ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ

ಬೆಳಗಾವಿ, ಅ 11- ವ್ಯಕ್ತಿಯೋರ್ವ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಹೃದಯ ವಿದ್ರಾವಕ ಘಟನೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಜರುಗಿದೆ.
ಸಿದ್ದಪ್ಪ ಕುಳ್ಳೂರು ಎಂಬ ವ್ಯಕ್ತಿ ತನ್ನ ಇಬ್ಬರು ಮಕ್ಕಳಾದ ಪ್ರಿಯಾಂಕ (6) ಹಾಗೂ ಪವಿತ್ರ (8) ಎಂಬ ಇಬ್ಬರು ಮಕ್ಕಳ ಕತ್ತನ್ನು ಕುಯ್ದು ಹತ್ಯೆ ಮಾಡಿ ನಂತರ ತಾನೂ ಸಹ ತನ್ನ ಕತ್ನನ್ನು ಕುಯ್ದುಕೊಂಡು ಆತ್ಮಹತ್ಯೆ ಮಾಡಲು ಯತ್ನಸಿದ್ದಾನೆ
ಸಿದ್ದಪ್ಪನ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು ಸಿದ್ದಪ್ಪನನ್ನು ರಾಮದುರ್ಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಹೃದಯವಿದ್ರಾವಕ ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment