ಭಾವನಾ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ

ರಾಂಚಿ, ಫೆ.15 – ಭಾರತದ ಭಾವನಾ ಜತ್ ಅವರು ರಾಷ್ಟ್ರೀಯ ಚಾಂಪಿಯನ್ ಶಿಪ್ ನ 20 ಕಿಲೋ ಮಿಟರ್ ವಾಕ್ ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.

ರಾಜಸ್ಥಾನ ಮೂಲದ ಭಾವನಾ 1 ಗಂಟೆ 29 ನಿಮಿಷ 54 ಸೆಕೆಂಡ್ ಗಳಲ್ಲಿ ಕ್ರಮಿಸಿದರು. ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು 1 ಗಂಟೆ 31 ನಿಮಿಷದಲ್ಲಿ ಕ್ರಮಿಸಬೇಕಿತ್ತು. ಭಾವನಾ ಅವರು ಅಕ್ಟೋಬರ್ ನಲ್ಲಿ 1:38:30 ಕ್ರಮಿಸಿ ಸಾಧನೆ ಮಾಡಿದ್ದರು.

“ನಾನು 1:28 ಅಥವಾ 1:29 ನಿಮಿಷದಲ್ಲಿ ಕ್ರಮಿಸಲು ಕಳೆದ ಮೂರು ತಿಂಗಳಿನಿಂದ ಕಠಿಣ ಅಭ್ಯಾಸ ಮಾಡಿದ್ದೇನೆ. ತಂದೆ, ತಾಯಿ ಹಾಗೂ ರೈಲ್ವೆ ಇಲಾಖೆ ಸಹಕಾರ, ಪ್ರೋತ್ಸಾಹ ನೀಡಿದಕ್ಕೆ ಧನ್ಯವಾದಗಳು” ಎಂದು ಭಾವನಾ ತಿಳಿಸಿದ್ದಾರೆ.  ಪ್ರಿಯಾಂಕಾ ಗೋಸ್ವಾಮಿ ಅವರು 36 ಸೆಕೆಂಡ್ ಗಳ ಅಂತರದಲ್ಲಿ ಒಲಿಂಪಿಕ್ಸ್ ಅರ್ಹತೆಯನ್ನು ಪಡೆಯುವಲ್ಲಿ ವಿಫಲರಾದರು.

ಪುರುಷರ ವಿಭಾಗದಲ್ಲಿ ಸಂದೀಪ್ ಕುಮಾರ್ ಅವರು 1:21:34 ರಲ್ಲಿ ಕ್ರಮಿಸಿ ಮೊದಲ ಸ್ಥಾನವನ್ನು ಕ್ರಮಿಸಿದರು. ಇವರು ಸಹ ಟೋಕಿಯೊ ಒಲಿಂಪಿಕ್ಸ್ ಟಿಕಟ್ ವಂಚಿತರಾದರು. ಕುಮಾರ್ ಅವರು ಜಪಾನ್ ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಷ್ಯ ರೇಸ್ ವಾಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದು, ಒಲಂಪಿಕ್ಸ್ ಕನಸು ಕಾಣುತ್ತಿದ್ದಾರೆ.

Leave a Comment