ಭೂದಾನ ಶ್ರೇಷ್ಠವಾದದು-ಪ್ರಲ್ಹಾದ ಜೋಶಿ

ಧಾರವಾಡ ಫೆ.28—ತಾಲೂಕಿನ ಮಾರಡಗಿಯ ಶ್ರೀಮತಿ ಗಿರಿಜಮ್ಮ ಕೋಂ. ಗಂಗಾಧರ ಬಳ್ಳಾರಿ, ಉರ್ಫ್ ಮೂಲಿಮನಿ ಸರಕಾರಿ ಪ್ರೌಢಶಾಲೆ (ಆರ್‍ಎಮ್‍ಎಸ್‍ಎ)  ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ರೂ.82.50 ಲಕ್ಷ ಅನುದಾನದಲ್ಲಿ 10 ನೂತನ  ಪ್ರೌಢಶಾಲಾ ಕೊಠಡಿಯುಳ್ಳ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಸಚಿವ  ಪ್ರಲ್ಹಾದ ಜೋಶಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ವದಾನಗಳಲ್ಲಿ ಭೂದಾನ ಶ್ರೇಷ್ಠದಾನವೆಂದು ಹೇಳಿ ದಾನಿಗಳಿಗೆ ಕೃತಜ್ಞತೆ ಹೇಳಿದರು. ಅವರ ಹೆಸರು ಅಜರಾಮರವಾಗಿ ಉಳಿಯಲೆಂದು ಹಾರೈಸಿ ಶಾಲೆಯ ಮತ್ತು ಗ್ರಾಮದ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ಹೇಳಿದರು. ನೂತನ ಕಟ್ಟಡದ ಉದ್ಘಾಟಣೆ ನೆರವೇರಿಸಿದ ಸಚಿವ ಜಗದೀಶ ಶೆಟ್ಟರ  ಮಾತನಾಡುತ್ತ ಈ ಗ್ರಾಮದ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಮತ್ತು ಶಾಲೆಯ ಉನ್ನತಿಗೆ ಸಹಾಯವನ್ನು ಮಾಡಲಾಗುವುದೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಸಕ  ಅಮೃತ ಅಯ್ಯಪ್ಪಾ ದೇಸಾಯಿ  ಶಾಲೆಗೆ ಸಿ.ಸಿ.ರಸ್ತೆ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಹೊಲಗಳ ರಸ್ತೆ, ಮತ್ತು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.   ನಂತರ ರಾಜ್ಯದ ರೈತ ಮುಖಂಡರಾದ  ಗಂಗಾಧರ ಪಾಟೀಲ ಕುಲಕರ್ಣಿ ಇವರು ಗ್ರಾಮಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಹಾಗೂ ಗ್ರಾಮದ ಪ್ರಮುಖ ಬೇಡಿಕೆಗಳನ್ನು ಮಾನ್ಯ ಸಚಿವರುಗಳು, ಶಾಸಕರಿಗೆ ಮನವಿ ಅರ್ಪಿಸಿದರು.

ಸಚಿವರುಗಳು, ಶಾಸಕರು ಒಪ್ಪಿಗೆ ಸುಚಿಸಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದಣಾರ್ಪಣೆಯನ್ನು  ಬಸವರಾಜ ಡಿ ಚಿಕ್ಕೂರ, ಈರಣ್ಣ ಎಸ್ ಅಂಗಡಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಶುಭಹಾರೈಸಿ ಬೀಳ್ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷರಾದ  ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ, ತಾಲೂಕ ಪಂಚಾಯತ ಅಧ್ಯಕ್ಷರಾದ ಈರಣ್ಣ ಶಂಕ್ರಪ್ಪ ಏಣಗಿ, ಉಪಾಧ್ಯಕ್ಷರಾದ  ಮುತ್ತಪ್ಪ ನಾಯ್ಕರ, ಸಾಮಾಜಿಕ ನ್ಯಾಯ

Leave a Comment