ಮಂಗಳ ಗ್ರಹಕ್ಕೆ ಮಾನವ ಯಾನಿಗಳು

ಮಂಗಳ ಗ್ರಹಕ್ಕೆ ಮಾನವ ಯಾನಿಗಳನ್ನು ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿರುವ ನಾಸಾ, ಈಗ ಅದರ  ಸಾಧಕ-ಬಾಧಕಗಳ ಪೂರ್ವಬಾವಿ ಸಿದ್ಧತೆಯಲ್ಲಿ  ತೊಡಗಿದೆ.

ಮಂಗಳ ಗ್ರಹಕ್ಕೆ ಮಾನವ ಯಾನಿಗಳನ್ನು ಕಳುಹಿಸಲು ಯೋಜನೆ ರೂಪಿಸಿರುವ ನಾಸಾ, ಈಗ ಗಗನ ಯಾನಿಗಳ ಸುರಕ್ಷತೆ ಕುರಿತ ಅಧ್ಯಯನದಲ್ಲಿ ನಿರತವಾಗಿದೆ. ಸುಮಾರು ೩ ವರ್ಷಗಳಷ್ಟು ದೀರ್ಘ ಅವಧಿಯಲ್ಲಿ ಬಾಹ್ಯಾಕಾಶದಲ್ಲಿ ಯಾನ ಮಾಡಬೇಕಿರುವ ಗಗನ ಯಾನಿಗಳ ದೇಹ ಹಾಗೂ ಮನಸ್ಸಿನ ಮೇಲೆ ಅಲ್ಲಿಯ ಪ್ರತಿಕೂಲ ಹವಾಮಾನ ಬೀರುವ ಪರಿಣಾಮ, ಅದರಿಂದ ರಕ್ಷಣೆ ಕುರಿತಂತೆ ಕೈಗೊಳ್ಳಬೇಕಾದ ತಾಂತ್ರಿಕ ಮತ್ತು ವೈಜ್ಞಾನಿಕ ಕ್ರಮಗಳ ಕುರಿತಂತೆ ಅಧ್ಯಯನ, ಸಲಹೆ ಪ್ರಸ್ತಾವನೆಗಳನ್ನು ಕಳುಹಿಸಲು ನಾಸಾದ ಮಾನವ ಅಭಿವೃದ್ಧಿ ಘಟಕ ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಸಂಸ್ಥೆಗಳನ್ನು ಕೋರಿದೆ.

ಯಾನ ೩ ವರ್ಷಗಳಷ್ಟು ಸುದೀರ್ಘ ಅವಧಿಯದಾಗಿದ್ದು, ಅಷ್ಟು ಕಾಲ ಗಗನ ಯಾನಿಗಳು ಬಾಹ್ಯಾಕಾಶದಲ್ಲಿರಬೇಕಾಗುತ್ತದೆ.

ಇಷ್ಟು ದೀರ್ಘ ಅವಧಿ ಯಾನಿಗಳು ಬಾಹ್ಯಾಕಾಶದಲ್ಲಿ ಇರಬೇಕಾಗಿರುವುದರಿಂದ, ಅಲ್ಲಿಯ ಪ್ರತಿಕೂಲ ಹವಾಮಾನ ಇವರ ಮೇಲೆ ಬೀರುವ ಪರಿಣಾಮಗಳ ಕುರಿತ ಅಧ್ಯಯನವನ್ನು ಕೈಗೆತ್ತಿಕೊಂಡಿರುವ ನಾಸಾದ ಮಾನವ ಅಧ್ಯಯನ ವಿಭಾಗ, ಈ ಕುರಿತಂತೆ ಸಂಶೋಧನೆ ಮತ್ತು ತಾಂತ್ರಿಕ ಸಲಹೆಗಳನ್ನು ಕಲೆ ಹಾಕಲು ಮುಂದಾಗಿದೆ.

ಸುರಕ್ಷಿತ ಹಾಗೂ ಫಲಪ್ರದ ಯಾನಕ್ಕಾಗಿ ಕೈಗೊಳ್ಳಬೇಕಾದ ವೈಜ್ಞಾನಿಕ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳು ಕುರಿತಂತೆ ಸಲಹೆ, ಪ್ರಸ್ತಾವನೆ ಕಳುಹಿಸಲು ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಂಸ್ಥೆಗಳನ್ನು ಕೋರಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ೬ ತಿಂಗಳ ಕಾಲ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಸುರಕ್ಷಿತವಾಗಿ ವಾಪಸ್ಸು ಬಂದಿದ್ದಾರೆ. ಆದರೆ, ಮಂಗಳಯಾನ ಅತಿ ಹೆಚ್ಚಿನ ಅವಧಿಯಾಗಿದ್ದು, ಅಷ್ಟು ಕಾಲವೂ ಅವರು ಬಾಹ್ಯಾಕಾಶದಲ್ಲಿದ್ದು, ಅಲ್ಲಿ ಎದುರಾಗುವ ಎಲ್ಲ ಪರಿಣಾಮಗಳಿಗೆ ಮೈಯೊಡ್ಡಬೇಕಿದೆ. ಹೀಗಾಗಿ, ಗಗನಯಾನಿಗಳ ಸುರಕ್ಷತೆ ಪ್ರಮುಖ ಪ್ರಶ್ನೆಯಾಗಿದೆ.

ಬಾಹ್ಯಾಕಾಶದಲ್ಲಿಯ ವಿಕಿರಣ, ಭೂಮಿಯಿಂದ ಅತಿ ದೂರದ್ದಲ್ಲಿಯ ಯಾನ, ಅಲ್ಲಿಯ ಗುರುತ್ವಾಕರ್ಷಣೆ, ಪ್ರತಿಕೂಲ ಹವಾಮಾನ ಇವು ಗಗನ ಯಾನಿಗಳ ಮನಸ್ಸು ಮತ್ತು ದೇಹದ ಮೇಲೆ ಬೀರುವ ಪರಿಣಾಮಗಳ ಅಧ್ಯಯನ ಸುರಕ್ಷಿತ ಹಾಗೂ ಫಲಪ್ರದ ಯಾನಕ್ಕೆ ಅತ್ಯಾವಶ್ಯಕ ಎಂದು ಮನಗಂಡಿರುವ ನಾಸಾ, ಈ ಕುರಿತ ಅಧ್ಯಯನಕ್ಕೆ ವ್ಯಾಪಕ ಕ್ರಮ ಕೈಗೊಂಡಿದೆ ಎಂದು ನಾಸಾ ಮೂಲಗಳು ತಿಳಿಸಿವೆ.

Leave a Comment