ಮಂಗಳೂರಿನ ದೇರಳಕಟ್ಟೆಯಲ್ಲಿ ಅಟೋಮಬೈಲ್ ಅಂಗಡಿ ಬೆಂಕಿಗೆ ಆಹುತಿ: ದುಷ್ಕರ್ಮಿಗಳ ಕೈವಾಡ ಶಂಕೆ

ಮಂಗಳೂರು, ಜ 17 – ನಗರದ ದೇರಳಕಟ್ಟೆಯಲ್ಲಿನ ಅಟೋಮಬೈಲ್ ಅಂಗಡಿಯೊಂದು ಶುಕ್ರವಾರ ಬೆಂಕಿಗೆ ಆಹುತಿಯಾಗಿದ್ದು, ಅಂಗಡಿ ಮಾಲೀಕನಿಗೆ ಭಾರೀ ನಷ್ಟವಾಗಿದೆ.
ಶನಿವಾರ ಬೆಳಿಗ್ಗೆ ಅಂಗಡಿ ಮಾಲೀಕ ಬಾಗಿಲು ತೆರೆದಾಗ ಘಟನೆ ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಅಂಗಡಿಗೆ ಬೆಂಕಿ ಇಟ್ಟಿರಬಹುದೆಂದು ಸ್ಥಳೀಯರು ಶಂಕಿಸಿದ್ದು, ಶುಕ್ರವಾರ ರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಆರಂಭಿಸಲಾಗಿದೆ.
ಇತ್ತೀಚೆಗೆ ಇದೇ ಪ್ರದೇಶದಲ್ಲಿ ಸಿಎಎ ವಿರುದ್ಧದ ಪ್ರತಿಭಟನಾ ಸಮಾವೇಶಕ್ಕಾಗಿ ಕುರ್ಚಿಗಳನ್ನು ತುಂಬಿದ್ದ ಲಾರಿಯೊಂದಕ್ಕೆ ರಾತ್ರಿ ವೇಳೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಕುರ್ಚಿಗಳ ಸಮೇತ ಲಾರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಿಂದ ಮೊದಲೇ ಗಲಭೆಗಳಿಂದ ಭಯ-ಭೀತರಾಗಿದ್ದ ನಗರದ ಜನರು ಮತ್ತೆ ಆತಂಕಕ್ಕೆ ಒಳಗಾಗಿದ್ದರು.

Leave a Comment