ಭುವನೇಶ್ವರ್‌ ಚಾಂಪಿಯನ್‌ ಬೌಲರ್‌:ಕೊಹ್ಲಿ ಗುಣಗಾನ

ಲಂಡನ್‌, ಜೂ 10 -ಭಾನುವಾರ ದಿ ಓವಲ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳ ಭಾರತದ ಗೆಲುವಿನಲ್ಲಿ ಮಧ್ಯಮ ವೇಗಿ ಭುವನೇಶ್ವರ್‌ ಕುಮಾರ್‌ ಅವರ ಪಾತ್ರ ಮುಖ್ಯವಾದದ್ದು ಎಂದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಶ್ಲಾಘಿಸಿದರು.
ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ನಿಗದಿತ 50 ಓವರ್‌ಗಳಲ್ಲಿ 352 ರನ್‌ ದಾಖಲಿಸಿತ್ತು. 353 ರನ್‌ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಅಂತಿಮವಾಗಿ 36 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ 29ರ ಪ್ರಾಯದ ಭುವನೇಶ್ವರ್‌ ಕುಮಾರ್‌ ಅತ್ಯುತ್ತಮ ಬೌಲಿಂಗ್‌ ಮಾಡಿದ್ದರು. ಎರಡನೇ ಅವಧಿಯಲ್ಲಿ ಬೌಲಿಂಗ್‌ ನಿರ್ವಹಣೆ ತೋರಿ ಇವರು ವಿಕೆಟ್‌ ಕಬಳಿಸಿದ್ದರು. 69 ರನ್‌ ಗಳಿಸಿ ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ಸ್ಟೀವ್‌ ಸ್ಮಿತ್‌ ಹಾಗೂ ಶೂನ್ಯಕ್ಕೆ ಮಾರ್ಕುಸ್‌ ಸ್ಟೋಯಿನಿಸ್‌ ಅವರ ವಿಕೆಟ್‌ಗಳನ್ನು ಒಂದೇ ಓವರ್‌ನಲ್ಲಿ ಕಿತ್ತರು. ಇದು ಪಂದ್ಯದ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಆಗಿತ್ತು.

ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಒಟ್ಟಾರೆ ಭುವನೇಶ್ವರ್‌ 10 ಓವರ್‌ಗಳಲ್ಲಿ 50 ರನ್‌ ನೀಡಿ ಮೂರು ವಿಕೆಟ್‌ ಪಡೆದುಕೊಂಡರು. ಜಸ್ಪ್ರೀತ್‌ ಬುಮ್ರಾ 61ಕ್ಕೆ 3 ಹಾಗೂ ಮಿಚೆಲ್‌ ಸ್ಟಾರ್ಕ್‌ 74 ಕ್ಕೆ 1 ವಿಕೆಟ್‌ ಕಬಳಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ” ಏಕದಿನ ಮಾದರಿಯ ಪಂದ್ಯಗಳ ಪ್ರದರ್ಶನ ನೋಡಿ ಭುವನೇಶ್ವರ್‌ ಕುಮಾರ್‌ ಅವರನ್ನು ಪರಿಗಣಿಸಬಾರದು. ಅವರು ಬೌಲಿಂಗ್‌ ಚಾಂಪಿಯನ್‌. ಹೊಸ ಅಥವಾ ಹಳೆಯ ಚೆಂಡು ನೀಡಿದರೂ ಅವರು ವಿಕೆಟ್‌ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ” ಎಂದು ಹೇಳಿದರು. ಯದ ಬಳಕ
” ಸ್ಮಿತ್‌ ಹಾಗೂ ಸ್ಟೋಯಿನಿಸ್‌ ಅವರ ವಿಕೆಟ್‌ ಪಡೆದಿದ್ದು ಪಂದ್ಯದ ಬಹುಮುಖ್ಯ ತಿರುವು. ಮುಂದಿನ ಪಂದ್ಯಗಳಿಗೂ ಭುವಿಗೆ ಅವಕಾಶವಿದ್ದು, ಒಂದು ವೇಳೆ ಮುಂಬರುವ ಪಂದ್ಯಗಳಲ್ಲಿ ಪಿಚ್‌ಗಳಲ್ಲಿನ ವ್ಯತ್ಯಾಸ ಕಂಡುಬಂದಲ್ಲಿ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರಿಗೂ ಅವಕಾಶ ನೀಡಲಾಗುವುದು” ಎಂದರು.
ತವರು ಸರಣಿಯಲ್ಲಿ ಭಾರತ , ಆಸ್ಟ್ರೇಲಿಯಾ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರ ವಿಶ್ವಾಸದಲ್ಲಿದ್ದ ಆಸೀಸ್‌, ಭಾನುವಾರದ ಪಂದ್ಯದ ಗೆಲುವಿನ ಫೇವರಿಟ್‌ ತಂಡವಾಗಿತ್ತು. ಆದರೆ, ಈ ಪಂದ್ಯದಲ್ಲಿ ನಾವು ಅದ್ಭುತ ಪ್ರದರ್ಶನ ತೋರಿದ್ದೆವು. ಹಾಗಾಗಿ, ಪಂದ್ಯದಲ್ಲಿ ಗೆಲುವು ಸಾಧಿಸಿದೆವು ಎಂದು ಹೇಳಿದರು.

Leave a Comment