ಭಾ.ಜ.ಪ. ಮುಸ್ಲಿಂ ವಿರೋಧಿಯಲ್ಲ, ಸಿ.ಸಿ. ಪಾಟೀಲ

ನರಗುಂದ,ನ.14- ಭಾರತೀಯ ಜನತಾಪಕ್ಷ ಮುಸ್ಲಿಂ ವಿರೋಧಿಯಲ್ಲ ಈ ದೇಶದ ತಾಯಿ ನೆಲವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ನಮ್ಮ ಪಕ್ಷ ಗೌರವಿಸುತ್ತದೆ ಎಂದು ಮಾಜಿ ಸಚಿವ, ಸಿ.ಸಿ. ಪಾಟೀಲ ನುಡಿದರು.
ಕಾಂಗ್ರೆಸ್, ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ತಾಲೂಕಿನ ಕೊಣ್ಣೂರು ಗ್ರಾಮದ ಹಲವಾರು ಮುಸ್ಲಿಂ ಸಮಾಜದ ಮುಖಂಡರನ್ನು ಪಕ್ಷದ ಕಾರ್ಯಾಲಯದಲ್ಲಿ ಬರಮಾಡಿಕೊಂಡು ಮಾತನಾಡುತ್ತಿದ್ದ ಅವರು ಈ ದೇಶಕ್ಕೆ ಸ್ವಾತಂತ್ರ್ಯ ದೊರೆತು 71 ವರ್ಷ ಕಳೆದರೂ ದಲಿತರು ಹಾಗೂ ಮುಸ್ಲಿಂ ಜನಾಂಗವನ್ನು ಕೇವಲ ತನ್ನ ಮತ ಬ್ಯಾಂಕನ್ನಾಗಿ ಮಾಡಿಕೊಂಡು ಕಾಂಗ್ರೆಸ್, ಭಾರತೀಯ ಜನತಾ ಪಕ್ಷವನ್ನು ದಲಿತ ಹಾಗೂ ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದದ್ದು, ಈ ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯದ ವ್ಯಕ್ತಿಗೆ ನೀಡಿದ ಪಕ್ಷ ಯಾವುದು ಎನ್ನುವುದನ್ನು ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾನು 2 ಬಾರಿ ಈ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದಾನೆ. ನನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ. ನಾನು ಎಲ್ಲ ಸಮುದಾಯದ ಜನರನ್ನು ಗೌರವಿಸುತ್ತೇನೆ. ನಾನು ನಾವೆಲ್ಲರೂ ಕೂಡಿ ಮುಂಬರುವ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.
ಮುಸ್ಲಿಂ ಸಮಾಜದ ರಜಾಕ ಮೂಲಿಮನಿ, ರಮಜಾನಸಾಬ ಸುರಕೋಡ, ಅಬ್ದುಲ್ ಸಾಬ ಸನ್ನಿ, ಮೌಲಾಸಾಬ ಮುದಕವಿ, ಅಲ್ಲಾ ಭಕ್ಷ ಮುಖಪ್ಪನವರ, ರಮಜಾನಸಾಬ ಬಾಳಪ್ಪನವರ, ಫಕಾಕೀರಪ್ಪಸಾಬ ಅತ್ತಾರ, ಹಸನಸಾಬ ಸುರಕೋಡ, ರಾಜೇಸಾಬ ಅಲ್ಲಿಭಾಯಿ, ರಿಯಾಜ್ ಬಾಳಪ್ಪನವರ, ಹುಸೇನಸಾಬ ಸನ್ನಿ, ಆಶೀಯಸಾಬ ಸನ್ನಿ, ಅಲ್ಲಾಸಾಬ ಮೂಲಿಮನಿ, ಇಸ್ಮಾಯಿಲ್ ಸಾಬ ಸನ್ನಿ, ರಮಜಾನಸಾಬ ಚವಡಿ, ಪಕ್ಷಕ್ಕೆ ಸೇರ್ಪಡೆಗೊಂಡರು.
ಬಾಬು ಹಿರೇಹೊಳಿ, ಬಿಬಿ ಐನಾಪೂರ, ಎ.ಎಮ್ ಹುಡೇದ, ಚಂದ್ರು ದಂಡಿನ, ಶಂಕರಗೌಡ ಯಲ್ಲಪ್ಪಗೌಡ್ರ ಉಪಸ್ಥಿತರಿದ್ದರು.

Leave a Comment