ಭಾಷಣ ಸ್ಪರ್ಧೆಯಲ್ಲಿ

ನಗರದ  ಚೈತನ್ಯ ಸಹಕಾರಿ ಬ್ಯಾಂಕಿನ ಬೆಳ್ಳಿಹಬ್ಬ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ಎಸ್.ಜೆ.ಎಮ್.ವಿ.ಎಸ್. ಕಲಾ ಹಾಗೂ ವಾಣಿಜ್ಯ ಪದವಿ ಮಹಿಳಾ ಮಹಾ ವಿದ್ಯಾಲಯದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಗ್ಲೋರಿಯಾ ಡಿಸೋಜಾರವರಿಗೆ ಪ್ರಥಮ ಸ್ಥಾನಗಳಿಸಿ, 20,000 ರೂ ಬಹುಮಾನ ಪಡೆದುಕೊಂಡಿದ್ದಾರೆ.  ಇವರ ಸಾಧನೆಗೆ ಮೂರುಸಾವಿರಮಠದ ಪೀಠಾಧಿಪತಿಗಳಾದ ಶ್ರೀ ಮನ್ಮಾಹಾರಾಜ ನಿರಂಜನ ಜಗದ್ಗುರು ಗುರು ಸಿದ್ಧರಾಜಯೋಗೀಂದ್ರ  ಮಹಾಸ್ವಾಮಿಗಳು, ಮಹಾವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಹಾಗೂ ಚರ್ಚಾ ಕೂಟದ ಮುಖ್ಯಸ್ಥರು ಮತ್ತು ಮಹಾವಿದ್ಯಾಲಯದ ಭೋಧಕ -ಭೋಧಕೇತರ  ಸಿಬ್ಬಂದಿ ಅಭಿನಂದಿಸಿದ್ದಾರೆ.

Leave a Comment