ಮಂಜುನಾಥನ ಗೆಳೆಯರ ಆಗಮನ

ಪ್ರಕಾಶ್

ಕಿರುಚಿತ್ರವೊಂದನ್ನು ನಿರ್ದೇಶಿಸುವ ಮೂಲಕ ಸಿನೆಮಾ ರಂಗಕ್ಕೆ ಕಾಲಿಟ್ಟಿದ್ದ ಯುವ ನಿರ್ದೇಶಕ ಅರುಣ್ ಎನ್.ಡಿ. ಈಗ ದಿ.ಮಂಜುನಾಥನ ಗೆಳೆಯರು ಎನ್ನುವ ಚಲನಚಿತ್ರವನ್ನು ಸದ್ದಿಲ್ಲದೇ ಪೂರ್ಣಗೊಳಿಸಿಕೊಂಡು ಬಂದಿದ್ದಾರೆ.

ಈಗಾಗಲೇ ದಿ.ಮಂಜುನಾಥನ ಗೆಳೆಯರು ಚಿತ್ರದ ಚಿತ್ರೀಕರಣ ಇನ್ನಿತರ ಕೆಲಸಗಳು ಪೂರ್ಣಗೊಂಡಿದ್ದು  ಇದೇ ೧೭ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ದಿನಾಂಕವನ್ನು ನಿರ್ದೇಶಕ ಅರುಣ್ ಘೋಷಿಸಿದ್ದಾರೆ.

ಚಿತ್ರದ ಮಾಹಿತಿ ನೀಡಲು ಕಳೆದ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಒಂದೇ ಕಾಲೇಜಿನಲ್ಲಿ  ಇಂಜಿನಿಯರಿಂಗ್ ಪದವಿ ಮುಗಿಸಿದ ಐವರು ಆತ್ಮೀಯ  ಸ್ನೇಹಿತರು  ಬಹಳ ವರ್ಷಗಳ  ನಂತರ ಒಂದು ಸ್ಥಳದಲ್ಲಿ  ಭೇಟಿಯಾಗುತ್ತಾರೆ.ಅದು ಒಂದು ಪೊಲೀಸ್ ಠಾಣೆಯಲ್ಲಿ ಎನ್ನುವುದು ವಿಶೇಷ.ಠಾಣೆಯಲ್ಲಿ ಸಂಧಿಸುವ  ಸಂದಭ ಹೇಗೆ, ಏಕೆ ನಿರ್ಮಾಣವಾಯಿತು ಎಂಬುದನ್ನು ಹೇಳುವ ಸಮಯದಲ್ಲಿ ಮತ್ತೊಂದು ಕಥೆ ಅನಾವರಣಗೊಳ್ಳುತ್ತದೆ.ಆ ಕಥೆ ಏನು ಎನ್ನುವುದೇ ದಿವಂಗತ ಮಂಜುನಾಥನ ಗೆಳೆಯರು ಚಿತ್ರದ ಕೂತೂಹಲಕಾರಿ ಅಂಶ ಎನ್ನುತ್ತಾರೆ. ವಿಶೇಷವಾದ ಶೀರ್ಷಿಕೆಯನ್ನು  ಹೊಂದಿರುವ ಈ ಚಿತ್ರಕ್ಕೆ ಅರುಣ್ ಎನ್.ಡಿ. ಆಕ್ಷನ್-ಕಟ್ ಹೇಳುವುದರ ಜೊತೆ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣವನ್ನು ಸಹ ಮಾಡಿದ್ದಾರೆ.

ಕಾಮಿಡಿ ಥ್ರಿಲ್ಲರ್ ಕಥೆ ಹೊಂದಿರುವ ಮಲ್ಟಿ ಲೇಯರ್ ಸಿನಿಮಾ ಇದು.ಚಿತ್ರದಲ್ಲಿ ಕತೆಯೇ ಹೀರೋ. ಸುಮಾರು ೬-೭ ತಿಂಗಳ ಕಾಲ ಕೂತು  ಚಿತ್ರ ಕತೆಗಾಗಿ ಕೆಲಸ ಮಾಡಿzನೆ. ಇಡೀ ಚಿತ್ರದಲ್ಲಿ ಈ ಟೈಟಲ್ ಕ್ಯಾರಿಯಾಗುತ್ತದೆ.  ನಮ್ಮ ಚಿತ್ರದಲ್ಲಿ ೯೦ ರಷ್ಟು ಹೊಸ ಕಲಾವಿದರೇ ನಟಿಸಿದ್ದಾರೆ. ಎಲ್ಲರನ್ನೂ ಆಡಿಷನ್ ಮೂಲಕವೇ ಆಯ್ಕೆ ಮಾಡಿದ್ದೆವು ಎಂದರು ಅರುಣ್.

ಚಿತ್ರದ ಪ್ರೊಮೋಷನ್‌ಗೆ ಬೆಂಕಿ ಪೊಟ್ಟಣದ ಮೇಲೆ ಚಿತ್ರದ ಪೋಸ್ಟರ್ ಪ್ರಿಂಟ್ ಮಾಡಿಸಿದ್ದೆವು. ಅದಕ್ಕೆ ಒಳ್ಳೇ ಪ್ರತಿಕ್ರಿಯೆ ಬಂತು. ಚಿತ್ರದ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.  ಪುಟ್ಟಣ್ಣ ಸ್ಟುಡಿಯೋ, ಭೂಮಿಕಾ ಎಸ್ಟೇಟ್ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಿzವೆ.  ಚಿತ್ರಕ್ಕೆ  ಯ/ಎ ಸರ್ಟಿಫಿಕೇಟ್ ಸಿಕ್ಕಿದೆ. ಕಾಮಿಡಿ, ಕ್ರೈಂ ಹಾಗೂ ಥ್ರಿಲ್ಲರ್ ಕಥಾಹಂದರ  ಹೊಂದಿರುವ ನಮ್ಮ  ಚಿತ್ರವನ್ನು  ಇದೇ ತಿಂಗಳ ೧೭ರಂದು  ಬಿಡುಗಡೆ ಮಾಡುತ್ತಿzವೆ ಎಂದು ವಿವರ ನೀಡಿದರು.

ಚಿತ್ರದ  ಪ್ರಮುಖ  ಪಾತ್ರದಲ್ಲಿ  ರುದ್ರಪ್ರಯಾಗ್ ಹಾಗೂ ಶೀತಲ್ ಪಾಂಡೆ  ನಟಿಸಿದ್ದು, ಶಂಕರ್ ಮೂರ್ತಿ ಅವಿನಾಶ್ ಮುದ್ದಪ್ಪ, ಸತೀಶ್ ಉಳಿದ ತಾರಾಬಳಗದಲ್ಲಿದ್ದಾರೆ. ಇವರೆಲ್ಲ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಚಿತ್ರದ ಮಂಜುನಾಥನ ಪಾತ್ರದಾರಿ ಸಚ್ಚಿದಾನಂದ ಕೂಡ ಹಾಜರಿದ್ದು ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿನಯ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅರುಣ್ ಹಾಗೂ ಗೋಪಿ ಶೀಗೆಹಳ್ಳಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರವಿ ಪೂಜಾರ ಈ ಚಿತ್ರದ ಕಲಾ ನಿರ್ದೇಶನ ಮಾಡುವುದರೊಂದಿಗೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

Leave a Comment