ಭೀಕರ ಅಪಘಾತಕ್ಕೆ ಶಿಕ್ಷಕಿ ಮೃತ್ಯು

ಮಂಗಳೂರು, ಡಿ.೨- ಕಂಟೈನರ್ ಲಾರಿ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಿಸಿ ಎಸಗಿದ ಅಪಘಾತದಲ್ಲಿ ಶಾಲಾ ಶಿಕ್ಷಕಿ ಮೃತಪಟ್ಟ ಘಟನೆ ಕದ್ರಿಕಂಬಳ ರಸ್ತೆಯಲ್ಲಿ ನಡೆದಿದೆ. ಮೃತ ಶಿಕ್ಷಕಿಯನ್ನು ಶೈಲಜಾ ಎಂದು ಗುರುತಿಸಲಾಗಿದ್ದು ಇವರು ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಶಾಲೆಯ ಶಿಕ್ಷಕಿಯಾಗಿದ್ದರು. ಶೈಲಜಾರವರು ನಗರದ ಬಿಜೈ ನಿವಾಸಿ ಎಂದು ತಿಳಿದು ಬಂದಿದೆ.
ಲಾರಿ ಹಾಗೂ ಆಟೋ ನಡುವೆ ನಡೆದ ಅಪಘಾತ ನಡೆದಿದ್ದು ಆಟೋದಲ್ಲಿ ಪ್ರಯಾಣ ನಡೆಸುತ್ತಿದ್ದ ಶಿಕ್ಷಕಿ ಮೃತಪಟ್ಟಿದ್ದು ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment