ಮಂಗಳ ಗ್ರಹದಲ್ಲಿಯೂ ಪ್ರವಾಹ

ಮಂಗಳ ಗ್ರಹದ ಮೇಲಿನ ಪುರಾತನ ಕಣಿವೆಯಲ್ಲಿಯ ಭೂಭಾಗದಲ್ಲಿ ಹಿಂದೊಮ್ಮೆ ನೀರು ಹರಿದಿರುವ ಕುರುಹುಗಳನ್ನು ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ.

ಮಂಗಳ ಗ್ರಹದಲ್ಲಿಯೂ ಭೂಮಿಯ ಮೇಲಿನಿಂದ ಪ್ರವಾಹಗಳು ಹರಿದಿವೆ ಎಂದು ಇತ್ತೀಚಿನ ಅಧ್ಯಯನ ವರದಿಗಳು ಹೇಳಿವೆ.

ಮಂಗಳನಲ್ಲಿ ಜೀವಿಗಳು ಇರುವ ಸಾಧ್ಯತೆ ಕುರಿತಂತೆ ಅಧ್ಯಯನ ನಡೆಸುತ್ತಿರುವ ಸಂಶೋಧನೆ ಮತ್ತು ಸಂಶೋಧನೆಗಳಿಗೆ ಈ ಇತ್ತೀಚಿನ ವರದಿ ಹೊಸಉತ್ಸಾಹ ಮೂಡಿಸಿದೆ.

ಅದರ ಮೇಲ್ಮೈ ಮೇಲಿನ ಹಳ್ಳಗಳು, ಇಳಿಜಾರುಗಳು ಅಲ್ಲಿ ಹಿಂದೆ ನೀರು ಹರಿಯುವುದನ್ನು ದೃಢಪಡಿಸುತ್ತವೆ.

ಹಲವು ಲಕ್ಷಣಗಳಲ್ಲಿ ಭೂಮಿಯನ್ನು ಹೋಲುವ ಮಂಗಳ ಗ್ರಹದಲ್ಲಿಯೂ ಹಿಂದೊಮ್ಮೆ ನೀರು ಹೇರಳವಾಗಿತ್ತು.

ಭೂಮಿಯ ಮೇಲಿನ ಸಮುದ್ರ, ಮರುಭೂಮಿಗಳು ರೂಪಾಂತರಗೊಂಡಂತೆ ಮಂಗಳನಲ್ಲಿ ಸಮುದ್ರ ಪ್ರವಾಹಗಳು ಈಗ ಬತ್ತಿಹೋಗಿರಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಗಳನಲ್ಲಿ ಜೀವ ವಾಸದ ಸಾಧ್ಯತೆ ಕುರಿತಂತೆ ನಡೆಯುತ್ತಿರುವ ಶೋಧನಾ ಕಾರ್ಯಕ್ಕೆ ಇದು ಆಶಾದಾಯಕ ಅಂಶವಾಗಿದೆ.

ಮಂಗಳ ಗ್ರಹ ಮೇಲ್ಮೈಯಲ್ಲಿ ಹಿಂದೊಮ್ಮೆ ಪ್ರವಾಹ ಹರಿದಿದೆ ಎಂಬುದನ್ನು ಸೂಚಿಸುವ ಕುರುಹುಗಳು ಪತ್ತೆಯಾಗಿವೆ ಎಂದು ಬ್ರಿಟನ್ನಿನ ಡಬ್ಲಿನ್‌ನಲ್ಲಿರುವ ಟ್ರಿನಿಟಿ ಕಾಲೇಜಿನ ಮ್ಯಾರಿ ಬೌರ್ಕೆ ಹೇಳಿದ್ದಾರೆ.

ಮಂಗಳ ಗ್ರಹದ ಶೋಧನೆಯಲ್ಲಿರುವ ಉಪಗ್ರಹಗಳು ರವಾನಿಸಿರುವ ಅದರ ಮೇಲ್ಮೈ ಛಾಯಾಚಿತ್ರ ಅಧ್ಯಯನದ ವೇಳೆ ಅಲ್ಲಿ ನೀರು ಹರಿದಿರುವುದು ಖಚಿತಪಟ್ಟಿದೆ. ಈ ಪ್ರಕ್ರಿಯೆ ತೀರಾ ಹಿಂದಿನದ್ದೇನಲ್ಲ ಎಂದೂ ಮ್ಯಾರಿ ಬೌರ್ಕೆ ಹೇಳಿದ್ದಾರೆ.

ಭೂಮಿಯ ಮೇಲಿನ ಸಾಗರ ಸಮುದ್ರ ಮರುಭೂಮಿಯ ಸ್ಥಿತ್ಯಂತರಗಳ ಆಧಾರದಲ್ಲಿಯೇ ಮಂಗಳನ ಮೇಲ್ಮೈನಲ್ಲೂ ಸ್ಥಿತ್ಯಂತರಗಳು ಆಗಿರಬೇಕು ಎಂದು ಈ ಹಿಂದಿನ ಅಧ್ಯಯನಗಳು ಅಭಿಪ್ರಾಯಪಟ್ಟಿದ್ದವು.

ಮಂಗಳನ ಮೇಲ್ಮೈಯಲ್ಲಿನ ಕಡಿದಾದ ಕಣಿವೆಯಾಕಾರದ ಇಳಿಜಾರುಗಳು ಪ್ರವಾಹ ಹರಿದಿರುವುದರಿಂದ ಉಂಟಾಗಿವೆ ಎಂಬುದನ್ನು ಅದರ ಮೇಲ್ಮೈ ಛಾಯಾಚಿತ್ರಗಳ ಅಧ್ಯಯನದಿಂದ ದೃಢಪಡುತ್ತದೆ.

ಭೂಮಿಯನ್ನು ಹೋಲುತ್ತದೆ

ಮಂಗಳ ಗ್ರಹ ಹಲವು ಲಕ್ಷಣಗಳಲ್ಲಿ ಭೂಮಿಯನ್ನು ಹೋಲುತ್ತದೆ. ಇದರ ಮೇಲಿನ ದಿನದ ಅವಧಿಯು 24.37.5 ನಿಮಿಷ, ಇಲ್ಲಿಯೂ ಬೇಸಿಗೆ, ಚಳಿಗಾಲಗಳು ಇವೆ. ಇದರ ವಾತಾವರಣದಲ್ಲಿಯೂ ಸಾರಜನಕ, ಇಂಗಾಲದ ಡೈಯಾಕ್ಸೈಡ್, ಆಮ್ಲಜನಕ ಆಗ್ರನ್ ಮತ್ತು ತೇವಾಂಶಗಳಿವೆ. ಈ ಆಧಾರದಲ್ಲಿಯೇ ಲಕ್ಷಾಂತರ ವರ್ಷಗಳ ಹಿಂದೆ ಇದರ ಮೇಲ್ಮೈ ಮೇಲೆ ನೀರು ಇತ್ತೆಂದು ತೀರ್ಮಾನಕ್ಕೆ ಬರಲು ಕಾರಣವಾಗಿದೆ. ಇದರ ಧ್ರುವ ಪ್ರದೇಶಗಳಲ್ಲಿ ನೀರು ಹಿಮದ ರೂಪದಲ್ಲಿ ಇರುವ ಸಾಧ್ಯತೆ ಬಗ್ಗೆಯೂ ಶೋಧನೆಗಳು ನಡೆಯುತ್ತಿವೆ.

 

Leave a Comment