ಭ್ರಷ್ಟಾಚಾರ ವಿರೋಧಿ ವೇದಿಕೆಗೆ ನೂತನ ಕಾರ್ಯಕಾರಿ ಮಂಡಳಿ ನೇಮಕ

ದಾವಣಗೆರೆ, ಅ. 10 – ಭ್ರಷ್ಟಾಚಾರ ವಿರೋಧಿ ವೇದಿಕೆಗೆ ನೂತನ ಕಾರ್ಯಕಾರಿ ಮಂಡಳಿಯನ್ನು ನೇಮಕ ಮಾಡಲಾಗಿದೆ ಎಂದು ವೇದಿಕೆಯ ನೂತನ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್ ಸುದ್ದಿಗೋಷ್ಟಿಯಲ್ಲಿಂದು ಹೇಳಿದರು.
ನಮ್ಮ ಸಂಘಟನೆಯಿಂದ ಹಲವಾರು ಸಮಾಜಮುಖಿ ಹೋರಾಟಗಳನ್ನು ಮಾಡಲಾಗಿದೆ. ಯಾವುದೇ ವ್ಯಕ್ತಿಯ ಮೇಲೆ ಸಂಘಟನೆ ನಿಲ್ಲುವುದಿಲ್ಲ, ಸಂಘಟನೆ ನಿರಂತರ. ಕಳೆದ ಐದು ವರ್ಷಗಳಿಂದ ಸಂಘಟನೆ ಹುಟ್ಟುಹಾಕಿ ಈ ಮೂಲಕ ಹೋರಾಟ ಮಾಡುತ್ತಾ ಬಂದಿದ್ದೇವೆ. ಇದೀಗ ಸಂಘಕ್ಕೆ ನೂತನ ಕಾರ್ಯಕಾರಿ ಸಮಿತಿ ನೇಮಕ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಉಮೇಶ್, ಉಪಾಧ್ಯಕ್ಷರುಗಳಾಗಿ ಡಾ.ಉಮೇಶ್ ಹಿರೇಮಠ, ರಾಜುಕಣಗಣ್ಣಾರ್, ಎಂ.ವಾಸಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಆರ್.ಚಿಕ್ಕನಗೌಡ, ಕಾರ್ಯದರ್ಶಿ ಬಿ.ಎಲ್.ಶಾಂತರಾಜ್, ಖಜಾಂಚಿಯಾಗಿ ಬಿ.ಪ್ರಸನ್ನಕುಮಾರ್, ಸಂಘಟನಾಕಾರ್ಯದರ್ಶಿಯಾಗಿ ಶಿವಾನಂದ ಹಳ್ಳೇರಾ, ಹನುಮಂತಪ್ಪ ಸರಟೂರು ಹಾಗೂ ನಿರ್ದೇಶಕರುಗಳಾಗಿ ಶಂಭುಲಿಂಗಪ್ಪ, ಎನ್.ಟಿ.ಮಂಜುನಾಥ್, ಎಸ್.ಜಿ.ಸತೀಶ್ ನೇಮಕಗೊಂಡಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎ.ಉಮೇಶ್, ಡಾ.ಉಮೇಶ್ ಹಿರೇಮಠ್, ರಾಜುಕಣಗಣ್ಣಾರ್, ಸುಮತಿ ರವಿಕುಮಾರ್, ಎ.ವಾಸಪ್ಪ, ಶಾಂತಪ್ಪ ಮತ್ತಿತರರಿದ್ದರು.

Leave a Comment