ಮಂಗಳದ ಮಾಹಿತಿ ರವಾನಿಸೊ ಕ್ಯೂಬ್ ಸ್ಯಾಟ್ಸ್

ಉತ್ತನೂರು ವೆಂಕಟೇಶ್

ಮಂಗಳಗ್ರಹದ ಒಳರಚನೆಯ ಅಧ್ಯಯನಕ್ಕೆಂದು ನಾಸಾ ಉಡಾವಣೆ ಮಾಡಿರುವ ‘ಇನ್‌ಸೈಟ್ ಬಾಹ್ಯಾಕಾಶ ನೌಕೆ ಸಂಗ್ರಹಿಸುವ ಮಾಹಿತಿಯನ್ನು ಭೂನಿಯಂತ್ರಣ ಕೇಂದ್ರಕ್ಕೆ ರಿಲೇ ಮಾಡುವ ಕಾರ್ಯವನ್ನು ಕ್ಯೂಬ್ ಸ್ಯಾಟ್‌ಗಳು ನಿರ್ವಹಿಸುತ್ತವೆ.

  •  ಮಂಗಳ ಗ್ರಹದ ಒಳರಚನೆ ಹೇಗಿದೆ ಎಂಬ ಅಧ್ಯಯನವೆ ‘ಇನ್‌ಸೈಟ್ ನೌಕೆಯ ಮುಖ್ಯ ಗುರಿ.

  • ಮೇ 5 ರಂದು ಉಡಾವಣೆಗೊಂಡು ನ. 26 ರಂದು ಮಂಗಳ ಗ್ರಹದಲ್ಲಿ ಇಳಿಯುವ ಈ ನೌಕೆ ಎರಡು ವರ್ಷ ಗ್ರಹದ ಅಧ್ಯಯನ ಕಾರ್ಯ ನಡೆಸುತ್ತದೆ.

  •  ಮಂಗಳ ಗ್ರಹದಲ್ಲಿ ಅಗೆಯುವ, ಒಳ ಕಂಪನಗಳನ್ನು ಅಳೆಯುವ ಸಾಧನಗಳೂ ಈ ನೌಕೆಯಲ್ಲಿವೆ.

  • ಹಾಗೆಯೇ ನೌಕೆ ಸಂಗ್ರಹಿಸುವ ಎಲ್ಲ ಮಾಹಿತಿಯನ್ನು ಕ್ಯೂಬ್ ಸ್ಯಾಟ್ಸ್ ಎಂಬ ಎರಡು ಪುಟ್ಟ ಉಪಗ್ರಹಗಳು ಭೂಕೇಂದ್ರಕ್ಕೆ ರವಾನಿಸುತ್ತವೆ.

1vichara1

ಮೇ 5 ರಂದು ಮಧ್ಯ ಕ್ಯಾಲಿಫೋರ್ನಿಯಾದ ವ್ಯಾಂಡೆಸ್‌ಬರ್ಗ್ ವಾಯುನೆಲೆಯಿಂದ ಉಡಾವಣೆಗೊಂಡ ‘ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೊರೇಷನ್ ಯೂಸಿಂಗ್ ಸಿಸ್ಮಿಕ್ ಇನ್‌ವೆಸ್ಟಿಗೇಷನ್ ಜಿಯೊಡೆಸಿ ಅಂಡ್ ಹೀಟ್ಸ್ ಟ್ರಾನ್ಸ್‌ಪೋರ್ಟ್) ಬಾಹ್ಯಾಕಾಶ ನೌಕೆಯೊಂದಿಗೇ ಈ ಜೋಡಿ ಕ್ಯೂಬ್ ಸ್ಯಾಟ್‌ಗಳನ್ನು ಜೋಡಿಸಿ ಉಡಾವಣೆ ಮಾಡಲಾಗಿದೆ.

‘ಇನ್‌ಸೈಟ್ ಒಟ್ಟು ೪೮.೫ ಕೋಟಿ ಕಿ.ಮೀ ದೂರವನ್ನು ೨೦೫ ದಿನಗಳ ಕಾಲ ಪ್ರಯಾಣಿಸಿ, ನವೆಂಬರ್ ೨೬ ರಂದು ಮಂಗಳ ಗ್ರಹವನ್ನು ತಲುಪಲಿದೆ. ಗ್ರಹವನ್ನು ತಲುಪಿದ ನಂತರ ನೌಕೆಯನ್ನು ಗ್ರಹದ ಮೇಲೆ ಯಾವ ಜಾಗದಲ್ಲಿ ಇಳಿಸಬೇಕು ಎಂದು ನಾಸಾ ಈಗಾಗಲೇ ನಿಗಧಿ ಮಾಡಿದ್ದು, ಅದರಂತೆ ಗ್ರಹದಲ್ಲಿಯ ಅತ್ಯಂತ ಸುರಕ್ಷಿತ ಪ್ರದೇಶವಾದ ಎಲಸಿಂ ಪ್ಲಾನಿಟೀಯದಲ್ಲಿ ಇಳಿಯುತ್ತದೆ.

‘ಇನ್‌ಸೈಟ್ ಮಂಗಳ ಗ್ರಹದಲ್ಲಿ ತಳವೂರುವವರೆವಿಗೂ ಅದರೊಂದಿಗೇ ಇರುವ ಈ ಕ್ಯೂಬ್ ಸ್ಯಾಟ್‌ಗಳು ನಂತರ ಮಾತೃ ನೌಕೆಯಿಂದ ಬೇರ್ಪಟ್ಟು ನೌಕೆಯನ್ನು ಹಿಂಬಾಲಿಸಿ ಮಾಹಿತಿ ರವಾನೆ ಕಾರ್ಯನಿರ್ವಹಿಸುತ್ತವೆ. ತಮ್ಮಲ್ಲಿರುವ ಸೌರಫಲಕಗಳನ್ನು ಬಿಚ್ಚಿಕೊಂಡು ಅದರಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನು ಇವು ತಮ್ಮ ಕಾರ್ಯನಿರ್ವಹಣೆಗೆ ಬಳಸಿಕೊಳ್ಳುತ್ತವೆ.

ಜೋಡಿ ಉಪಗ್ರಹಗಳು

ಸೂಟ್‌ಕೇಸ್ ಗಾತ್ರದ ಮಾರ್ಕೊ-ಎ ಮತ್ತು ಮಾರ್ಕೊ-ಬಿ ಎಂಬ ಎರಡು ಕ್ಯೂಬ್ ಸ್ಯಾಟ್‌ಗಳನ್ನು ‘ ಮಾರ್ಸ್ ಕ್ಯೂಬ್ ಒನ್ ಎಂಬ ನೌಕೆಯಲ್ಲಿ ಒಟ್ಟಾಗಿ ಜೋಡಿಸಿ ‘ಇನ್‌ಸೈಟ್ ನೊಂದಿಗೆ ರವಾನಿಸಲಾಗಿದೆ. ಮಂಗಳ ಗ್ರಹದ ಒಳ ರಚನೆಯ ಕುರಿತಂತೆ ‘ಇನ್‌ಸೈಟ್ ಸಂಗ್ರಹಿಸುವ ಮಾಹಿತಿಯನ್ನು ಈ ಕ್ಯೂಬ್ ಸ್ಯಾಟ್‌ಗಳು ತಮ್ಮ ವಿಶೇಷ ಆಂಟೆನಾಗಳ ಮೂಲಕ ಸಂದೇಶ ರೂಪದಲ್ಲಿ ಭೂ ಕೇಂದ್ರಕ್ಕೆ ರವಾನಿಸುತ್ತವೆ ಎಂದು ಯೋಜನೆಯ ಮುಖ್ಯ ವಿಜ್ಞಾನಿ ಬ್ರೂಸ್ ಬೆನರ್ಟ್ ಹೇಳಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಮಂಗಳನ ಒಳ ರಚನೆ, ಅಲ್ಲಿಯ ಮಂಗಳ ಕಂಪನಗಳು, ತಾಪಮಾನದ ಏರು ಪೇರು ಸೇರಿದಂತೆ ಗ್ರಹದ ಅಂತರಂಗದ ಮಾಹಿತಿ ಅಧ್ಯಯನ ಮಾಡುವುದೇ ಈ ‘ಇನ್‌ಸೈಟ್  ನೌಕೆಯ ಯೋಜನೆಯ ಉದ್ದೇಶವಾಗಿದೆ. ಈ ಅಧ್ಯಯನಕ್ಕೆ ಅನುಕೂಲವಾಗುವಂತೆ ಈ ನೌಕೆಯಲ್ಲಿ ಹೀಟ್ ಪ್ರೊಬ್, ಸಿಸ್ಮೊಮೀಟರ್ ಮತ್ತು ಕ್ಯೂಬ್ ಸ್ಯಾಟ್ ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ.

ಗ್ರಹದ ಮೇಲ್ಮೈಯಿಂದ ೧೬ ಅಡಿ ಆಳದವರೆವಿಗೂ ಅಗೆಯುವ ಕೆಲಸವನ್ನು ಹೊಂದಿರುವ ಹೆಚ್‌ಪಿ-೩ (ಹೀಟ್ ಪ್ಲೊ ಅಂಡ್ ಫಿಸಿಕಲ್ ಪ್ರಾಪರ್ಟಿಸ್ ಪ್ಯಾಕೇಜ್) ಎಂಬ ರೊಬೋಟ್ ನಿರ್ವಹಿಸುತ್ತದೆ. ಗ್ರಹದ ಒಳ ಭಾಗದಲ್ಲಿಯ ಕಂಪನಗಳ ತೀವ್ರತೆಯನ್ನು ಮತ್ತು ಕಂಪನಗಳ ನಡುವಿನ ಕಾಲವನ್ನು ಅಳೆಯಲು ಸಿಸ್ಮೊಮೀಟರ್ ಇದೆ. ಈ ಎಲ್ಲ ಮಾಹಿತಿಯನ್ನು ಕ್ಯೂಬ್ ಸ್ಯಾಟ್‌ಗಳು ರವಾನಿಸುತ್ತವೆ ಎಂದು ಮಾರ್ಕೊ ಯೋಜನೆಯ ಮುಖ್ಯ ಇಂಜಿನಿಯರ್ ಮತ್ತು ನಾಸಾದ ಜೆಟ್‌ನ ಪಲ್ಸನ್ ಪ್ರಯೋಗಾಲಯದ ಆಂಡಿ ಕ್ಲೆಷ್ ಹೇಳಿದ್ದಾರೆ.

Leave a Comment