ಭಾಷಾ ಪ್ರೇಮ ಸಾರುವ ಕನ್ನಡ ದೇಶದೊಳ್

ನವೆಂಬರ್ ತಿಂಗಳು ಹತ್ತಿರವಾದಂತೆ ಕನ್ನಡ ಭಾಷೆ ಸದ್ದು ಹೆಚ್ಚುತ್ತದೆ ಅದರಂತೆ ಯುವ ಕನ್ನಡಿಗರೇ ಸೇರಿಕೊಂಡು ಏಳು ವರ್ಷದ ಶ್ರಮ, ಮೂರು ವರ್ಷದ ಶೂಟಿಂಗ್ ಮಾಡಿರುವ ’ಕನ್ನಡ ದೇಶದೊಳ್ ಚಿತ್ರವನ್ನು ಮುಗಿಸಿಕೊಂಡು ಬಂದಿದ್ದಾರೆ.

ಚಿತ್ರದ ಅಡಿಬರಹದಲ್ಲಿ ಕರುನಾಡಲ್ಲಿ ಕನ್ನಡಿಗನೇ ಕಂಠೀರವ ಎಂದು ಸಾರಲಾಗಿದೆ.ಕನ್ನಡ ಭಾಷೆಯು ಆಟೋದ ಮೇಲೆ, ಫೇಸ್‌ಬುಕ್‌ನಲ್ಲಿ ಚಾಲ್ತಿಯಲ್ಲಿದ್ದರೆ ಸಾಕಾಗುವುದಿಲ್ಲ. ಇದು ಎಲ್ಲಾ ಕಡೆ ಪಸರಿಸಬೇಕು. ಇದಕ್ಕಾಗಿ ಹೋರಾಟ ಮಾಡುವುದನ್ನು ಚಿತ್ರರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

kannada-deshadol_112

ಇದನ್ನು ನೋಡಿದವರು ಭಾಷಯ  ಮೌಲ್ಯ, ಕರ್ನಾಟದ ಸೊಗಡಿನ ಹಿರಿಮೆಯನ್ನು ತಿಳಿದುಕೊಳ್ಳುತ್ತಾರೆ. ನಾವುಗಳು ಇದನ್ನು ತಾತ್ಸರ ಮಾಡದೆ, ಒಲವು ತೋರಿಸಬೇಕೆಂದು  ಮುಂದಿನ ಪೀಳಿಗೆಗೆ  ಚಿತ್ರವು ಕಟ್ಟಿಕೊಡಲಿದೆ. ಇತಿಹಾಸದಲ್ಲಿ  ಇವತ್ತಿನ ಕನ್ನಡ ಯಾವ ಪರಿಸ್ಥಿತಿಯಲ್ಲಿದೆ, ಮುಂದೇನು ಆಗುತ್ತದೆ ಎಂಬುದನ್ನು ಕಮರ್ಷಿಯಲ್ ಮಾದರಿಯಲ್ಲಿ ಕತೆಯನ್ನು ಏಣಯಲಾಗಿದೆ. ಪ್ರಾದೇಶಿಕ ಭಾಷೆ ನಮ್ಮಲ್ಲೆ ಇರುವ ತುಳು, ಕೊಂಕಣಿ, ಕೊಡವ ಭಾಷೆಗಳನ್ನು ತೋರಿಸಲಾಗಿದೆ ಎನ್ನುತ್ತಾರೆ ರಚನೆ, ನಿರ್ದೇಶನ ಮಾಡಿರುವ  ಅವಿನಾಶ್‌ಕಂಠೀರವ.

kannada-deshadol_105

ವಿದೇಶಿ ಕಲಾವಿದರಾದ  ರಷ್ಯಾದ ಜೇನ್, ಆಫ್‌ಘಾನಿಸ್ತಾನ ಮೂಲದ ನಾಜರ್‌ಅಲಿ ಇಂಗ್ಲೆಂಡ್‌ನಿಂದ ಬಂದಂತ ಪಾತ್ರದಲ್ಲಿ ನಡೆಯುವ ಘಟನೆಯಲ್ಲಿ  ಕಾಣಿಸಿಕೊಂಡಿದ್ದಾರೆ. ಟೆನ್ನಿಸ್‌ಕೃಷ್ಣ ಕನ್ನಡಚಿಂತಕ, ಉಳಿದಂತೆ ಸುಚೇಂದ್ರಪ್ರಸಾದ್, ಸನತ್, ಶಿವು, ಹರೀಶ್‌ದಾಸ್ ಮುಂತಾದವರ ನಟನೆ ಇದೆ.  ರಾಜ್ಯದ ೩೦ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿದೆ.

ಚಿತ್ರದ ಎಂಟು ಹಾಡುಗಳಿಗೆ ಸಾಲೊರಾಜ್‌ಮೆಲಂಗಿ-ಸಾತ್ವಿಕ್‌ಆರಾಧ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ಶರತ್‌ಕುಮಾರ್.ಜಿ,  ಸಂಕಲನ ಜೀವನ್‌ಪ್ರಕಾಶ್.ಎನ್  ಅವರದಾಗಿದೆ.  ಕನ್ನಡಕ್ಕೆ ಏನಾದರೂ ಕೊಡುಗೆ ಕೊಡಬೇಕಂಬ ಅದಮ್ಯ ಬಯಕೆಯಿಂದ  ಪ್ರಕಾಶ್.ಆರ್.,ಹೆಚ್. ವಿನೋಧ್‌ಗೌಡ, ಯೋಗಾನಂದ್.ಆರ್ ಮತ್ತು  ವಿಶ್ವನಾಥ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

Leave a Comment