ಭೂಮಿಗೆ ಸಮೀಪ್ಪಿಸಿದ ಕ್ಷುದ್ರಗ್ರಹ

ಅಕ್ಟೋಬರ್ 12 ಗುರುವಾರ ಭೂಮಿಗೆ ಸಮೀಪದಲ್ಲೆ ಕ್ಷುದ್ರಗ್ರಹವೊಂದು ಹಾದು ಹೋಗಿದೆ. 2012 ಟಿಸಿ 4 ಹೆಸರಿನ ಈ ಕ್ಷುದ್ರಗ್ರಹ ಭೂಮಿಯಿಂದ 27,000 ಸಾವಿರ ಮೈಲುಗಳ ಅಂತರದಲ್ಲಿ ಹಾದು ಹೋಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಭಾರಿ ಗಾತ್ರದ ಕ್ಷುದ್ರಗ್ರಹಗಳು ಆಗಾಗ ಭೂಮಿಯ ಸನಿಹದಲ್ಲಿ ಹಾದು ಹೋಗುತ್ತವೆ. ಪ್ರತಿ ಸಂದರ್ಭದಲ್ಲಿಯೂ ಅವು ಭೂಮಿಗೆ ಅಪ್ಪಳಿಸಿ ಭಯಾನಕ ಅನಾಹುತವನ್ನು ಎಲ್ಲಿ ಸೃಷ್ಟಿಸುತವೋ ಎಂಬ ಆತಂಕಕ್ಕೆ ಜಾಗತಿಕವಾಗಿ ವಿಜ್ಞಾನಿಗಳು ಒಳಗಾಗುತ್ತಾರೆ.

ಈಗ್ಗೆ ಹಲವು ಬಾರಿ ಕ್ಷುದ್ರಗ್ರಹಗಳು ಭೂಮಿಗೆ ಅತಿ ಸಮೀಪದಲ್ಲಿ ಹಾದೂ ಹೋಗಿವೆಯಾದರೂ ಯಾವುದೇ ಅಪಾಯ ಒಡ್ಡಿಲ್ಲ.

ಗುರುವಾರ ಭೂಮಿಯ ಸಮೀಪ ಹಾದು ಹೋಗಲಿರುವ ಕ್ಷುದ್ರಗ್ರಹ 50 ರಿಂದ 100 ಅಡಿಯಷ್ಟು ಸುತ್ತಳತೆ ಹೊಂದಿದ್ದು, ಇದರಿಂದ ಭೂಮಿಗೆ ಯಾವುದೇ ಅಪಾಯ ಎದುರಾಗುವುದಿಲ್ಲ ಎಂದು ವಿಜ್ಞಾನಿಗಳು ಮೊದಲೇ ಅಂದಾಜು ಮಾಡಿದ್ದರು ಅದರಂತೆಯೇ ತನ್ನ ಪಾಡಿಗೆ ತಾನು ಭೂಗ್ರಹವನ್ನು ಬಳಸಿ ಹಾದು ಹೋಗಿದೆ.

ಆದರೆ, ಎಲ್ಲ ಸಂದರ್ಭದಲ್ಲಿಯು ಹೀಗೆ ಕ್ಷುದ್ರಗ್ರಹಗಳು ಭೂಮಿಗೆ ಯಾವುದೇ ಅಪಾಯ ಮಾಡದೆ ಹಾದು ಹೋಗುತ್ತವೆ ಎಂದು ಹೇಳುವ ಹಾಗಿಲ್ಲ. ಅಪ್ಪಿತಪ್ಪಿ ಅವೇನಾದರೂ ಭೂಮಿಗೆ ಅಪ್ಪಳಿಸಿದರೆ ಭಯಂಕರ ವಿನಾಶ ಉಂಟು ಮಾಡುತ್ತವೆ.

ಒಂದು ದೊಡ್ಡ ಮನೆಯಷ್ಟು ಗಾತ್ರದ 2012 ಟಿ.ಸಿ 4 ಕ್ಷುದ್ರಗ್ರಹವನ್ನು 5 ವರ್ಷಗಳ ಹಿಂದೆಯೇ ಹವಾಯಿ ದ್ವೀಪದಲ್ಲಿ ನಿಯೋಜಿಸಿರುವ ಪಾನ್-ಸ್ಟಾಕ್ಸ್ ಟೆಲಿಸ್ಕೋಪ್ ಮೂಲಕ ಪತ್ತೆ ಹಚ್ಚಲಾಗಿತ್ತು. ಅಕ್ಟೋಬರ್ 12 ರಂದು ಭೂಮಿಗೆ ಅತಿ ಸಮೀಪದಲ್ಲೆ ಹಾದು ಹೋದ ಕ್ಷುದ್ರಗ್ರಹ ಗಂಟೆಗೆ 16,000 ಕಿ.ಮೀ ವೇಗದಲ್ಲಿ ಸಾಗಿ ಹೋಗಲಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದರು. ಈ ಎತ್ತರ ಸಾಮಾನ್ಯವಾಗಿ ಅತಿ ಹೆಚ್ಚು ಎನ್ನುವುದಾದರೂ ಖಗೋಳ ಯಾನದ ಲೆಕ್ಕಾಚಾರದಲ್ಲಿ ಇದು ಭೂಮಿ ಮತ್ತು ಚಂದ್ರನ ನಡುವಿನ ದೂರದ 8ನೇ ಒಂದರಷ್ಟು ದೂರ ಮಾತ್ರ ಎಂದು ಜರ್ಮನಿಯ ಡಾರ್ಮ್ ಸ್ಟಡಟ್‌ನಲ್ಲಿರುವ ಬಾಹ್ಯಾಕಾಶ ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ರಾಲ್ಫ್ ಡೆನ್‌ಸಿಂಗ್ ಹೇಳಿದ್ದಾರೆ.

4.5 ಶತಕೋಟಿ ವರ್ಷಗಳಲ್ಲಿ ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು ಭೂಮಿಯ ಮೇಲೆ ಅಪ್ಪಳಿಸುತ್ತ ಬಂದಿವೆ. ಆದರೆ ಮುಂದಿನ ನೂರು ವರ್ಷಗಳಲ್ಲಿ ಇವುಗಳಿಂದ ಭೀಕರ ಪರಿಣಾಮಗಳ ಸಾಧ್ಯತೆ ಇಲ್ಲ ಎಂದಿರುವ ವಿಜ್ಞಾನಿಗಳು ಅತಿ ವಿನಾಶ ಸೃಷ್ಠಿಸಿದ್ದ ಕ್ಷುದ್ರಗ್ರಹ 65 ಶತಕೋಟಿ ವರ್ಷಗಳ ಹಿಂದೆ ಮೆಕ್ಸಿಕೋದ ಕರಾವಳಿಯಲ್ಲಿ ಅಪ್ಪಳಿಸಿ ಡೈನೊಸಾಱ್ಸ್ ಸಂತತಿಯನ್ನೇ ನಿರ್ಮೂಲನೆ ಮಾಡಿತ್ತು. ಆ ಕ್ಷುದ್ರಗ್ರಹ 60 ಮೈಲಿಗಳಷ್ಟು ವಿಸ್ತೀರ್ಣದಷ್ಟು ದೊಡ್ಡದಾಗಿತ್ತು.

ನಮ್ಮ ಜೀವಿತಾವಧಿಯಲ್ಲಿರುವ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿದ ಉದಾಹರಣೆಗಳು ಇವೆ. 2009 ರಲ್ಲಿ ರಷ್ಯಾದ ಸೈಬಿರಿಯಾ ತುಂಗಸ್ಕಾ ಕಾಡು ಭಾಗದಲ್ಲಿ ಕ್ಷುದ್ರಗ್ರಹ ಅಪ್ಪಳಿಸಿತ್ತು. ಅದು ಅಪ್ಪಳಿಸಿದ ರಭಸಕ್ಕೆ ಉಂಟಾದ ಶಬ್ಧದ ಅಲೆಗಳು ಮತ್ತು ಅದರಿಂದ ಹಾರಿದ ಚೂರುಗಳಿಂದ 1000 ಮಂದಿ ಗಾಯಗೊಂಡಿದ್ದರು.

 

ಮೊನ್ನೆ ಅಕ್ಟೋಬರ್ 12 ರಂದು ಭಾರಿ ಗಾತ್ರದ  ಕ್ಷುದ್ರಗ್ರಹವೊಂದು ಭೂಮಿಯ ಸಮೀಪವೇ ಹಾದು ಹೋಗಿದೆ. ಆದರೆ ಯಾವುದೇ ಅಪಾಯ ಆಗಿಲ್ಲ.

ಐದು ವರ್ಷಗಳ ಹಿಂದೆಯೇ ವಿಜ್ಞಾನಿಗಳು ಗುರುತಿಸಿದ್ದ 2012 ಟಿಸಿ 4 ಹೆಸರಿನ ಈ  ಕ್ಷುದ್ರಗ್ರಹ ಗಂಟೆಗೆ 16,000 ಕಿ.ಮೀ ವೇಗದಲ್ಲಿ ಭೂಮಿಯಿಂದ 27,000 ಮೈಲುಗಳ ಅಂತರದಲ್ಲಿ ಹಾದು ಹೋಗಲಿದ್ದು, ಇದರಿಂದ ಭೂಮಿಗೆ ಯಾವುದೇ ಅಪಾಯ ಎದುರಾಗುವುದಿಲ್ಲ ಎಂದು ವಿಜ್ಞಾನಿಗಳು ಈ ಮೊದಲೇ ಹೇಳಿದ್ದರು.

Leave a Comment