ರಯತ್ನಿಸಬೇಕು ಎಂದರು.

Leave a Comment