ಭಾರತ ರತ್ನ”  ಕ್ಕಿಂತ  ಮಹಾತ್ಮ ಗಾಂಧಿ  ದೊಡ್ಡ ವ್ಯಕ್ತಿ

ನವದೆಹಲಿ, ಜ ೧೭ – “ಭಾರತ ರತ್ನ” ಪುರಸ್ಕಾರವನ್ನೂ   ಮೀರಿದ  ಮಹಾನ್  ವ್ಯಕ್ತಿ  ಮಹಾತ್ಮ ಗಾಂಧಿ  ಎಂದು  ದೇಶದ ಅತ್ಯುನ್ನತ  ನ್ಯಾಯ ಸ್ಥಾನ  ಹೇಳಿದೆ.

ಮಹಾತ್ಮಾ ಗಾಂಧಿ ಅವರಿಗೆ   ಭಾರತ ರತ್ನ   ಪುರಸ್ಕಾರ  ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ  ಸೂಚನೆ ನೀಡಬೇಕೆಂದು ಸಲ್ಲಿಸಿದ್ದ ಆರ್ಜಿಯನ್ನು  ಸುಪ್ರೀಂ ಕೋರ್ಟ್ ಶುಕ್ರವಾರ  ವಜಾಗೊಳಿಸಿದೆ.

ಈ  ವಿಷಯದಲ್ಲಿ   ಕೇಂದ್ರ ಸರ್ಕಾರಕ್ಕೆ  ಇಂತಹ  ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.   ಗಾಂಧಿ ಅವರನ್ನು  ಜನರು   ಮಹೋನ್ನತ ಸ್ಥಾನದಲ್ಲಿರಿಸಿ. ರಾಷ್ಟ್ರಪಿತ ಎಂದು ಕರೆಯುತ್ತಾರೆ ಎಂದು  ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ  ಅಭಿಪ್ರಾಯ ಪಟ್ಟರು.   ಗಾಂಧಿಜೀ  ಮಹಾನ್ ವ್ಯಕ್ತಿ,  ಅವರಿಗಿರುವ ಅನನ್ಯತೆ ಅತ್ಯಂತ ದೊಡ್ಡದು ಎಂದು ಹೇಳಿದರು.

ದೇಶದಲ್ಲಿ  ಭಾರತರತ್ನ ಪುರಸ್ಕಾರ ಅತ್ಯುನ್ನತ ನಾಗರೀಕ ಪುರಸ್ಕಾರ. ಆದರೆ,  ಭಾರತ ರತ್ನ  ಪುರಸ್ಕಾರ ಕ್ಕಿಂತ ಗಾಂಧೀಜಿ ಹೊಂದಿರುವ ಅನನ್ಯತೆ  ಮಹೋನ್ನತವಾದದ್ದು.   ಈ ಹಿಂದೆ  ಈ  ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್  ಗಳನ್ನು   ನ್ಯಾಯಾಲಯ ತಿರಸ್ಕರಿಸಿದೆ. ಗಾಂಧಿಜೀಗೆ  ಭಾರತ ರತ್ನ ನೀಡುವುದೆಂದರೆ ಅವರನ್ನು,  ಅವರ ಸೇವೆಗಳನ್ನು ಕಡಿಮೆ ಅಂದಾಜು ಮಾಡಿದಂತಾಗುತ್ತದೆ  ಎಂದು  ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

 

Leave a Comment