ಮಂಗಳಮುಖಿಯರ ಮೇಲೆ ಆನಂದಿ ತಂಡದಿಂದ ಹಲ್ಲೆ

ಬೆಂಗಳೂರು,ಸೆ.೭-ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಇಬ್ಬರ ಮೇಲೆ ಮಂಗಳಮುಖಿ ಆನಂದಿ ಮತ್ತವರ ತಂಡ ಹಲ್ಲೆ ನಡೆಸಿ ಪರಾರಿಯಾಗಿದೆ.
ಆನಂದಿ ಮತ್ತವರ ತಂಡದಿಂದ ಹಲ್ಲೆಗೊಳಗಾಗಿರುವ ಮಂಗಳಮುಖಿ ಚಿತ್ರ ಹಾಗೂ ಸತ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಣಸವಾಡಿಯ ಕೆಹೆಚ್‌ಬಿ ಕ್ವಾಟ್ರಸ್ ಬಳಿ ಮಂಗಳಮುಖಿ ಆನಂದಿ ಮತ್ತವರ ಸಹಚರರು ಮಂಗಳಮುಖಿ ಚಿತ್ರ ಹಾಗೂ ಸತ್ಯ ಮೇಲೆ ಲಾಂಗು-ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದು ಈ ಸಂಬಂಧ ದೂರು ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಬಾಲಕನೋರ್ವನಿಗೆ ಚಿತ್ರಹಿಂಸೆ ನೀಡಿ ಲಿಂಗಪರಿವರ್ತನೆ ಮಾಡಿಸಿದ್ದ ಪ್ರಕರಣದಲ್ಲಿ ಆನಂದಿ ಹಾಗೂ ಆಕೆಯ ಖತರ್‌ನಾಕ್ ತಂಡವನ್ನು ಪೊಲೀಸರು ಬಂಧಿಸಿದ್ದರು.
ಕಳೆದ ಆರು ತಿಂಗಳ ಹಿಂದೆ ಜಾಮೀನಿನ ಪಡೆದು ಜೈಲಿನಿಂದ ಹೊರಬಂದಿದ್ದ ಆನಂದಿ ಮತ್ತವರ ಸಹಚರರು ಮಂಗಳಮುಖಿಯರಿಂದ ಹಫ್ತಾ ವಸೂಲಿ ಮಾಡುತ್ತಿದ್ದರು.
ಕೆಲ ಮಂಗಳಮುಖಿಯರಿಗೆ ಬಲವಂತವಾಗಿ ಭಿಕ್ಷಾಟನೆ ಹಾಗೂ ಲೈಂಗಿಕ ಕಾರ್ಯಕರ್ತರಾಗುವಂತೆ ಪ್ರಚೋದಿಸುತ್ತಿದ್ದಳು.ಆನಂದಿಯ ಈಕೃತ್ಯವನ್ನು ಮಂಗಳಮುಖಿಯರಾದ ಚಿತ್ರ ಹಾಗೂ ಸತ್ಯ ಪ್ರಶ್ನಿಸಿದ್ದಕ್ಕೆ ,ಆನಂದಿ ಹಾಗೂ ಆಕೆಯ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿ ಆನಂದಿ ಮತ್ತವರ ತಂಡಕ್ಕಾಗಿ ಶೋಧ ನಡೆಸಿದ್ದಾರೆ.

Leave a Comment