ಭಾವನೆ ವರ್ಸಸ್ ಬುದ್ಧ್ದಿವಂತಿಕೆ

ಬುದ್ದಿವಂತಿಕೆ ಹಿಂದೆ ಓಡಿ ಹೋಗಬೇಡಿ ಸಂಬಂಧವನ್ನು ಹಾಳು ಮಾಡಿಕೊಂಡು ಬಿಡುತ್ತೀರಾ ಎನ್ನುವ ಸಾಮಾಜಿಕ ಸಂದೇವಿರುವ ’ಅಸಮತೋಮ ಸದ್ಗಮಯ’ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತ ತಲುಪಿದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ತಿಂಗಳಾಂತ್ಯಕ್ಕೆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ರಾಜೇಶ್ ವೇಣೂರ್ ನಿದೇಶನ ಮಾಡಿರುವ ಈ ಚಿತ್ರಕ್ಕೆ ಅಶ್ವಿನ್ ಪೆರೇರಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರಾಧಿಕಾ ಚೇತನ್, ಲಾಸ್ಯ ನಾಗರಾಜ್, ಕಿರಣ್ ರಾಜ್ ಮತ್ತಿತರರು ಪ್ರದಾನ ಭೂಮಿಕೆಯಲ್ಲಿರುವ ಚಿತ್ರ ಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.
ಚಿತ್ರ ಅಂದುಕೊಂಡದಕ್ಕಿಂತ ಉತ್ತಮವಾಗಿ ಮೂಡಿಬಂದಿರುವ ಖುಷಿಯಲ್ಲಿ ಇಡೀ ಚಿತ್ರತಂಡವಿದ್ದು, ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಕಳೆದವಾರ ನಡೆಯಿತು. ಬಿಗ್‌ಬಾಸ್ ರಿಯಾಲಿಟಿ ಶೋ ವಿಜೇತ ಚಂದನ್ ಶೆಟ್ಟಿ ಮತ್ತಿತರರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ರಾಜೇಶ್, ಶಿಕ್ಷಣದ ವ್ಯವಸ್ಥೆ, ಪೋಷಕರ ಸುತ್ತಾ ಕಥೆ ಸಾಗಲಿದೆ. ಬುದ್ದಿವಂತಿಕೆ ಮತ್ತು ಭಾವನೆಗಳ ಸುತ್ತ ಕಥೆ ಎಣೆಯಲಾಗಿದೆ. ಚಿತ್ರವನ್ನು ಮಂಗಳೂರು, ಬೆಂಗಳೂರು ಮತ್ತು ಮಂಡ್ಯದಲ್ಲಿ ಚಿತ್ರೀಕರಣ ಮಾಡಲಾಗಿದೆ. ದುಬೈನಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

ಸರ್ಕಾರಿ ಶಾಲೆಗಳ ಸ್ಥಿತಿಗತಿ,ಅವುಗಳ ಸುಧಾರಣೆಗೆ ಅನುಸರಿಸಬೇಕಾದ ಕ್ರಮ, ಮಕ್ಕಳನ್ನು ಮಾರ್ಕ್ಸ್ ಕಾರ್ಡ್ ಹಿಂದೆ ತಳ್ಳುವ ಪೋಷಕರು ಮತ್ತು ಅದರಿಂದ ಆಗುವ ಅನಾಹುತಗಳನ್ನು ಚಿತ್ರದಲ್ಲಿ ನೈಜತೆಗೆ ಹತ್ತಿರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಐಕ್ಯೂ ಹಿಂದೆ ಬಿದ್ದರೆ ಭಾವನೆಗಳಿಗೆ ಬೆಲೆ ಇರುವುದಿಲ್ಲ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಭಾವನೆಗೆ ಒತ್ತು ನೀಡಬೇಕಾ ಇಲ್ಲವೆ ಬುದ್ದಿವಂತಿಕೆಗೆ ಆದ್ಯತೆ ನೀಡಬೇಕಾ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎನ್ನುತ್ತಾರೆ.

ಚಿತ್ರದಲ್ಲಿ ಐದು ಹಾಡುಗಳಿವೆ ಅದರಲ್ಲಿ ನಾಲ್ಕು ಹಾಡು ಚಿತ್ರದಲ್ಲಿವೆ. ಅವುಗಳ ಪೈಕಿ ಮಕ್ಕಳ ಕುರಿತಾದ ಹಾಡು, ಅಮ್ಮನ ಕುರಿತು ಮತ್ತು ಟೈಟಲ್ ಹಾಡು ಹೀಗೆ ವಿಭಿನ್ನವಾದ ಹಾಡುಗಳನ್ನು ಸಂಗೀತ ನಿರ್ದೇಶಕ ವಹಬ್ ಸಲೀಂ ನೀಡಿದ್ದಾರೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸವಿದೆ ಇನ್ನು ಜನ ನೋಡಿ ಆಶೀರ್ವದಿಸಿದರೆ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂದು ಹೇಳಿಕೊಂಡರು.

ನಾಯಕಿ ರಾಧಿಕಾ ಚೇತನ್, ಪಿನ್‌ಲ್ಯಾಂಡ್‌ನಿಂದ ಮೂಲವನ್ನು ಹುಡುಕಿಕೊಂಡು ಭಾರತಕ್ಕೆ ಬರುವ ಪಾತ್ರ ನನ್ನದು ಒಳ್ಳೆಯ ಪಾತ್ರ ಸಿಕ್ಕಿದೆ ಎಂದರೆ ಲಾಸ್ಯ ನಾಗರಾಜ್, ಮೊದಲ ಚಿತ್ರ ಹಳ್ಳಿ ಹುಡುಗಿ. ಏನೂ ಗೊತ್ತಿಲ್ಲದಿದ್ದರೂ ಎಲ್ಲವೂ ಗೊತ್ತಿದೆ ಎಂದು ಬಿಂಬಿಸಿಕೊಳ್ಳುವ ಮತ್ತು ಮಾರ್ಡನ್ ಹುಡುಗಿ ಪಾತ್ರ ಎಂದರು. ನಾಯಕ ಕಿರಣ್ ರಾಜ್ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚಿನ ಒತ್ತು ಇದೆ. ಈ ಚಿತ್ರದ ಮೂಲಕ ಬ್ರೇಕ್ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನುಳಿದಂತೆ ಚಿತ್ರದಲ್ಲಿ ಬೇಬಿ ಚಿತ್ರಾಲಿ, ಖಳನಟನ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ ಮತ್ತಿತರು ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಅಶ್ವಿನ್, ಚಿತ್ರೀಕರಣದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ..ಚಿತ್ರಕ್ಕೆ ಏನು ಬೇಕೋ ಅದನ್ನು ಒಡಗಿಸಿಕೊಡಲಾಗಿದೆ.ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸವಿದೆ. ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

Leave a Comment