ಭೂಮಿಗಿಂತ ಹೆಚ್ಚು ತೂಕದ ನೂತನ ಗ್ರಹ ಪತ್ತೆ

  • ಉತ್ತನೂರು ವೆಂಕಟೇಶ್

ಭೂಮಿಗಿಂತ ಹೆಚ್ಚು ತೂಕದ ನೂತನ ಗ್ರಹವನ್ನು ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ. ಸೂರ್ಯನಿಂದ ೬ ಜೋತಿರ್ ವರ್ಷಗಳಷ್ಟು ದೂರದಲ್ಲಿರುವ ಒಂಟಿ ನಕ್ಷತ್ರ ರೆಡ್  ಡ್ವಾರ್ಪ್ ಸುತ್ತಲೂ ಈ ಗ್ರಹ ಸುತ್ತುತ್ತಿರುವುದನ್ನು ಪತ್ತೆ ಮಾಡಿರುವುದಾಗಿ ಬುಧುವಾರ  (ನವೆಂಬರ್ ೧೪) ರಂದು ಅಧ್ಯಯನ ತಂಡ ಹೇಳಿದೆ. ಬರ್ನಾಡ್ಸ್ ಸ್ಟಾರ್ ಸುತ್ತಲೂ ಈ ಗ್ರಹ ಸುತ್ತುತ್ತಿರುವುದರಿಂದ ಈ ಗ್ರಹವನ್ನು ಬರ್ನಾಡ್ಸ್ ಸ್ಟಾರ್-ಬಿ ಎಂದು ಕರೆಯಲಾಗಿದೆ. ಈ ಅಧ್ಯಯನ ತಂಡದ ವರದಿ ನೇಚರ್ ನಿಯತ ಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

  • ಸೂರ್ಯನಿಂದ ಆರು ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಬರ್ನಾಡ್ಸ್ ಸ್ಟಾರ್ ಹೆಸರಿನ ಒಂಟಿ ನಕ್ಷತ್ರದ ಸುತ್ತ ಗ್ರಹವೊಂದು ಸುತ್ತುತ್ತಿರುವುದನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳ ತಂಡ ನವೆಂಬರ್ ೧೪ ರಂದು ಹೇಳಿದೆ.
  • ಸೂರ್ಯನಿಂದ ೬ ಬೆಳಕಿನ ವರ್ಷಗಳಷ್ಟು ದೂರ ಇದ್ದರೂ ಸೌರ ಮಂಡಲದ ಆಚೆಗಿನ ಗ್ರಹ ನಕ್ಷತ್ರಗಳ ಅಂತರದ ಲೆಕ್ಕಾಚಾರದಲ್ಲಿ ಇದು ಸೂರ್ಯನಿಗೆ ಹತ್ತಿರದ ನಕ್ಷತ್ರವೇ ಆಗಿದೆ.
  • ಇದರ  ಮಾತೃ ನಕ್ಷತ್ರ ಬರ್ನಾಡ್ಸ್ ಸ್ಟಾರ್ ಆದ್ದರಿಂದಾಗಿ ಈ ಗ್ರಹವನ್ನು ಬರ್ನಾಡ್ಸ್ ಸ್ಟಾರ್-ಬಿ ಎಂದು ಕರೆಯಲಾಗಿದೆ. ಈ ಗ್ರಹ ತನ್ನ ಮಾತೃ ನಕ್ಷತ್ರದ ಮೇಲೆ ಹೊಂದಿರುವ ಗುರುತ್ವಾಕರ್ಷಣೆ ಮತ್ತು ಗ್ರಹದ ವೇಗವನ್ನು ಅಳೆಯಲು ಡೂಪ್ಲರ್ ಪರಿಣಾಮ ತಂತ್ರಜ್ಞಾನವನ್ನು ಅನುಸರಿಸಲಾಗಿದೆ.
  • ಈ ಗ್ರಹದ ಅಧ್ಯಯನ ಯೂರೋಪಿಯನ್ ಸದರನ್ ವಿಕ್ಷಣಾಲಯ ಸಹಯೋಗದಲ್ಲಿ ನಡೆಸಲಾಗಿದ್ದು, ಇದರಲ್ಲಿ ಅತ್ಯಾಧುನಿಕ ಖಗೋಳ ಶೋಧನಾ ವೈಜ್ಞಾನಿಕ ಸಲಕರಣೆಗಳನ್ನು ಬಳಸಲಾಗಿದೆ ಎಂದು ಅಧ್ಯಯನ ತಂಡ ಹೇಳಿದೆ.

18vichara2

ಸೌರಮಂಡಲದ ಆಚೆಗಿನ ಈ ನೂತನ ಗ್ರಹದ ಶೋಧನೆಯಿಂದ, ಸೌರಮಂಡಲದ ಆಚೆಗಿನ ಗ್ರಹ ನಕ್ಷತ್ರಗಳ ಶೋಧನೆಗೆ ಅನುಕೂಲವಾಗಲಿದೆ ಎಂದು ಹೇಳಿರುವ ಅಧ್ಯಯನ ತಂಡ, ಈ ನೂತನ ಗ್ರಹ ತನ್ನ ಮಾತೃ ನಕ್ಷತ್ರದ ಸುತ್ತ ಒಂದು ಸುತ್ತು ಬರಲು ೨೩೨ ದಿನಗಳು ತೆಗೆದುಕೊಳ್ಳುತ್ತದೆ ಎಂದಿದೆ. ನೂತನ ಗ್ರಹದ ಶೋಧನೆಯನ್ನು ಶೇ.೯೯ ರಷ್ಟು ಖಚಿತ ಪಡಿಸಿರುವ  ವಿಜ್ಞಾನಿಗಳ ತಂಡ,  ಇದರ ಶೋಧನೆಯಿಂದ ತಮ್ಮ ಎರಡು ದಶಕಗಳ ಅಧ್ಯಯನ ಸಾರ್ಥಕ ಗೊಂಡಿದೆ ಎಂದಿದೆ.

ಭೂಮಿಗೆ ಅತಿ ಹತ್ತಿರದ ಎರಡನೆ ಗ್ರಹವಾದ ಇದರ ತೂಕ ಭೂಮಿ ತೂಕದ ೩.೨ ರಷ್ಟಿದೆ. ಆದರೆ ಭೂಮಿ ಸೂರ್ಯನಿಂದ  ಪಡೆಯುವ ಸೌರ ಶಕ್ತಿ  ಪ್ರಮಾಣಕ್ಕೆ ಹೋಲಿಸಿದರೆ  ಇದು ಶೇ.೨ ಕ್ಕಿಂತ ಕಡಿಮೆ ಸೌರಶಕ್ತಿಯನ್ನು ಸೂರ್ಯನಿಂದ ಪಡೆಯುತ್ತಿದೆ.

ಹೀಗಾಗಿ ಇದರ ಹೊರಮೈ ತಾಪಮಾನ ಮೈನಸ್ ೧೭೦ ಡಿಗ್ರಿ ಸೆಲ್ಷಿಯಸ್ ನಷ್ಟಿದ್ದು ಇದು ಘನೀಕೃತ ಹಿಮ ಆವರಿತ ಗ್ರಹವಾಗಿದೆ. ಇಲ್ಲಿ ದ್ರವ ರೂಪದ ನೀರಾಗಲಿ, ಅನಿಲವಾಗಲಿ ಇಲ್ಲ. ಇದ್ದರೂ ಅದು ಘನೀಕೃತ ರೂಪದಲ್ಲಿ ಮಾತ್ರ ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Leave a Comment