ಮಂತ್ರ ತಂತ್ರ

ಮಂತ್ರಂ”ಚಿತ್ರ ಬಿಡುಗಡೆಯಾಗಿ ಇನ್ನೂ ಒಂದು ವಾರ ಪೂರ್ಣಗೊಂಡಿಲ್ಲ. ಆಗಲೇ ಯಶಸ್ಸು ಕಂಡಿದೆಯಂತೆ. ಚಿತ್ರಕ್ಕೆ ಹಾಕಿರುವ ಬಂಡವಾಳ ಒಂದುಕೋಟಿ ತೊಂಬತ್ತು ಲಕ್ಷ ರೂಪಾಯಿ ಎನ್ನುವುದು ನಿರ್ಮಾಪಕ ಅಮರ್ ಚೌಧರಿ ಲೆಕ್ಕಚಾರ. ಆದರೆ ಚಿತ್ರಮಂದಿರದಿಂದ ಬಂದಿರುವುದು ಇಪ್ಪತ್ತರಿಂದ ಮುವತ್ತು ಲಕ್ಷ ರೂಪಾಯಿ ಡಬ್ಬಿಂಗ್ ಹಕ್ಕು ಮಾರಾಟದಿಂದ ಒಂದಷ್ಟು ಹಣ ಬಂದಿದೆಯಂತೆ.

ಈಗ ಮಂತ್ರಂನ ಮುಂದುವರಿದ ಭಾಗ ’ಮಂತ್ರಂ-೨’ ಚಿತ್ರ ಆರಂಭಿಸಲು ಚಿತ್ರತಂಡ ಮುಂದಾಗಿದೆ.ಮೊದಲ ಚಿತ್ರದಲ್ಲಿ ಹಾರರ್ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿಷಯವನ್ನು ಆಧರಿಸಿ ಚಿತ್ರ ಮಾಡಿದ್ದ ತಂಡ ಈಗ ಹಾರರ್ ಬದಿಗಿರಿಸಿ ಚಿತ್ರ ಮಾಡುತ್ತಿದೆಯಂತೆ. ಈಗಂತ ನಿರ್ಮಾಪಕ ಆಮರ್ ಚೌಧರಿ ಮತ್ತು ನಿರ್ದೇಶಕ ಸಜ್ಜನ್ ಹೇಳಿಕೊಂಡರು.

ನಾಯಕ ಶಮಂತ್ ಶೆಟ್ಟಿ ಮತ್ತು ನಾಯಕಿ ಪಲ್ಲವಿ ರಾಜು ಎರಡನೇ ಮುಂದುವರಿದ ಭಾಗದಲ್ಲಿದ್ದು ಉಳಿದಂತೆ ಹೊಸಬರೇ ಇರುತ್ತಾರಂತೆ ಚಿತ್ರ ಯಾವಾಗ ಆರಂಭವಾಗಲಿದೆ. ಎನ್ನುವುದಕ್ಕೆ ತಂಡದ ಬಳಿ ಸದ್ಯ ಯಾವುದೇ ಮಾಹಿತಿ ಇಲ್ಲ.

ಮಂತ್ರಂ ಯಶಸ್ಸು ಕಂಡಿದೆ ಎನ್ನುವ ಚಿತ್ರತಂಡ ಇನ್ನೂ ಕನಿಷ್ಟ ಮೂರು ನಾಲ್ಕು ವಾರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡರೆ ಹಾಕಿದ ಬಂಡವಾಳ ವಾಪಸ್ ಬರಲಿದೆಯಂತೆ. ವಾರಕ್ಕೆ ಏಳೆಂಟು ಸಿನಿಮಾ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಮೂರು ನಾಲ್ಕು ವಾರ ಪ್ರದರ್ಶನ ಕಾಣುವ ಖಾತ್ರಿ ವಿತರಕ ನವರಸನ್ ಅವರಿಗೂ ಇಲ್ಲ. ಆದರೆ ಅವರೇ ಹೇಳುವ ಮೂಲಕ ಚಿತ್ರದ ಡಬ್ಬಿಂಗ್ ಹಕ್ಕಿನಿಂದ ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ ಬಂದಿದೆ ಎನ್ನುತ್ತಾರೆ. ಆದರೆ ನಿರ್ಮಾಪಕ ಹೆಚ್ಚು ಕಡಿಮೆ ೨ ಕೋಟಿ ಬಂಡವಾಳ ಹಾಕಿದ್ದೇನೆ ಎನ್ನುವ ಮೂಲಕ ಗೊಂದಲಕ್ಕೆ ಅವಕಾಶ ಮಾಡಿಕೊಟ್ಟರು.

Leave a Comment