ಭೂಕುಸಿತ: ಇಬ್ಬರು ಸಹೋದರರ ದುರ್ಮರಣ

 

ಗೋಪೇಶ್ವರ್, ಆ. ೩೦: ಭೂಕುಸಿತದಿಂದಾಗಿ ಮನೆಯೊಂದು ಧ್ವಂಸವಾಗಿ ಇಬ್ಬರು ಸಹೋದರರು ಮೃತರಾಗಿ, ಮತ್ತೊಂದು ಕುಟುಂಬದ ಇನ್ನೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ಉತ್ತರಕಾಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದೆ.
ಜಿಲ್ಲೆಯ ಘಟ್ಟ ಪ್ರದೇಶದ ಫರ್ಕೆಟ್ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ವ್ಯವಸ್ಥಾಪಕ ಅಧಿಕಾರಿ ಎನ್.ಕೆ. ಜೋಷಿ ತಿಳಿಸಿದ್ದಾರೆ.
ಮೃತ ಸಹೋದರರನ್ನು ಸಬರ್‌ಲಾಲ್ (೫೦) ಹಾಗೂ ಗಬರ್‌ಲಾಲ್ (೫೨) ಎಂದು ಗುರುತಿಸಲಾಗಿದೆ. ಅವರ ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಮತ್ತೊಬ್ಬ ಸಂಬಂಧಿ ಸುರೇಂದ್ರ ಲಾಲ್ (೪೫) ಎಂಬ ಗಾಯಾಳುವನ್ನು ಘಟ್ಟ ಪ್ರದೇಶದಲ್ಲಿನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.

Leave a Comment