ಮಂಗಳನಲ್ಲಿ ಅನ್ಯಗ್ರಹ ಜೀವಿ

ಅನ್ಯಗ್ರಹ ಜೀವಿಗಳು ಇವೆ ಎಂಬುದನ್ನು ನಾಸಾದ ಕ್ಯೂರಿಯಾಸಿಟಿ ರೋವರ್ ಬಾಹ್ಯಾಕಾಶ ಶೋಧನಾ ನೌಕೆ ಕಳುಹಿಸಿರುವ ಚಿತ್ರಗಳು ಸಂಪೂರ್ಣ ಪುಷ್ಠಿ ನೀಡುತ್ತವೆ.

ಮಂಗಳ ಗ್ರಹ ಶೋಧನೆಯಲ್ಲಿಯ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಕಳುಹಿಸಿರುವ ಛಾಯಾಚಿತ್ರಗಳಲ್ಲಿ ಆ ಗ್ರಹದಲ್ಲಿ ಅನ್ಯಗ್ರಹ ಜೀವಿಗಳು (ಅಲಿಯನ್ಸ್) ಇರುವ ಸ್ಪಷ್ಟ ಚಿತ್ರಗಳು ಇವೆ. ಮಾರ್ಚ್ 30 ರಂದು ಈ ಚಿತ್ರಗಳನ್ನು ಯೂಟೂಬ್‌ಗೆ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಮಂಗಳ ಗ್ರಹದಲ್ಲಿ ಚಿಕ್ಕ ಅನ್ಯಜೀವಿ ಎಂದು ಶಿರೋನಾಮೆ ನೀಡಲಾಗಿದೆ.

ಭೂಮಿಯಲ್ಲಿರುವಂತೆ ಅನ್ಯಗ್ರಹಗಳಲ್ಲೂ ಜೀವಿಗಳಿಗೆ ಈ ಅನ್ಯಗ್ರಹ ಜೀವಿಗಳು ನಮಗಿಂತ ಬುದ್ಧಿವಂತ ಜೀವಿಗಳಾಗಿದ್ದು, ಅವು ಆಗಾಗ ಭೂಮಿಗೆ ಬಂದು ಹೋಗುತ್ತವೆ ಎಂಬ ಕಥೆಗಳು ಜನಜನಿತವಾಗಿದ್ದರೂ, ಈವರೆಗೆ ಅವಕ್ಕೆ ವೈಜ್ಞಾನಿಕ ಸ್ಪಷ್ಟತೆ ಇಲ್ಲ.

ಕಳೆದ ತಿಂಗಳು ಮಾರ್ಚ್ 30 ರಂದು ಯೂಟೂಬ್‌ಗೆ ಅಪ್ ಲೋಡ್ ಮಾಡಿರುವ ನಾಸಾದ ಚಿತ್ರಗಳಲ್ಲಿ ಮಂಗಳನಲ್ಲಿ ಅನ್ಯ ಗ್ರಹ ಜೀವಿ ಇದೆ ಎಂಬುದಕ್ಕೆ ಸ್ಪಷ್ಟ ಪುರಾವೆಯನ್ನು ಒದಗಿಸುತ್ತದೆ.

ಆ ಛಾಯಾಚಿತ್ರಗಳಲ್ಲಿ ಕಲ್ಲುಬಂಡೆಯ ಪಕ್ಕದಲ್ಲಿ ನಿಂತಿರುವ ಚಿಕ್ಕ ಪ್ರತಿಬಿಂಬದಲ್ಲಿ ಅದರ ಮುಖ, ಕಾಲುಗಳು ಕಾಣುತ್ತವೆ.

ಮನುಷ್ಯರನ್ನು ಹೋಲುವಂತಹ ಪ್ರತಿಬಿಂಬಗಳು ಸ್ಪಷ್ಟವಾಗಿ ಕಂಡಿದ್ದೇವೆ ಎಂದು ಈ ಹಿಂದಿನ ಕೆಲವು ಗಗನಯಾನಿಗಳು ಹೇಳಿದ್ದಾರೆಯಾದರೂ, ಇದನ್ನು ವೈಜ್ಞಾನಿಕವಾಗಿ ಪುಷ್ಠೀಕರಿಸಲು ಸಾಧ್ಯವಾಗಿಲ್ಲ.

ಊಹಾಪೋಹ

ಅನ್ಯ ಗ್ರಹಗಳಲ್ಲಿ ಜೀವಿಗಳು ಇವೆ ಎಂಬ ಕುತೂಹಲ ಇಂದಿನದಲ್ಲ. ಹಲವು ದಶಕಗಳಿಂದ ಈ ಕುತೂಹಲ, ಕುತೂಹಲವಾಗೇ ಕಾಡುತ್ತಿದೆ. ಅನ್ಯಜೀವಿಗಳಲ್ಲಿ ಭೂಮಿಯಲ್ಲಿರುವ ಮಾನವರಿಗಿಂತ ಅತಿ ಬುದ್ಧಿವಂತ ಜನರಿದ್ದಾರೆ. ಅವರು ಆಗಾಗ ಭೂಮಿಗೆ ಬಂದುಹೋಗುತ್ತಾರೆ ಎಂಬ ಕಥೆಗಳು ಈ ಹಿಂದೆ ಭಾರಿ ಪ್ರಚಾರದಲ್ಲಿದ್ದವು.

ಮನುಷ್ಯರನ್ನು ಹೋಲುವ ಜೀವಿಗಳು ಬಂದು ಓಡಾಡುತ್ತಿದ್ದವು. ನಮ್ಮನ್ನು ನೋಡಿದ ತಕ್ಷಣ ತಟ್ಟೆಯಾಕಾರದ ವಿಮಾನದಲ್ಲಿ ಕೂತು ಹಾರಿಹೋದವು ಎಂಬುವ ಹೇಳಿಕೆಗಳನ್ನು ಆರಂಭಿಸಿದ ವರದಿಗಳು ಬಂದಿದ್ದವು. ಇದರ ಆಧಾರದಲ್ಲಿಯ ಬಾಲಿವುಡ್ ಅಲಿಯನ್ ಹೆಸರಿನ ಚಲನಚಿತ್ರಗಳನ್ನು ತಯಾರಿಸಿದೆ. ಅದರಲ್ಲಿ ಬರುವ ಅನ್ಯಗ್ರಹ ಜೀವಿಗಳು ಮನುಷ್ಯರಿಗಿಂತ ಎಷ್ಟೇ ಪಾಲು ಮುಂದುವರಿದ ತಂತ್ರಜ್ಞಾನವನ್ನು ಸಾಧಿಸಿರುವುದನ್ನು ಆ ಚಿತ್ರಗಳಲ್ಲಿ  ಕಾಣಬಹುದಾಗಿದೆ.

ಅಮೆರಿಕಾದ ವಿಜ್ಞಾನಿಗಳು 1960 ರಲ್ಲಿ ಕೆಲವು ನಕ್ಷತ್ರಗಳಿಂದ ರೇಡಿಯೊ ಸಂಕೇತಗಳನ್ನು ಪಡೆದರು.

ಈ ಸಂಕೇತಗಳು ಇತರೆ ಗ್ರಹಗಳಲ್ಲಿ ಜೀವಿಗಳು ಇರಬಹುದು ಎಂಬ ಭಾವನೆಗೆ ಎಡೆಮಾಡಿಕೊಟ್ಟಿತ್ತು.

ಇದೇ ವೇಳೆ ಹಾರಾಡುವ ವಸ್ತುಗಳನ್ನು ಆಕಾಶದಲ್ಲಿ ನೋಡಿದ್ದಾಗಿ ಜನ ಮಾತನಾಡಿಕೊಳ್ಳತೊಡಗಿದ್ದರು. ಇವುಗಳಲ್ಲಿ ಕೆಲವು ವಸ್ತುಗಳು ತಟ್ಟೆಯ ಆಕಾರದಲ್ಲಿದ್ದಿದ್ದರಿಂದ ಅದನ್ನು ಹಾರಾಡುವ ತಟ್ಟೆಗಳು (ಫ್ಲೈಯಿಂಗ್ ಸಾಸಱ್ಸ್) ಎಂದು ಕರೆದರು.

ಈ ತಟ್ಟೆಗಳಲ್ಲಿ ಅನ್ಯಗ್ರಹ ಜೀವಿಗಳು ಕೂತು ಭೂಮಿಗೆ ಬಂದು ಹೋಗುತ್ತವೆ ಎಂಬ ವರದಿಗಳು ಪ್ರಚಾರದಲ್ಲಿದ್ದವು. ಈ ಹಾರಾಡುವ ತಟ್ಟೆಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. ಈ ತಟ್ಟೆಗಳನ್ನು ವಿಮಾನಗಳು ಹಿಂಬಾಲಿಸಿ ಅವುಗಳ ಅಧ್ಯಯನ ನಡೆಸಲಾಗಿದೆ.

 -ಉತ್ತನೂರು ವೆಂಕಟೇಶ್

Leave a Comment