ಭ್ರಷ್ಟಾಚಾರ, ಜಾತೀಯತೆ, ಮಹಿಳಾ ವಿರೋಧ ನೀತಿ ದೇಶಕ್ಕೆ ಮಾರಕ: ಬಸವದೇವರು

ಕಲಬುರಗಿ, ಆ. 12: ಪ್ರತಿಯೊಂದು ಕ್ಷೇತ್ರದಲ್ಲಿ ವಿಶ್ವಕ್ಕೆ ಕೊಡುಗೆ ಕೊಟ್ಟ ದೇಶದಲ್ಲಿ ಭ್ರಷ್ಟಾಚಾರ, ಜಾತೀಯತೆ, ಅಸಮಾನತೆ, ಸ್ತ್ರೀ ಸ್ವಾತ್ಯಂತ್ರ ವಿರೋಧ ನೀತಿ ದೇಶಕ್ಕೆ ಮಾರಕವಾಗಿದೆ ಎಂದು ಸವದತ್ತಿಯ ಜ್ಞಾನ ದಾಸೋಹದ ಮಠದ ಬಸವದೇವರು ಹೇಳಿದರು.
ನಗರದ ಸಂತ ಜೊಸಫ್ ಮಹಿಳಾದ ಪದವಿ ಪೂರ್ವ ಮಹಾವಿದ್ಯಾಲಯ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿರುವ ವಚನಗಳು ಮತ್ತು ಭಾರತದ ಸಂವಿಧಾನದ ಆಶಯ ಕುರಿತು ಉಪನ್ಯಾಸ ಮಾಲೆ ಕ್ರರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಇಂದು ಪ್ರತಿಯೊಬ್ಬರು ದೇಶ ಭಕ್ತಿಯ ಕುರಿತು ಮಾತನಾಡುತ್ತಾರೆ. ಆದರೆ ದೇಶಕ್ಕಾಗಿ ಜೀವ ಕೊಟ್ಟ ಸೈನಿಕ, ದೇಶಕ್ಕೆ ಅನ್ನ ನೀಡಿ ಸಾಲಬಾಧೆಯಿಂದ ನೇಣಿಗೆ ಶರಣಾಗುವ ರೈತ, ರಕ್ತವನ್ನು ಹಿಂಡಿಕೊಂಡು ದುಡಿಯುವ ಕಾರ್ಮಿಕರು ಸತ್ತ ನಂತರ ಅವರ ಕುಟುಂಬ ಯಾವ ಸ್ಥಿತಿಯಲ್ಲಿದೆ ಎಂದು ವಿಚಾರಿಸುತ್ತಾರಯೇ? ಭಾಷಣ ಮಾಡುವ ದೊಡ್ಡ ದೊಡ್ಡ ಜನರು ಬಡವರ ಉದ್ಧಾರಕ್ಕಾಗಿ ಎಂದು ಕೆಲಸ ಮಾಡಿಲ್ಲ. ಅವರು ತಮ್ಮ ಸ್ವಪ್ರತಿಷ್ಠೆಗೊಷ್ಕರವೇ ಹೊರತು ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವದಿಲ್ಲ ಎಂದು ಹೇಳಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಕುಪೇಂದ್ರ ಪಾಟೀಲ, ಕಾರ್ಯಕ್ರಮದ ಸಂಚಾಲಕರಾದ ಶಿವರಾಜ ಅಂಡಗಿ, ವಿನೋದಕುಮಾರ ಜನವರಿ. ಉಪನ್ಯಾಸಕ ಡಾ. ಚಿ.ಸಿ. ನಿಂಗಣ್ಣ ಉಪಸ್ಥಿತರಿದ್ದರು.

Leave a Comment