ಭೂಸ್ವಾಧೀನ ಕಾಯ್ದೆ ವಾಪಸ್ಸಿಗೆ ಆಗ್ರಹಿಸಿ  ಪ್ರತಿಭಟನೆ 22 ರಂದು

 

ಕಲಬುರಗಿ,ಜೂ.20. ಭೂಸ್ವಾಧೀನ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ, ಜೂ.22 ರಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ರಾಜ್ಯ ಸಮಿತಿ ಉಪಾಧ್ಯಕ್ಷ ಮಾರುತಿ

ಮಾನ್ಪಡೆ ನೇತೃತ್ವದಲ್ಲಿ ಸಾವಿರ ರೈತರೊಂದಿಗೆ  ಸಿಎಂ ಗ್ರಾಮವಾಸ್ತವ್ಯ ಮಾಡಲಿರುವ ಹೆರೂರ ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ರಾಜ್ಯ ಸಮಿತಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮ್ಮಶೆಟ್ಟಿ ಇಂದಿಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತ ಸಮುದಾಯದ ಹಿತವನ್ನೇ ಕಾಪಾಡಲು ಬದ್ದನಾಗಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ ಹೊರತು ರೈತರ ಬಗ್ಗೆ ಯಾವುದೇ ನಿಲುವು ಅನುಸರಿಸಿರುವುದಿಲ್ಲ.2013 ರ ಕೇಂದ್ರ ಸರ್ಕಾರದ ಕಾಯ್ದೆ ಭೂಸ್ವಾಧೀನ ಪುನರ್ವಸತಿ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರೈತ ಸಮುದಾಯಕ್ಕೆ ಆಘಾತ ತಂದಿದೆ ಎಂದು  ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.

ಕೈಗಾರಿಕೆಗಳನ್ನು ಸ್ಥಾಪಿಸಲು ಭೂಮಿ ಕೊಡಲು ರೈತರ ಅಭ್ಯಂತರವೇನು ಇಲ್ಲ.ಸರ್ಕಾರ 2013 ರ ಕಾಯ್ದೆಯನ್ನು ಉಳಿಸಿಕೊಂಡು ಪರಿಹಾರವಾಗಿ ಉದ್ಯೋಗ ನೀಡುವ ಮೂಲಕ ಭೂಮಿ ಬಳಸಿಕೊಳ್ಳಲಿ ಎಂದ ಅವರು, ರೈತರಿಂದ ನೇರವಾಗಿ ಉದ್ದಿಮೆದಾರರು ಭೂಮಿ ಖರೀದಿ ಮಾಡಲು ಅವಕಾಶ ಮಾಡಿರುವುದರಿಂದ ರೈತರಿಗೆ ಪರಿಹಾರ ಸಿಗದಂತಾಗಿದೆ ಎಂದು ದೂರಿದರು.

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಅಂದು ಸಾವಿರಾರು ರೈತರೊಂದಿಗೆ ಪ್ರತಿಭಟನೆ ನಡೆಸುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಪಾಂಡುರಂಗ ಮಾಲಿನಕರ್ ಸಿದ್ದು ಪಾಳಾ ಇದ್ದರು..

Leave a Comment