ಭೀಕರ ಅಪಘಾತ

ದಂಪತಿ ದಾರುಣ ಮೃತ್ಯು
ಮಂಗಳೂರು, ಜೂ.೧೩- ನಗರದ ನಂತೂರ್ ಸರ್ಕಲ್ ಬಳಿ ನಿನ್ನೆ ಸಂಜೆ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ಕಾಪುವಿನ ನಿವಾಸಿ ಮುಹಮ್ಮದ್ ಸಮೀರ್(೩೨) ಮತ್ತು ಅವರ ಪತ್ನಿ ಪುತ್ತೂರಿನ ಅಮ್ರೀನ್(೨೦) ಎಂದು ಗುರುತಿಸಲಾಗಿದೆ.
ಸಮೀರ್ ಮತ್ತು ಅಮ್ರೀನ್ ಮಂಗಳವಾರ ಸಂಜೆ ಸಂಬಂಧಿಕರ ಮನೆಗೆಂದು ಕಾಪುವಿನಿಂದ ಮಂಗಳೂರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಸಮೀರ್ ಚಲಾಯಿಸುತ್ತಿದ್ದ ವಾಹನ ನಂತೂರ್ ವೃತ್ತ ತಲುಪುತ್ತಿದ್ದಂತೆ ಈಚರ್ ಟೆಂಪೊವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರೂ ರೆಸ್ತಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮ್ರೀನ್ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದರೆ ಸಮೀರ್ ರಾತ್ರಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇವಹವು ಖಾಸಗಿ ಆಸ್ಪತ್ರೆಯಲ್ಲಿಡಲಾಗಿದೆ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment