ಭ್ರಷ್ಟಾಚಾರ ಲಂಚ ನಿರ್ಮೂಲನೆ ಶಪಥ

ಹಿರಿಯೂರು.ಆ.11: ಸಮಾಜದಲ್ಲಿ ಬೇರೂರಿರುವ ಬ್ರಷ್ಟಾಚಾರ ಲಂಚ ನಿರ್ಮೂಲನೆಗಾಗಿ ನಗರದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ಪ್ರಾಧ್ಯಾಪಕ ವರ್ಗದವರು ಸಿಬ್ಬಂದಿ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬ್ರಷ್ಟಾಚಾರ ಲಂಚ ನಿರ್ಮೂಲನೆಯ ಶಪಥ ನಡೆಸಿದರು. ಪ್ರಾಧ್ಯಾಪಕರಾದ ಡಾ.ರವಿಚಂದ್ರನ್ ಆಂಗ್ಲ ಬಾಷೆಯಲ್ಲಿ ಶಪಥದ ನುಡಿಗಳನ್ನು ಹೇಳಿದರು, ಸಮಾಜ ಸೇವಕರಾದ ಶಶಿಕಲಾ ರವಿಶಂಕರ್ ರವರು ಅದನ್ನು ಕನ್ನಡ ಬಾಷೆಯಲ್ಲಿ ಹೇಳದಂತೆ ಭಾಗವಹಿಸಿದ್ದ ಎಲ್ಲರೂ ಅದನ್ನು ಉಚ್ಛರಿಸಿದರು. ಇಂದು ಸಮಾಜದಲ್ಲಿ ಬ್ರಷ್ಟಾಚಾರ ಲಂಚ ಎಂಬುದು ಬೇರೂರಿದೆ, ದೇಶವನ್ನೇ ತೊಂದರೆಗೆ ಸಿಲುಕಿಸಿದೆ, ಕೊಡುವವರಿಗೂ ಪಡೆಯುವವರಿಗೂ ತೊಂದರೆ ಕೊಡುತ್ತಿದೆ, ನಮ್ಮ ದೇಶದ ಮೂಲವನ್ನೇ ನಾಶ ಪಡಿಸುತ್ತಿದೆ. ನಮ್ಮ ಪೂರ್ವಜರು ಬೆಳಿಸಿರುವ ರೀತಿ ನೀತಿಗಳನ್ನು ಹಾಳು ಮಾಡುತ್ತಿದೆ, ಬ್ರಷ್ಟಾಚಾರ ಲಂಚ ಕೊಡುವುದು ಮತ್ತು ಪಡೆಯುವುದನ್ನು ಎಂತಹ ಸಂದರ್ಭದಲ್ಲೂ ಮಾಡುವುದಿಲ್ಲ ಎಂದು ನನ್ನ ಮನದಾಳದಿಂದ ಹೇಳುತ್ತಿದ್ದೇನೆ, ಅಲ್ಲದೇ ಸ್ನೇಹಿತರೂ ಸಂಬಂಧಿಕರಿಗೂ ಈ ಬಗ್ಗೆ ತಿಳುವಳಿಕೆ ನೀಡುತ್ತೇನೆ ಎಂಬ ಶಪಥÀ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಿ.ಚಂದ್ರಶೇಖರಪ್ಪ, ಸಮಾಜಸೇವಕರಾದ ಶಶಿಕಲಾ ರವಿಶಂಕರ್, ಪ್ರಾಧ್ಯಾಪಕರಾದ ಡಾ.ರವಿಚಂದ್ರನ್, ಹನುಮಂತರಾಯಪ್ಪ, ಡಿ.ಆರ್.ಪ್ರಸನ್ನಕುಮಾರ್, ಮಹೇಶ್‍ನಾಯ್ಕ್, ಪ್ರಸಾದ್, ಸಿ.ಟಿ.ಶ್ರೀನಿವಾಸ್, ಕೆ.ಪಿ.ಗಿರೀಶ್‍ಯಾದವ್, ಹೆಚ್.ಓ.ಪರಮೇಶ್. ಚಾಂದ್‍ಪಾಷ, ನೀಲಾಂಬಳ್, ಬಸವರಾಜ್,ಚೈತ್ರ, ಶ್ವೇತ, ಅಮೂಲ್ಯ, ಮತ್ತಿತರರು ಇದ್ದರು

Leave a Comment