ಭಾರತ 502/7 ಡಿಕ್ಲೇರ್

ವಿಶಾಖಪಟ್ಟಣ, ಅ.3: ದಕ್ಷಿಣ ಆಫ್ರಿಕ ವಿರುದ್ಧ ಪ್ರಥಮ ಟೆಸ್ಟ್ ನಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ 136 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 502 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಮಾಯಾಂಕ್ ಅಗರ್ವಾಲ್ 215ರನ್, ರೋಹಿತ್ ಶರ್ಮಾ 176ರನ್, ಚೇತೇಶ್ವರ ಪೂಜಾರ 6ರನ್, ನಾಯಕ ವಿರಾಟ್ ಕೊಹ್ಲಿ 20ರನ್, ಅಜಿಂಕ್ಯ ರಹಾನೆ 15ರನ್, ಹನುಮ ವಿಹಾರಿ10 ರನ್, ವೃದ್ದಿಮಾನ್ ಸಹಾ 21ರನ್ ಗಳಿಸಿ ಔಟಾಗಿದ್ದಾರೆ.ರವೀಂದ್ರ ಜಡೇಜ ಔಟಾಗದೆ 30ರನ್ ಗಳಿಸಿದರು.

ಆಫ್ರಿಕದ ಪರ ಕೇಶವ್ ಮಹಾರಾಜ್ 189ಕ್ಕೆ 3ವಿಕೆಟ್, ವೆರ್ನಾನ್ ಫಿಲ್ಯಾಂಡರ್, ಡಾನೆ ಪೀಡ್, ಸೆನುರಾನ್ ಮುತ್ತುಸ್ವಾಮಿ , ಡೀನ್ ಎಲ್ಗರ್ ತಲಾ 1 ವಿಕೆಟ್ ಪಡೆದರು.

Leave a Comment