ಭಾರತ 19 ವಯೋಮಿತಿ ಬೌಲರ್‌ ಎರಡು ವರ್ಷ ಅಮಾನತು

ನವದೆಹಲಿ, ಜೂ 20 – ದೋಷಯುಕ್ತ ಜನನ ಪ್ರಮಾಣ ಸಲ್ಲಿಸಿದ ಕಾರಣ ಜಮ್ಮು ಮತ್ತು ಕಾಶ್ಮೀರದ ವೇಗಿ ರಸಿಖ್‌ ಸಲಾಮ್‌ ಅವರನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಎರಡು ವರ್ಷಗಳ ಕಾಲ ಅಮಾನತು ಮಾಡಿದೆ.

ರಸಿಕ್‌ ಸಲಾಮ್‌ ಅವರು 19 ವಯೋಮಿತಿ ಭಾರತ ತಂಡ ಪ್ರತಿನಿಧಿಸಲು ದೋಷಯುಕ್ತ ಜನನ ಪ್ರಮಾಣ ಪತ್ರವನ್ನು ಬಿಸಿಸಿಐಗೆ ಸಲ್ಲಿಸಿದ್ದರು. ಇದನ್ನೂ ಗಮನಿಸಿದ ಬಿಸಿಸಿಐ ಅವರ ಜನನ ದಿನಾಂಕದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಅವರನ್ನು ಬಿಸಿಸಿಐ ಸಹಯೋಗದ ಯಾವುದೇ ಟೂರ್ನಿಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.

ಸಲಾಮ್‌ ಜುಲೈ 21 ರಿಂದ ಇಂಗ್ಲೆಂಡ್‌ನಲ್ಲಿ 19 ವಯೋಮಿತಿ ತ್ರಿಕೋನ ಸರಣಿ ಆಡಲು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಅವರು ಸಲ್ಲಿಸಿದ ಜನನ ಪ್ರಮಾಣ ಪತ್ರದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅವರ ಸ್ಥಾನಕ್ಕೆ ಇದೀಗ ಪ್ರಭಾತ್‌ ಮೌರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ರಸಿಖ್‌ ಸಲಾಮ್‌ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ದವರು. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಒಂದೇ ಒಂದು ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 48 ರನ್‌ ಗಳಿಸಿದ್ದರು. ಪರ್ವೇಜ್‌ ರಸೂಲ್‌ ಹಾಗೂ ಮಂಜೂರ್‌ ದಾರ್‌ ಬಳಿಕ ಕಾಶ್ಮೀರದಿಂದ ಬಸಿಸಿಐ ಅಮಾನತು ಮಾಡಿದ ಮೂರನೇ ಆಟಗಾರ ಸಲಾಮ್‌ ಆಗಿದ್ದಾರೆ.

Leave a Comment