ಮಕ್ಕಳಿಗೆ ಆರೋಗ್ಯ ಜಾಗೃತಿ ಅಗತ್ಯ

ರಾಯಚೂರು.ಜ.25- ನಗರದ ಕೆಇಬಿ ಶಾಲೆಯಲ್ಲಿ ರೋಟರಿ ಕ್ಲಬ್ ರಾಯಚೂರು ಮತ್ತು ಎಇಎಂಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯ ಸಯುಂಕ್ತ ಆಶ್ರಯದಲ್ಲಿ ಇಂದು ಉಚಿತ ದಂತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ರೋಟರಿ ಅಧ್ಯಕ್ಷ ವೆಂಕಟ ಸ್ವಾಮಿ ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಆರೋಗ್ಯದ ಜಾಗೃತಿ ಮೂಡಿಸುವುದರಿಂದ ಅವರ ಸದಾ ಆರೋಗ್ಯವಾಗಿರಲು ಸಾಧ್ಯವೆಂದು ಹೇಳಿದರು.
ರೋಟರಿಕಬ್ಲ್ ನಿರ್ದೇಶಕರಾದ ಎನ್.ಶಿವಶಂಕರ ವಕೀಲರು ಮಾತನಾಡಿ, ವಿದ್ಯಾರ್ಥಿಗಳಿಗೆ ದೇಹದ ಸ್ವಚ್ಛತೆಗೆ ಆದ್ಯತೆ ನೀಡಿಲು, ದಂತಗಳ ಅರಿವು ಮೂಡಿಸಿ ಆರೋಗ್ಯವೇ ಜೀವನ ಎಂಬ ಮಹತ್ವ ವಿಚಾರಗಳನ್ನು ಓದುವ ಜೊತೆಗೆ ಈ ತಿಳಿವಳಿಕೆ ನೀಡಲು ಶಿಬಿರ ಹಮ್ಮಿಕೊಳ್ಳಲಾಗಿದೆಂದರು. ಡಾ.ಚಂದ್ರಶೇಖರ ಸಜ್ಜನರು ಇವರು ನೇತೃತ್ವದಲ್ಲಿ ನೂರಾರು ಮಕ್ಕಳಿಗೆ ದಂತ ಚಿಕಿತ್ಸೆ ನೀಡಲಾಯಿತು. ಮಕ್ಕಳಿಗೆ ಉಚಿತ ಬ್ರಶ್ ಮತ್ತು ಪೆಸ್ಟ್ ನೀಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ವಿಜಯ ಸಜ್ಜನರ ರೋಟರಿ ನಿದೇರ್ಶಕರಾದ ರಾಮು, ಮಡ್ಡಿಪೇಟೆ ಶ್ರೀನಿವಾಸ, ಮೃತ್ಯುಂಜಯ ಮಾಚನೂರು, ಅನಿಲ್ ಕುಮಾರ್, ವಿಜಯಕುಮಾರ ಸಜ್ಜನ್, ಕೆಇಬಿ ಶಾಲೆಯ ಮುಖ್ಯ ಉಪಾಧ್ಯಾಯನಿ ಉಮಾದೇವಿ, ನಂದಿನಿ ಕಳಸ, ದಂತ ಮಹಾವಿದ್ಯಾಲಯದ ವೈದ್ಯರು ಸಿಂಬ್ಬದಿಗಳು ಉಪಸ್ಥಿತರಿದ್ದರು.

Leave a Comment