ಭೂಗತ ಪಾತಕಿ ರವಿ ಪೂಜಾರಿ  ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ

ನವದೆಹಲಿ, ಫೆ. ೨೩- ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಪಾತಕ ಕೃತ್ಯಗಳನ್ನು ಎಸಗಿ, ಸೆನೆಗಲ್‌ನಲ್ಲಿ ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಸೆನೆಗಲ್‌ಗೆ ತೆರಳಿರುವ ಕರ್ನಾಟಕದ ಪೊಲೀಸರು ಪಾತಕಿ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಎಲ್ಲಾ ಸಿದ್ಧತೆ ಕೈಗೊಂಡಿದ್ದಾರೆ. ಭಾರತ ಸರ್ಕಾರ ಸೆನೆಗಲ್ ಸರ್ಕಾರದೊಂದಿಗೆ ರವಿಪೂಜಾರಿ ಹಸ್ತಾಂತರಕ್ಕೆ ಸಂಬಂಧಿಸಿದ ಎಲ್ಲಾ ತೊಡಕುಗಳು ನಿವಾರಣೆಯಾದ ಬೆನ್ನಲ್ಲೇ ಉಭಯ ಸರ್ಕಾರಗಳು ಪಾತಕಿ ಪೂಜಾರಿ ಹಸ್ತಾಂತರಕ್ಕೆ ಮುಂದಾಗಿವೆ.

ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಒಂದೆರಡು ದಿನಗಳಲ್ಲಿ ಕರ್ನಾಟಕ ಪೊಲೀಸ್ ತಂಡ ರವಿಪೂಜಾರಿಯನ್ನು ಸೆನೆಗಲ್‌ನಿಂದ ಹಸ್ತಾಂತರಿಸಿಕೊಳ್ಳಲಿದೆ. ಸೆನೆಗಲ್‌ನಲ್ಲಿ ಬಂಧನಕ್ಕೊಳಗಾಗಿದ್ದ ರವಿಪೂಜಾರಿ ಭಾರತಕ್ಕೆ ಹಸ್ತಾಂತರಿಸುವ ನಿರ್ಣಯವನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸೆನೆಗಲ್ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

ಪ್ರಸ್ತುತ ರವಿ ಪೂಜಾರಿ ವಿರುದ್ಧ ಬೆಂಗಳೂರು ಒಂದರಲ್ಲೇ 39 ಪ್ರಕರಣಗಳಿದ್ದು, ಇವುಗಳಲ್ಲಿ ಶಬಾನಂ ಡೆವಲಪಱ್ಸ್‌ನ ಶೈಲಜಾ ರವಿ ಕೊಲೆ ಪ್ರಕರಣ ಸಹ ಒಳಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ರವಿಪೂಜಾರಿ ವಿರುದ್ಧ 36 ಪ್ರಕರಣಗಳು, ಉಡುಪಿಯಲ್ಲಿ 11, ಮೈಸೂರು ಮತ್ತು ಹುಬ್ಬಳ್ಳಿ, ಧಾರವಾಡ, ಕೋಲಾರ, ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಎಲ್ಲಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪೂಜಾರಿ 20 ವರ್ಷಗಳ ಹಿಂದೆಯೇ ಭಾರತದಿಂದ ಓಡಿಹೋಗಿದ್ದ 2019ರ ಜನವರಿಯಲ್ಲಿ ಸೆನೆಗಲ್ ಪೊಲೀಸರು ರವಿಯನ್ನು ಬಾರ್‌ಬರ್ ಶಾಪ್‌ನಲ್ಲಿ ಬಂಧಿಸಿದ್ದರು. ಆ ನಂತರ ಸ್ಥಳೀಯ ನ್ಯಾಯಾಲಯ ರವಿಗೆ ಜಾಮೀನು ನೀಡಿದ ನಂತರ ಪಶ್ಚಿಮ ಆಫ್ರಿಕಾ ದೇಶಕ್ಕೆ ಪರಾರಿಯಾಗಿದ್ದ .

ಕಳೆದ ವರ್ಷ ಕರ್ನಾಟಕ ಪೊಲೀಸರು ಆತ ತನ್ನ ಗುರುತನ್ನು ತೋರಿಸಿಕೊಳ್ಳಲು ಭಯ ಬೀಳುತ್ತಿದ್ದಾನೆ. ದೇಶದಿಂದ ದೇಶಕ್ಕೆ ಪರಾರಿಯಾಗುತ್ತಿದ್ದ ಮತ್ತು ತನ್ನ ಕೇಶವಿನ್ಯಾಸವನ್ನು ಬದಲಿಸಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಪೂಜಾರಿ ಕರ್ನಾಟಕದವನ್ನಾಗಿದ್ದು, ಮೊದಲು ಭೂಗತ ಪಾತಕಿ ಜೋಟಾ ರಾಜನ್‌ನೊಂದಿಗೆ ಸ್ನೇಹಿ ಇರಿಸಿಕೊಂಡಿದ್ದ ಮತ್ತೊಬ್ಬ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೂ ಸಂಪರ್ಕವಿರಿಸಿಕೊಂಡಿದ್ದ. ನಂತರ ದಾವೂದ್ ಗ್ಯಾಂಗ್ ಬೇರ್ಪಟ್ಟು ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಹಿಂದೂ ಡಾನ್ ಎಂದು ನಿಂದಿಸಿಕೊಳ್ಳಲು ಪ್ರಯತ್ನಿಸಿದ್ದ.

ಸಿನಿಮಾ ನಿರ್ಮಾಪಕ ಮಹೇಶ್ ಭಟ್ ಅವರಿಗೂ ಬೆದರಿಕೆಯೊಡ್ಡಿದ್ದ ಈ ಕುರಿತು ಮಹೇಶ್ ಭಟ್ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಗುಂಪಿನ ಕೆಲವರನ್ನು ಪೊಲೀಸರು ಬಂಧಿಸಿದ್ದರು.  2010ರಲ್ಲಿ ಪೂಜಾರಿ ಗ್ಯಾಂಗ್ ವಕೀಲ ಶಾಹೀದ್ ಅಜ್ಮೀ ಅವರ ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಈ ಹತ್ಯೆಯನ್ನು ರವಿ ಪೂಜಾರಿ ಗ್ಯಾಂಗ್ ಎಸಗಿತ್ತು ಎಂದು ಪರಿಗಣಿಸಲಾಗಿತ್ತು.

Leave a Comment