ಮಂಡ್ಯ, ಸೇರಿಗೆ ಸವ್ವಾಸೇರು

ಮಂಡ್ಯ, ಏ. ೧೧- ರಾಜ್ಯ ಹಾಗೂ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಪಕ್ಷೇತರ ಅಭ್ಯರ್ಥಿ ಮತ್ತು ಜೆಡಿಎಸ್ ಅಭ್ಯರ್ಥಿಯ ಪರ – ವಿರೋಧದ ಆರೋಪ – ಪ್ರತ್ಯಾರೋಪಕ್ಕೆ ಅಖಾಡವಾಗಿದೆ.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ನ ಸಚಿವರು, ಶಾಸಕರು, ಅಬ್ಬರದ ಪ್ರಚಾರ ನಡೆಸುತ್ತಿದ್ದು, ಅದಕ್ಕೆ ಸಡ್ಡು ಹೊಡೆಯುವ ರೀತಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಚಿತ್ರನಟರಾದ ದರ್ಶನ್, ಯಶ್ ಬಿಡುವಿಲ್ಲದೆ, ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮದ್ದೂರು, ನಾಗಮಂಗಲ ಸೇರಿದಂತೆ, ಜಿಲ್ಲೆಯ ವಿವಿಧೆಡೆ ಪ್ರಚಾರ ನಡೆಸಿ, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಿಖಿಲ್ ಅವರೂ ಕೂಡ ಮಂಡ್ಯ, ಕೆ.ಆರ್. ಪೇಟೆ ಸೇರಿದಂತೆ, ಹಲವು ಭಾಗಗಳಲ್ಲಿ ಪ್ರಚಾರ ನಡೆಸಿ, ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸುಮಲತಾ ಪರವಾಗಿ ನಟ ದರ್ಶನ್, ಕೆ.ಆರ್. ನಗರದ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿ, ಮತಯಾಚಿಸುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿ, ಜನಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ದರ್ಶನ್ ಅವರಿಗೆ ಹಲವು ಚಿತ್ರನಟರು, ವಿವಿಧ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಸಾಥ್ ನೀಡಿದರು.
ಸುಮಲತಾ ಅಂಬರೀಶ್ ಕೂಡ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿ, ಸ್ವಾಭಿಮಾನದ ಸಂಕೇತವಾಗಿ ಚುನಾವಣಾ ಕಣದಲ್ಲಿದ್ದು, ತಮ್ಮನ್ನು ಬೆಂಬಲಿಸಲು ಮತದಾರರಿಗೆ ಮನವಿ ಮಾಡಿದ್ದಾರೆ.
ಬಿಡುವು
ನಟ ಯಶ್ ಚಿತ್ರೀಕರಣದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಇಂದು ಮಂಡ್ಯ ಪ್ರಚಾರದಿಂದ ಬಿಡುವು ಪಡೆದಿದ್ದಾರೆ. ನಾಳೆಯಿಂದ ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದು, ಕೆ.ಆರ್. ನಗರ ಸೇರಿದಂತೆ, ವಿವಿಧ ಭಾಗಗಳಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿನ್ನೆ ಯಶ್ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆಯೂ ನಡೆಯಿತು.

1 Comment on this Post

  1. Vinoda karnam

    ಶಿವರಾಮೇಗೌಡ ಸುಮಲತಾ ಬಗ್ಗೆ ಹಗುರವಾಗಿ ಮಾತಾಡುತ್ತಾನೆ. ಸುಮಲತಾಗೆ ಗಂಡ (ಅಂಬರೀಶ್) ಇಲ್ಲಾ ಅಂತ ಧೈರ್ಯವಾಗಿ ಮಾತಾಡುವ ಶಿವರಾಮೇಗೌಡನಿಗೆ ಬಳ್ಳಾರಿಯಿಂದ ಸೀರೆ ಬಳೆ ಉಡುಗೊರೆಯಾಗಿ ಕಳಿಸುತ್ತೇವೆ.ಯಾರ್ಯಾರ ರಾಜಕೀಯ ವ್ಯಕ್ತಿಗಳ ಹೆಂಡತಿಯರು ಈವರೆಗೂ ಮಂಡ್ಯ ಜನರ ಕಷ್ಟ ಕೇಳಿದ್ದಾರೆ? ಬಸ್ ಆಕ್ಸಿಡೆಂಟ್ ಆಗಿ ೩೦ ಜನ ಪ್ರಾಣ ಬಿಟ್ಟಾಗ ಯಾವ ರಾಜಕಾರಣಿಯ ಹೆಂಡತಿ ಬಂದು ನೋಡಿದ್ದಾರೆ? ದಳದವರು ಅರೆ ಜ್ನಾನಿಗಳು. ಬರೀ ದುಡ್ಡಿನ ಮದ. ತುಂಬಾ ಡೇಂಜರ್ಸ್ ಇವರೇ ರಾಜ್ಯ ಭಾರ ಮಾಡಬೇಕಾ? ಕಂತ್ರಿಗಳು

    Reply

Leave a Comment