ಭ್ರಷ್ಟಾಚಾರ ಪ್ರಕರಣ: ಅಲ್ಜೀರಿಯಾ ಮಾಜಿ ಪ್ರಧಾನಿ ಬಂಧನಕ್ಕೆ ಆದೇಶ

ಅಲ್ಜೀರಿಯಾ,  ಜೂ 13 – ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಪ್ರಧಾನ  ಮಂತ್ರಿ ಅಹ್ಮದ್ ಔಯಾಹಿಯಾ ಅವರನ್ನು ಬಂಧಿಸುವಂತೆ ಅಲ್ಲಿನ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರಾದಾಗ ಅವರ  ಬಂಧನಕ್ಕೆ ಆದೇಶ ಮಾಡಲಾಗಿದೆ.

ನ್ಯಾಯಾಧೀಶರ ಮುಂದೆ ಕಾಣಿಸಿಕೊಂಡ ಬಳಿಕ ಮಾಜಿ ಸಾರಿಗೆ ಸಚಿವ ಅಬ್ದುಲ್ ಘನಿ ಜಲಾನೆ ಅವರನ್ನೂ ಬಂಧಿಸಲು ನ್ಯಾಯಾಲಯ ಆದೇಶಿಸಿದೆ ಎಂದು ಗುರುವಾರ ಬಿಬಿಸಿ ನ್ಯೂಸ್ ವರದಿ ತಿಳಿಸಿದೆ.

ಈ ಇಬ್ಬರು ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್‌ ಬೊಟೆಫ್ಲಿಕಾ ಅವರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದು ಸಾರ್ವಜನಿಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಏಪ್ರಿಲ್ ನಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Leave a Comment