ಭೀಕರ ರಸ್ತೆ ಅಪಘಾತ: ರಿಮ್ಸ್ ವೈದ್ಯ ಸಾವು

ರಾಯಚೂರು.ನ.01- ಕುಟುಂಬಸ್ಥರೊಂದಿಗೆ ವಾಹನದಲ್ಲಿ ತೆರಳುತ್ತಿರುವ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ, ರಿಮ್ಸ್ ವೈದ್ಯರೊಬ್ಬರು ಮೃತಪಟ್ಟಿರುವ ಧಾರುಣ ಘಟನೆ ನೆರೆ ರಾಜ್ಯ ಆಂಧ್ರ ಪ್ರದೇಶದ ಆದೋನಿ ಬಳಿ ಜರುಗಿದೆ.
ರಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರಶಾಂತ್ (29) ಮೃತ ದುರ್ದೈವಿಯಾಗಿದ್ದು, ವಾಹನದಲ್ಲಿ ಕುಟುಂಬಸ್ಥರೊಂದಿಗೆ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ವೈದ್ಯರ ಪತ್ನಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಆದೋನಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಡಾ.ಪ್ರಶಾಂತ್ ಅವರು ದೇವದುರ್ಗ ತಾಲೂಕಿನ ಚಿಕ್ಕಬೂದೂರು ಗ್ರಾಮದವರೆಂದು ಗುರುತಿಸಲಾಗಿದೆ. ಕಳೆದ 3 ತಿಂಗಳಿಂದಷ್ಟೇ ರಿಮ್ಸ್ ಆಸ್ಪತ್ರೆಯ ವೈದ್ಯರಾಗಿ ನಿಯೋಜನೆಗೊಂಡಿದ್ದರು.

Leave a Comment