ಮಂಡ್ಯ ಸೊಗಡಿನ ವೀರಾಧಿವೀರ

ಈ ಹಿಂದೆ ಗಾಯಿತ್ರಿ, ಚತುರ ಚಿತ್ರಗಳನ್ನು ನಿರ್ದೇಶಿಸಿದ್ದ ಸತ್ಯ ಸಾಮ್ರಾಟ್ ಸದಿ ತಯಾರುತ್ತಿರುವ ಮತ್ತೊಂದು ಚಿತ್ರ ನಿರ್ದೇಶಿಸಲು ಮುಗಿಸಿದ್ದಾರೆ.ವಿಜಯಾನಂದ.ಪಿ ನಿರ್ಮಾಣದಲ್ಲಿ ತಯಾರಾಗುತ್ತಿರುವ  ಚಿತ್ರದ ಹೆಸರು ವೀರಾಧಿವೀರ.

ಇಬ್ಬರು ಸ್ನೇಹಿರು ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇಬ್ಬರ ಕಳ್ಳತನದ ಕಥಾನಕ ಇದಾಗಿದ್ದು ಇದರ ಮಧ್ಯ ಮಂಡ್ಯ ಜಿಲ್ಲೆ ಸೊಗಡಿನ ಕಾಮಿಡಿ ಹಾಗೂ ಒಂದು ಪ್ರೀತಿ-ಪ್ರೇಮದ ಎಳೆಕೂಡ ಇದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಸಹ ನಿರ್ದೇಶಕ ಸತ್ಯಸಾಮ್ರಾಟ್ ಅವರೇ ರಚಿಸಿದ್ದಾರೆ. ಮಂಗಳೂರು, ಮೈಸೂರು ಸುತ್ತ ಮುತ್ತ ಚಿತ್ರದ ಟಾಕಿ ಭಾಗ ಹಾಗೂ ಸಕಲೇಶ ಪುರ ಮತ್ತು ಮೇಲುಕೋಟೆಯಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣವನ್ನು ನಡೆಸಲಾಗಿದೆ. ಮಂಡ್ಯ ಸೊಗಡಿನ ಪಕ್ಕಾ ಹಳ್ಳಿ ಕಥಾನಕ ಈ ಚಿತ್ರದಲ್ಲಿದ್ದು ಹಾಸ್ಯದ ಪ್ರಧಾನ ನಿರೂಪಣೆ ಕೂಡ ಇದೆ.  ಈ ಹಿಂದೆ ಗಾಯಿತ್ರಿ, ಬೇತಾಳ ಹಾಗೂ ಶ್ರೀಕಾರ ಚಿತ್ರದ ನಟ ಸ್ಮೈಲ್ ಶಿವು ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳ್ಳಿದ್ದು ಈಹಾಡುಗಳ ಧ್ವನಿ ಸುರಳಿಗಳನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಕರಣ್ ಮಹಾದೇವನ್ ಸಂಗೀತ, ಹೆಮಂತ್ ಕುಮಾರ್ ಛಾಯಾಗ್ರಹಣವಿದೆ. ತಾರಾಗಣದಲ್ಲಿ ಸ್ಮೈಶಿವು ಅಶ್ವಿನಿ, ಪ್ರಿಯಾ, ಕಿಲ್ಲರ್ ವೆಂಕಟೇಶ್, ಪಾರ್ಥ, ಕುಂಭಾಪುರ ಕೃಷ್ಣ, ನಂದೀಶ್, ದರ್ಶನ್ ಹುಣಸೂರು, ಪಳಿನಿ, ರಾಣಿ, ಅಪೂರ್ವ, ಗೋವಿಂದ ರಾಜ್, ಮಾಸ್ಟರ್ ಪ್ರಸಾದ್, ಗುರು ಮುಂತಾದವರಿದ್ದಾರೆ.

Leave a Comment