ಮಂಗಳೂರಿನ ವ್ಯಕ್ತಿಗೂ ಕೊರೊನಾ ಸೋಂಕು?

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ಚಿಕ್ಕಮಗಳೂರು, ಮಾ.೧೩- ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಕೊರೊನಾ ಸೋಂಕಿನ ಅನುಮಾನದ ಮೇಲೆ ಮಂಗಳೂರು ಮೂಲದ ೪೫ ವರ್ಷ ಪ್ರಾಯದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ೧೫ ದಿನಗಳ ಹಿಂದೆ ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿ ತನ್ನ ಸೋದರಿಯ ಮನೆಗೆ ಬಂದಿದ್ದ ವೇಳೆ ತೀವ್ರ ಜ್ವರ ಕಾಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ವ್ಯಕ್ತಿಗೆ ತೀವ್ರ ಜ್ವರ, ಕೆಮ್ಮು ಶೀತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋದರಿಯ ಮನೆಗೆ ಆಗಮಿಸಿದ ವೇಳೆಯಲ್ಲಿ ಕಾಣಿಸಿದ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಬಂದಿದ್ದರು. ಜ್ವರ ನಿಂಯತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ರೋಗಿಯ ರಕ್ತ ಸಂಗ್ರಹಿಸಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Comment