ಭಾವನಾತ್ಮಕ ನಿಲ್ದಾಣ

  • ಪ್ರಕಾಶ್

ಪ್ರೇಮ, ಸ್ನೇಹ ಸಂಬಂದಗಳು,ವೃತ್ತಿಜೀವನ ಮತ್ತು ಭಾವೋದ್ರೇಕದ ಮೇಲೆ ಮುಟ್ಟುವ ಅಧುನಿಕ ಕತೆಯನ್ನು ಒಳಗೊಂಡಿರುವ ಮುಂದಿನ ನಿಲ್ದಾಣ ಚಿತ್ರ ನಾಲ್ವರ ಜೀವನ ಮತ್ತವರ ಭಾವನಾತ್ಮಕ ಸವಾರಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ .ಕಲಾವಿದರು ಒಂದೊಂದು ವರ್ಗದ  ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ  ಸರಿತಪ್ಪು ಎನ್ನುವುದನ್ನು ನೋಡುಗರ ವಿವೇಚನೆಗೆ ಬಿಡಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿನಯ್ ಭರಧ್ವಾಜ್.

film-mundina-nildana_175

ಚಿತ್ರದ ಮುಹೂರ್ತದ ನಂತರ ಮಾಹಿತಿ ನೀಡಿದ ಅವರು, ಈಗಿನ ತಲೆಮಾರಿನವರು ಏನು ಮಾಡುತ್ತಿದ್ದಾರೆ ಎಂಬುದನ್ನು ರಿಯಾಲಿಟಿಯಂತೆ  ಚಿತ್ರದಲ್ಲಿ ಹೇಳಲಾಗುವುದು.

film-mundina-nildana_181

ಚಿತ್ರದಲ್ಲಿ ಸೂಕ್ಷತೆ ಇರಲಿದ್ದು, ಕಮರ್ಷಿಯಲ್ ಫಾರ್ಮೆಟ್‌ನಲ್ಲಿ ತೋರಿಸುವ  ಪ್ರಯತ್ನ ಮಾಡಲಾಗುತ್ತಿದೆ.ಮುಂದಿನ ತಿಂಗಳ ಮೊದಲ ಭಾಗದಲ್ಲಿ  ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿ ಡಿಸೆಂಬರ್ ಕೊನೆಯಲ್ಲಿ ಜನರಿಗೆ ತೋರಿಸಲು ತಂಡವು ಯೋಜನೆ ಹಾಕಿಕೊಂಡಿದೆ ಎಂದರು. ಸ್ಟಾರ್ ಟಾಕ್ ವಿತ್ ವಿನಯ ಎನ್ನುವ ಅಂತರಾಷ್ಟ್ರೀಯ ಚರ್ಚಾ ಕಾರ್ಯಕ್ರಮ ನಿರ್ವಹಿಸಿರುವ ವಿನಯ್ ಭರಧ್ವಾಜ್‌ಗೆ ಮೊದಲ ಸಿನೆಮಾ.ಸಿಂಗಪೂರ್‌ದಲ್ಲಿ  ಕೆಲಸ ಮಾಡುತ್ತಿರುವ ಕನ್ನಡಿಗ. ಸಮಯ ಸಿಕ್ಕಾಗಲೆಲ್ಲಾ ಕನ್ನಡ ಭಾಷೆಯ ಋಣ ತೀರಿಸಲು ತಾಯ್ನಾಡಿಗೆ ಬಂದು ಕನ್ನಡದ  ಮಾಡುತ್ತಿದ್ದರು. ಕಲಾವಿದರೊಂದಿಗೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಅವರಾಡಿದ ಕೆಲವು ಮಾತುಗಳನ್ನು ಹೆಕ್ಕಿಕೊಂಡು ’ಮುಂದಿನ  ನಿಲ್ದಾಣ’ .

film-mundina-nildana_140

ನಾಯಕನಾಗಿ ಪ್ರವೀಣ್‌ತೇಜ್ ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಂಡರೆ ಇಲ್ಲಿಯವರೆಗೆ ಮಾಡಿಲ್ಲದ ಪಾತ್ರ,ದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾಚೇತನ್ ಕಾಣಿಸಿಕೊಳ್ಳಲಿದ್ದು ಚಿತ್ರದಲ್ಲಿ ಅವರಿಗೆ ಕುಂಚ ಕಲಾವಿದೆ ಪಾತ್ರ ನವಪ್ರತಿಭೆ ಅನನ್ಯಕಶ್ಯಪ್ ಪ್ರಚಲತ ಯುವಜನತೆ ಏನು ಯೋಚನೆ ಮಾಡುತ್ತಾರೆ. ಅದನ್ನು ಬಿಂಬಿಸುವ  ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ಐದು  ಹಾಡುಗಳಿಗೆ ಐದು ಸಂಗೀತ  ನಿರ್ದೇಶಕರು ರಾಗ ಒದಗಿಸುತ್ತಿರುವುದು ವಿಶೇಷ.

ಇಂಗ್ಲೆಡ್‌ನಲ್ಲಿರುವ  ವೈದ್ಯ ಸುರೇಶ್, ದುಬೈನ ತಾರನಾಥರೈ,ಸಿಂಗಪೂರ್‌ನ ಶೇಷ್ ಮತ್ತು ಬೆಂಗಳೂರು ನಿವಾಸಿ ಮುರಳಿ ಸೇರಿಕೊಂಡು ಕನ್ನಡ ಭಾಷೆಯ ಅಭಿಮಾನದ ಮೇಲೆ ಮುಂದಿನ ನಿಲ್ದಾಣ ಚಿತ್ರಕ್ಕೆ ಹಣ ಒದಗಿಸುತ್ತಿದ್ದಾರೆ.

Leave a Comment