ಭೀಕರ ಅಪಘಾತ ೫ ಮಂದಿ ಬಲಿ : ಕೃಷ್ಣಗಿರಿ ಬಳಿ ಅವಘಡ ಸತ್ತವರು ಬೆಂಗಳೂರಿನವರು: ೧೫ ಮಂದಿಗೆ ಗಾಯ

ಹೊಸೂರು,ಮಾ.೧೩-ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ಇಂದು ಮುಂಜಾನೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಬೆಂಗಳೂರಿನ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಸಾವನ್ನಪ್ಪಿದ್ದು ೧೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

  • ಕೃಷ್ಣಗಿರಿಯ ಸೂಳಗಿರಿ ಬಳಿ ಸರಣಿ ಅಪಘಾತ
  • ಅಪಘಾತದಲ್ಲಿ ಬೆಂಗಳೂರಿನ ಐವರು ಬಲಿ
  • ಚೆನ್ನೈನಿಂದ ಇಂದು ನಸುಕಿನಲ್ಲಿ ವಾಪಾಸಾಗುತ್ತಿದ್ದ ನತದೃಷ್ಟರು
  • ಕಾರಿನಲ್ಲಿದ್ದ ಮೃತದೇಹಗಳನ್ನು ತೆಗೆಯಲು ಹರಸಾಹಸ

ಬೆಂಗಳೂರಿನ ಲಕ್ಷ್ಮೀನಾರಾಯಣಪುರದ ಸುಮತಿ (೪೫) ಶಂಕರ್ (೫೦) ಸುಮತಿ, ಮಣಿ ಮತ್ತು ಕುಬೇರನ್ ಮೃತಪಟ್ಟಿದ್ದು ಗಾಯಗೊಂಡಿರುವ ಆನಂದ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಕೃಷ್ಣಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ : ಇಕೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಪ್ರಯಾಣಿಕರು ಚೆನ್ನೈನಲ್ಲಿ ತಮ್ಮ ಸಂಬಂಧಿಕರ ಮನೆಯಿಂದ ವಾಪಸು ಬರುತಿದ್ದ ವೇಳೆ ಎದುಗಡೆಯಿಂದ ಹೋಗುತಿದ್ದ ಲಾರಿಯೊಂದು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆಯಿತು ಹಿಂಬದಿಯಲ್ಲಿದ್ದ ಇಕೋ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ಕಾರಿನ ಹಿಂಬದಿಯಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಲಾರಿ ಮತ್ತು ಬಸ್ಸಿನ ನಡುವೆ ಸಿಲುಕಿಕೊಂಡ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಬಸ್ಸಿನಲ್ಲಿ ಪ್ರಯಾಣಿಸಯುತಿದ್ದ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದೆ.

ಕರ್ನಾಟಕ ನೋಂದಣಿಯ ಕಾರು ಅಪಘಾತಕ್ಕೀಡಾಗಿದ್ದು, ಈ ಕಾರಿನಲ್ಲಿ  ಸುಮತಿ,ಶಂಕರ್.ಸುಮತಿ, ಮಣಿ ಮತ್ತು ಕುಬೇರನ್ ಪ್ರಯಾಣ ಬೆಳೆಸಿದ್ದರು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ಇನ್ನು ಸ್ಥಳೀಯರು ಹಾಗೂ ಪೊಲೀಸರು, ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೃತ ದೇಹಗಳನ್ನು ಹೊರ ತೆಗೆಯಲು ಹರಸಾಹಸಪಟ್ಟರು.

ಮೃತ ದೇಹಗಳನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಸೂರಿನ ಅಟ್ಕೊ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment