ಭೂಗತ ಲೋಕದಲ್ಲಿ ಹುಡುಗಿಯರು..

ಭೂಗತ ಪುಟಗಳಲ್ಲಿ ಹುಡುಗಿಯರಿದ್ದಾರೆ ಎಚ್ಚರಿಕೆ ಎನ್ನುತ್ತಲೇ ಭೂಗತ ಪ್ರಪಂಚದಲ್ಲಿ ಹುಡುಗಿಯರ ಆರ್ಭಟದ ನೈಜ ಘಟನೆಯನ್ನಾಧರಿಸಿ ಮುತ್ಸಂಜೆ ಮಹೇಶ್ ಎಂಎಂಸಿಎಚ್ ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ. ಅದಕ್ಕಾಗಿ ಕನ್ನಡ ಚಿತ್ರರಂಗ ಕಂಡ ನಾಲ್ವರು ಹಿರಿಯ ಕಲಾವಿದೆಯರ ಪುತ್ರಿಯರನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ನಡುವೆ ರಾಗಿಣಿ ಮತ್ತು ಪ್ರತಿಭಾವಂತ ನಟ ಯುವರಾಜ್ ಕಾಣಿಸಿಕೊಂಡಿದ್ದಾರೆ.

ಮುತ್ಸಂಜೆ ಮಹೇಶ್ ಮತ್ತೊಮ್ಮೆ ನೈಜ ಘಟನೆಯ ಹಿಂದೆ ಬಿದ್ದಿದ್ದಾರೆ.ಅದುವೆ ’ಎಂಎಂಸಿಎಚ್. ಅರ್ಥಾತ್ ಮೈಸೂರು, ಮಂಡ್ಯ ಚಾಮರಾಜನಗರ ಹಾಸನ. ಉದ್ದನೆಯ ಶೀರ್ಷಿಕೆಯನ್ನು ಚಿಕ್ಕದಾಗಿ ಮಾಡಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

ಚಿತ್ರದಲ್ಲಿ ಹಿರಿಯ ಕಲಾವಿದೆಯರಾದ ಪ್ರಮೀಳಾ ಜೋಷಾಯ್,ಸುಮಿತ್ರಾ, ವಿನಯ್ ಪ್ರಸಾದ್,ಸುಧಾಬೆಳವಾಡಿ ಅವರ ಮಕ್ಕಳಾದ ಮೇಘನಾ ರಾಜ್,ದೀಪ್ತಿ,ಪ್ರಥಮ ಹಾಗು ಸಂಯಕ್ತ ಅವರನ್ನು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಗ್ಲಾಮರ್ ಬೊಂಬೆ ರಾಗಿಣಿ ಇದ್ದಾರೆ. ಐವರು ಹುಡುಗಿರ ಮಧ್ಯೆ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ಪ್ರತಿಭಾವಂತ ನಟ ಯುವರಾಜ್ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಪುರುಷೋತ್ತಮ್,ಜಾನಕಿರಾಮ್ ಹಾಗು ಅರವಿಂದ್ ಬಂಡವಾಳ ಹಾಕಿದ್ದು ಅವರೊಂದಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಎಚ್.ಆರ್ ರಜನಿಕಾಂತ್ ಕೈಜೋಡಿಸಿದ್ದಾರೆ.

ಈ ವೇಳೆ ಮಾತಿಗಿಳಿದ ಮುತ್ಸಂಜೆ ಮಹೇಶ್,೧೯೮೯ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ.ಚಿತ್ರದಲ್ಲಿ ನಟಿಸಿರುವ ಎಲ್ಲಾ ನಟಿಯರು ಯಾರೂ ಸಂಬಳಕ್ಕಾಗಿ ಕೆಲಸ ಮಾಡಿಲ್ಲ. ಸಂಬಂಧಕ್ಕಾಗಿ ನಟಿಸಿದ್ದಾರೆ. ಯಾವುದನ್ನೂ ಡಿಮಾಂಡ್-ಕಮಾಂಡ್ ಮಾಡದೆ ಪ್ರೀತಿಯಿಂದ ನನ್ನ ಸಿನಿಮಾ ಎಂದು ನಟಿಸಿದ್ದಾರೆ. ಎಲ್ಲರೂ ಸಂಯಮ, ಶ್ರದ್ದೆಯಿಂದ ಕೆಲಸ ಮಾಡಿದ್ದಾರೆ ಮೇಲಾಗಿ ಐವರು ಹುಡುಗಿಯರ ಮಧ್ಯೆ ಯುವರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಲ್ಲದೆ ರಘುಭಟ್. ಪದ್ಮಾವಾಸಂತಿ ಇದ್ದಾರೆ.ಒಳ್ಳೆಯ ಚಿತ್ರ ಎನ್ನುವ ವಿಶ್ವಾಸವಿದೆ. ಚಿತ್ರ ನೋಡಿ ಪ್ರೇಕ್ಷಕರು ಹೇಳಬೇಕು.

ಧ್ವನಿ ಸುರುಳಿ ಬಿಡುಗಡೆಯಲ್ಲಿ ಅಮ್ಮ ಮಕ್ಕಳು ವೇದಿಕೆ ಏರಿ ಚಿತ್ರದ ಒದೊಂದೇ ಹಾಡುಗಳನ್ನು ಅನಾವರಣ ಮಾಡಿ ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ಈ ವೇಳೆ ಮಾತಿಗಿಳಿದ ಪ್ರಮೀಳಾ ಜೋಷಾಯ್, ರಫ್ ಅಂಡ್ ಟಫ್ ಪಾತ್ರದಲ್ಲಿ ಹೆಣ್ಣುಮಕ್ಕಳು ಕಾಣಿಸಿಕೊಂಡಿದ್ದಾರೆ.ಚಿತ್ರದ ಕ್ಲೈಮ್ಯಾಕ್ಸ್ ಹೆದರಿಕೆ ಹುಟ್ಟಿಸುತ್ತದೆ ಜೊತೆಗೆ ಕಣ್ಣಲ್ಲಿ ನೀರು ತರಿಸುತ್ತದೆ ಎಂದರೆ ಮೇಘನಾ ರಾಜ್,ಚಿತ್ರದ ಮೂಲಕ ನಾಲ್ಕು ಗೆಳತಿಯರನ್ನು ಚಿತ್ರ ನೀಡಿದೆ.ವಿಶೇಷವಾದ ಪಾತ್ರವಿದೆ ಎಂದರು.

ವಿನಯ್ ಪ್ರಸಾದ್,ಮಾತೆಯರ ಮಮತೆಯ ಚೆಂದದ ಹೆಣ್ಣುಮಕ್ಕಳ ಚಿತ್ರ ಎಂದು ತಮ್ಮದೇ ವ್ಯಾಖ್ಯಾನ ನೀಡಿ ಕೌಟಂಬಿಕ ಚಿತ್ರ ಎಂದರೆ, ಪ್ರಥಮಾ,ಅಚ್ಚಕಟ್ಟಾದ ಪಾತ್ರ.ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿವರ ನೀಡಿದರು.

ಸುಧಾ ಬೆಳವಾಡಿ ಮೈಸೂರಿನ ಮಮತೆ,ಮಂಡ್ಯದ ಪ್ರಾಮಾಣಿಕತೆ ಚಾಮರಾಜನಗರದ ಛಲ ಮತ್ತು ಹಾಸನದ ಹುಮ್ಮಸ್ಸು ಚಿತ್ರದಲ್ಲಿದೆ ಎಂದು ವಿವರ ನೀಡಿದರೆ, ಸಂಯುಕ್ತ,ರೌಡಿ ಪಾತ್ರ, ಹುಡುಗರಿಗೆ ಹೊಡೆಯುವ ಸನ್ನಿವೇಶದಲ್ಲಿ ಖುಷಿಯಿಂದ ಕಾಣಿಸಿಕೊಂಡಿದ್ದೇನೆ. ಹುಡುಗಿಯರೇ ಸ್ಟ್ರಾಂಗ್‌ಗುರು ಎನ್ನುವುದನ್ನು ನಿರೂಪಿಸಿದ್ದೇವೆ ಎಂದು ಹೇಳಿಕೊಂಡರು.

ಹಿರಿಯ ಕಲಾವಿದೆ ಸುಮಿತ್ರಾ ಮತ್ತು ದೀಪ್ತಿ, ಪಾತ್ರದ ಬಗ್ಗೆ ಖುಷಿ ಹಂಚಿಕೊಂಡರು.ರಾಗಿಣಿ, ರಫ್ ಅಂಡ್ ಟಫ್ ಪೊಲೀಸ್ ಪಾತ್ರ ಮರ್ಡರಿ ಮಿಸ್ಟ್ರಿಯ ಕಥೆ ಇದೆ ಎಂದರು.ನಟ ಯುವರಾಜ್, ಚಿತ್ರಕ್ಕೆ ನನ್ನ ಪಾತ್ರ ಟ್ರಂಪ್ ಕಾರ್ಡ್ ಇದ್ದಂತೆ, ಪಾತ್ರದ ಬಗ್ಗೆ ಹೇಳಿದರೆ ಕಥೆ ಅನಾವರಣವಾಗಲಿದೆ, ಯಾರೊಂದಿಗೆ ಜೋಡಿ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ನಿರ್ದೇಶಕ ಮಹೇಶ್ ಸಾರ್ ಕಥೆ ಕೇಳಬೇಡ ಒಳ್ಳೆಯ ಪಾತ್ರ ಮಾಡು ಅಂದು ನಟಿಸುತ್ತಿದ್ದೇನೆ. ಅಸ್ತಿತ್ವ, ಜಿಂದಾಗಿಂತ ವಿಭಿನ್ನವಾಗಿದೆ ಎಂದರು.ಶ್ರೀಧರ್ ಸಂಭ್ರಮ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ.

 

* ಚಿಕ್ಕನೆಟಕುಂಟೆ ಜಿ.ರಮೇಶ್

Leave a Comment