ಭ್ರೂಣಹತ್ಯೆ ಜಾಲ ಪತ್ತೆ : ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ

ವಿಜಯಪುರ ಮಾ 9: ಭ್ರೂಣವನ್ನು ಪರೀಕ್ಷಿಸಿ ಗರ್ಭಪಾತ ಮಾಡುತ್ತಿದ್ದ ಜಾಲವೊಂದನ್ನು ಮಹಾರಾಷ್ಟ್ರದ ಸಾಮಗಲಿ ಜಿಲ್ಲೆಯ ಮೀರಜ ಬಳಿ ಮಹಾರಾಷ್ಟ್ರ ಪೊಲೀಸರು ಬೇಧಿಸಿದ್ದಾರೆ. ಈ ಜಾಲಕ್ಕೆ ಸಂಬಂದಿಸಿದಂತೆ ನಗರಕ್ಕೆ ಆಗಮಿಸಿದ ಮೀರಜ ಪೊಲೀಸರು ಮಿರ್ದೆಗಲ್ಲಿಯ ದೇವಗಿರಿಕರ್ ಸ್ಕ್ಯಾನಿಂಗ್ ಸೆಂಟರ್ ಮೇಲೆ ನಿನ್ನೆ ರಾತ್ರಿ ದಾಳಿ ಮಾಡಿ ರಮೇಶ ದೇವಗಿರಿಕರ್ ಎಂಬುವವರನ್ನು ಬಂಧಿಸಿ ಎರಡು ಸ್ಕ್ಯಾನಿಂಗ್ ಮಶೀನ್ ವಶಪಡಿಸಿಕೊಂಡಿದ್ದಾರೆ.
ಮೂರು ದಿನದ ಹಿಂದೆ ಮೀರಜ ಬಳಿಯ ಮೈಶಾಳ ಗ್ರಾಮದ ವೈದ್ಯ ಡಾ ಬಾಬಾಸಾಹೇಬ ಕುಂದರಾಪುರಿ ಎಂಬಾತನನ್ನು ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡುತ್ತಿದ್ದ ಆರೋಪದ ಮೇಲೆ ಆತನ ಭಾರತಿ ರುಗ್ಣಾಲಯದ ಮೇಲೆ ದಾಳಿ ಮಾಡಿ ಪೊಲೀಸರು ಬಂಧಿಸಿದ್ದರು.
ಈತನ ಆಸ್ಪತ್ರೆಯಲ್ಲಿ ಗರ್ಭಪಾತದ ಸಂದರ್ಭದಲ್ಲಿ ಸಾವನ್ನಪ್ಪಿದ ಸ್ವಾತಿ ಪ್ರವೀಣ ಎಂಬ ಮಹಿಳೆಯ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಪೊಲೀಸರು ಬಲೆ ಬೀಸಿದಾಗ ಈ ಜಾಲ ಪತ್ತೆಯಾಗಿದೆ.
ಈ ಜಾಲದಲ್ಲಿ ಸೇರಿದ್ದಾರೆ ಎನ್ನಲಾದ ಕರ್ನಾಟಕದ ವಿಜಯಪುರ ,ಕಾಗವಾಡ, ಬೆಳಗಾವಿಯ ಮೂವರು ವೈದ್ಯರು ಮತ್ತು ತಂತ್ರಜ್ಞರನ್ನು ಮೀರಜ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಶಾಳ ಗ್ರಾಮಕ್ಕೆ ಮಹಾರಾಷ್ಟ್ರದ ಆರೋಗ್ಯ ಸಚಿವ ದೀಪಕ ಸಾವಂತ್ ಭೇಟಿ ನೀಡಿದರು.

Leave a Comment