ಮಕ್ಕಳಲ್ಲೆ ಹೆಚ್ಚುತ್ತಿರುವ ಕ್ಯಾನ್ಸರ್

ವಿಶ್ವದಾದ್ಯಂತ ಇಂದು ಸಾಂಕ್ರಾಮಿಕ ಸೋಂಕು ರೋಗಗಳಿಂದ ಮಕ್ಕಳು ಸಾವನ್ನಪ್ಪುವ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಸಾವು ಹೆಚ್ಚಾಗಿ ಕ್ಯಾನ್ಸರ್‌ನಿಂದಲೇ ಸಂಭವಿಸುತ್ತಿರುವುದು ವೈದ್ಯ ಲೋಕಕ್ಕೆ ಹೆಚ್ಚು ಆಘಾತ ತಂದಿದೆ.
ರಸ್ತೆ ಅಪಘಾತಗಳಿಂದಲೂ ಸಾವನ್ನಪ್ಪುವ ಸಂಖ್ಯೆಗಿಂತ ಹೆಚ್ಚಾಗಿ ಕ್ಯಾನ್ಸರ್ ಪೀಡಿತರು ಮೃತಪಡುತ್ತಿರುವುದು ವೈದ್ಯಲೋಕಕ್ಕೆ ಸವಾಲಾಗಿದೆ.
ಕ್ಯಾನ್ಸರ್ ಪೀಡಿತ ರೋಗಿಗಳ ಸಾವು ಮುಂದುವರೆದ ರಾಷ್ಟ್ರಗಳಲ್ಲಿ ಶೇ. 80 ರಷ್ಟಿದ್ದರೆ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಶೇ. 20 ಕ್ಕಿಂತ ಕಡಿಮೆ ಇದೆ ಎಂದು ವರದಿಗಳು ಹೇಳಿವೆ.
ಮಕ್ಕಳು ಕ್ಯಾನ್ಸರ್ ಪೀಡಿತರಾಗಬಾರದು ಎಂದು ಪ್ರತಿ ವರ್ಷವು ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆ ದಿನದಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಕ್ಯಾನ್ಸರ್ ಮಕ್ಕಳ ಸಂಖ್ಯೆ ಇಳಿಮುಖವಾಗಿಲ್ಲ.
ಕಳೆದ ಕೆಲವು ದಶಕಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದ್ವಿಗುಣಗೊಂಡಿದೆ. ಒಂದು ಅಂದಾಜಿನ ಪ್ರಕಾರ 2,63,000 ಹೊಸದಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾಣಿಸಿಕೊಂಡಿದೆ. ವಾರ್ಷಿಕವಾಗಿ 91 ಸಾವಿರ ಮಕ್ಕಳು ಮತ್ತು ಹದಿಹರೆಯದವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಎಂದು ಆಸ್ಪರ್ ಸಿಎಂ ಆಸ್ಪತ್ರೆಯ ಸರ್ಜಿಕಲ್ ಅಂಕಾಲಜಿ ವಿಭಾಗದ ಸಲಹೆಗಾರ ಡಾ. ಜಿ. ಗಿರೀಶ್ ಹೇಳುತ್ತಾರೆ.
ಭಾರತದಲ್ಲಿ ಕೂಡ ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿದ್ದು 5 ರಿಂದ 14 ವರ್ಷದೊಳಗಿನ ಮಕ್ಕಳು ಬಳಲುತ್ತಿದ್ದಾರೆ.
ಒಮ್ಮೆ ಮಕ್ಕಳ ದೇಹದಲ್ಲಿ ಕ್ಯಾನ್ಸರ್‌ನ ಕೋಶ ಪ್ರವೇಶಿಸಿದರೆ ಸಾಕು ಕ್ಯಾನ್ಸರ್ ರೋಗ ದೇಹವಿಡೀ ಹರಡುತ್ತದೆ. ಅಗತ್ಯ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಖಚಿತ ಎಂದು ಎಚ್ಚರಿಸುತ್ತಾರೆ.
ಹದಿಹರೆಯದವರಲ್ಲಿ ಸಾಮಾನ್ಯವಾಗಿ ಯುವತಿಯರಲ್ಲಿ ಸ್ತನಗಳು, ಚರ್ಮ, ಶ್ವಾಸಕೋಶ, ಪ್ಯಾನಕ್ರಿಯಾಸ್ ಅಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಮಕ್ಕಳ ಕ್ಯಾನ್ಸರ್ ಮಾತ್ರ ತದ್ವಿರುದ್ಧವಾಗಿರುತ್ತದೆ.
ಸಾಮಾನ್ಯವಾಗಿ ಬ್ಲಡ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶೇ. 33 ರಷ್ಟು ಕ್ಯಾನ್ಸರ್ ರಕ್ತ ಮತ್ತು ಮೂಳೆಗಳ ಒಳಗೆ ಬರಲಿದೆ.
ಬ್ಲಡ್ ಕ್ಯಾನ್ಸರ್ ಬಹು ಬೇಗ ದೇಹದಲ್ಲಿ ಹರಡುತ್ತದೆ. ದೇಹದಲ್ಲಿ ನಿಶ್ಯಕ್ತಿ, ಸ್ನಾಯುಗಳ ನೋವು, ರಕ್ತಸ್ರಾವ, ಜ್ವರ ದೇಹದಲ್ಲಿ ತೂಕ ಕಡಿಮೆಯಾಗುವುದು. ಮಕ್ಕಳ ಬ್ಲಡ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಾಗಿವೆ.
ಮಕ್ಕಳಲ್ಲಿ ಮಿದುಳು ಕ್ಯಾನ್ಸರ್, ಗೆಡ್ಡೆ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳುವುದು ಸಾಮಾನ್ಯವಾದ ಲಕ್ಷಣಗಳಾಗಿವೆ. ತಲೆನೋವು, ವಾಂತಿ, ದೃಷ್ಟಿಹೀನತೆ, ತಲೆ ತಿರುಗುವಿಕೆ, ನಡೆದಾಡಲು ತ್ರಾಸವಾಗುವುದು. ಮಿದುಳು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳಾಗಿವೆ ಎಂದು ಡಾ. ಗಿರೀಶ್ ಅಭಿಪ್ರಾಯಪಡುತ್ತಾರೆ.
ಆರಂಭಿಕ ಹಂತದಲ್ಲೆ ಕ್ಯಾನ್ಸರ್‌ನ ಅಂಶಗಳನ್ನು ಪತ್ತೆಹಚ್ಚುವುದು ಮುಖ್ಯ. ಪರಿಣಾಮಕಾರಿಯಾದ ಕೆಮೆಥೆರಪಿ, ಶಸ್ತ್ರಚಿಕಿತ್ಸೆ, ರೇಡಿಯನ್ ಥೆರಪಿ, ಜತೆಗೆ ಮ್ಯಾಬ್ಸ್ ಚಿಕಿತ್ಸೆಯಿಂದ ಕ್ಯಾನ್ಸರ್ ಬೆಳವಣಿಗೆಗೆ ಕಡಿವಾಣ ಹಾಕಲು ಸಾಧ್ಯ ಎನ್ನುತ್ತಾರೆ.

Leave a Comment